KSRTC, BMTC: ಖಾಸಗಿ ಏಜೆನ್ಸಿಗಳಿಂದ ಚಾಲಕರ ನೇಮಕ ಪ್ರಕ್ರಿಯೆ- ಟೆಂಡರ್‌ಗೆ ಆಹ್ವಾನ, ಮಾಹಿತಿ ತಿಳಿಯಿರಿ
ಬೆಂಗಳೂರು, ಡಿಸೆಂಬರ್ 9: ತೀವ್ರ ಸಿಬ್ಬಂದಿ ಕೊರತೆಯಿಂದ ಬಸ್ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಇತ್ತೀಚೆಗೆ 1,000 ಬಸ್ ಚಾಲಕರನ್ನು ಒದಗಿಸಲು ಖಾಸಗಿ ಏಜೆನ್ಸಿಗಳಿಗೆ ಟೆಂಡರ್ ಆಹ್ವಾನಿಸಿದೆ.
ಪ್ರಸ್ತುತ 6,800 BMTC ಬಸ್‌ಗಳಲ್ಲಿ 5,700 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇದು ಮುಖ್ಯವಾಗಿ ಚಾಲಕರ ಕೊರತೆಯಿಂದ ಉಂಟಾಗಿದೆ. ಗುತ್ತಿಗೆ ಆಧಾರದ ಮೇಲೆ ನಡಯುತ್ತಿರುವ ಇ-ಬಸ್‌ಗಳು ಖಾಸಗಿ ಗುತ್ತಿಗೆ ಚಾಲಕರನ್ನು ಹೊಂದಿವೆ. ಇದು ಖಾಸಗೀಕರಣದ ಯೋಜನೆಯ ಭಾಗವಾಗಿದೆ ಎಂದು ಅನೇಕ ಉದ್ಯೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ನೌಕರರ ಕಾಯಂ ನೇಮಕಾತಿಗೆ ಸರ್ಕಾರ ಅವಕಾಶ ನೀಡದ ಕಾರಣ ನಮಗೆ ಪರ್ಯಾಯ ಮಾರ್ಗವಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

'ಮುಖ್ಯವಾಗಿ ಕೋವಿಡ್-19 ರ ನಂತರ ಸಿಬ್ಬಂದಿಯ ತೀವ್ರ ಕೊರತೆಯಿದೆ. ಮುಷ್ಕರದಲ್ಲಿ ಭಾಗವಹಿಸಿದ ನಂತರ ಹಲವರನ್ನು ವಜಾಗೊಳಿಸಲಾಗಿದೆ. ನಾವು ಈಗ ಹೆಚ್ಚಿನ ಬಸ್‌ಗಳನ್ನು ಪಡೆಯುತ್ತಿದ್ದೇವೆ. ರಾತ್ರಿಗಳಲ್ಲಿ ಅವುಗಳನ್ನು ನಿರ್ವಹಿಸಲು ಸಿಬ್ಬಂದಿ ಅಗತ್ಯವಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
'ಆಯ್ಕೆಯಾದ ಏಜೆನ್ಸಿಯು ಪ್ರತಿ BMTC ವಲಯಕ್ಕೆ 200 ಚಾಲಕರನ್ನು ಒದಗಿಸಲಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ವಲಯಗಳನ್ನು ಬಿಎಂಟಿಸಿ ಹೊಂದಿದೆ. ಆಯ್ಕೆಯಾದ ಚಾಲಕರು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅವರು ಮಾನ್ಯ ಬ್ಯಾಡ್ಜ್‌ನೊಂದಿಗೆ ಎರಡು ವರ್ಷಗಳ HPV/HTV ಪರವಾನಗಿಯನ್ನು ಹೊಂದಿರಬೇಕು' ಎಂದು ಬಿಎಂಟಿಸಿ ಹೇಳಿದೆ.

'ವ್ಯಕ್ತಿಯ ವಯಸ್ಸು 50 ವರ್ಷಕ್ಕಿಂತ ಹೆಚ್ಚಿರಬಾರದು. ವರ್ಕ್ ಆರ್ಡರ್ ನೀಡಿದ 15 ದಿನಗಳಲ್ಲಿ ಏಜೆನ್ಸಿ ಚಾಲಕರನ್ನು ನೀಡಬೇಕು. ಗುತ್ತಿಗೆ ಅವಧಿ 11 ತಿಂಗಳು ಇರುತ್ತದೆ,' ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂದಿನ ತಿಂಗಳು ಟೆಂಡರ್ ಅಂತಿಮಗೊಳ್ಳುವ ಸಾಧ್ಯತೆ ಇದೆ.
'ಆಯ್ಕೆಯಾದ ಚಾಲಕರನ್ನು BMTC ನಡೆಸುವ ಚಾಲನಾ ಕೌಶಲ್ಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಅನುತ್ತೀರ್ಣರಾದವರನ್ನು ಪರಿಗಣಿಸಲಾಗುವುದಿಲ್ಲ. ಏಜೆನ್ಸಿಯು ವೈಯಕ್ತಿಕ ವಿವರಗಳ ರಿಜಿಸ್ಟರ್ ಅನ್ನು ನಿರ್ವಹಿಸಬೇಕು. ಅಪರಾಧ/ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಚಾಲಕರನ್ನು ಏಜೆನ್ಸಿ ನಿಯೋಜಿಸುವುದಿಲ್ಲ. ಯಾವುದೇ ಸಮಯದಲ್ಲಿ, ಹೊರಗುತ್ತಿಗೆ ಚಾಲಕರು ಕಾರ್ಯಕುಶಲತೆ ಸರಿಯಾಗಿಲ್ಲವೆಂದು BMTC ತೀರ್ಮಾನಿಸಿದರೆ, ತಕ್ಷಣದ ಬದಲಿಗಾಗಿ ಒತ್ತಾಯಿಸುವ ಹಕ್ಕನ್ನು ಅದು ಕಾಯ್ದಿರಿಸುತ್ತದೆ' ಎಂದು ಟೆಂಡರ್ ಪ್ರತಿಗಳು ಹೇಳುತ್ತವೆ.
ಅಗತ್ಯವಿರುವ ಸಂಖ್ಯೆಯ ಚಾಲಕರನ್ನು ಒದಗಿಸುವಲ್ಲಿ ಏಜೆನ್ಸಿಯು ತಪ್ಪಿದ್ದಲ್ಲಿ, 30- ದಿನದ ಸೂಚನೆಯನ್ನು ನೀಡುವ ಮೂಲಕ ಒಪ್ಪಂದವನ್ನು ಮುಕ್ತಾಯಗೊಳಿಸಲಾಗುತ್ತದೆ. ಚಾಲಕರು ನಿಗದಿತ ನಿರ್ಗಮನಕ್ಕೆ 30 ನಿಮಿಷಗಳ ಮೊದಲು ಕರ್ತವ್ಯಕ್ಕೆ ಹಾಜರಾಗಬೇಕು. BMTC ಒಪ್ಪಿಗೆಯಿಲ್ಲದೆ ಏಜೆನ್ಸಿ ಚಾಲಕರನ್ನು ಬದಲಾಯಿಸಬಾರದು.

350 ಖಾಸಗಿ ಚಾಲಕರನ್ನು ನೇಮಿಸಿಕೊಂಡ ಕೆಎಸ್‌ಆರ್‌ಟಿಸಿ
ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಕೆಎಸ್‌ಆರ್‌ಟಿಸಿ ಇತ್ತೀಚೆಗೆ ಮೂರು ಖಾಸಗಿ ಏಜೆನ್ಸಿಗಳಿಗೆ 350 ಚಾಲಕರನ್ನು ಪೂರೈಸಲು ವರ್ಕ್ ಆರ್ಡರ್ ನೀಡಿದೆ.
ಈ ಚಾಲಕರು ವಾರದಲ್ಲಿ ಕರ್ತವ್ಯಕ್ಕೆ ಸೇರಲಿದ್ದು, ಮಂಗಳೂರು, ಚಾಮರಾಜನಗರ, ಉಡುಪಿ, ಪುತ್ತೂರು ಮತ್ತು ರಾಮನಗರ ವಿಭಾಗಗಳಲ್ಲಿ ನಿಯೋಜಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಎಂಡಿ ವಿ ಅನ್ಬು ಕುಮಾರ್ ಹೇಳಿದರು.
ಮಾರ್ಚ್ ವೇಳೆಗೆ ಸುಮಾರು 600 ಹೊಸ ಬಸ್‌ಗಳನ್ನು ಪಡೆಯಲಿದ್ದೇವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದು ಸೇವೆಗಳನ್ನು ಸುಧಾರಿಸುತ್ತದೆ ಎಂದು ಕುಮಾರ್ ತಿಳಿಸಿದರು. ಕೆಎಸ್‌ಆರ್‌ಟಿಸಿ ರಾಜ್ಯಾದ್ಯಂತ ತನ್ನ ಬಸ್‌ಗಳನ್ನು ಓಡಿಸಲು 77 ನಿವೃತ್ತ ಚಾಲಕರನ್ನೂ ನೇಮಿಸಿಕೊಂಡಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್‌ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ!












Click it and Unblock the Notifications