KSRTC Electric Bus: ಎಲೆಕ್ಟ್ರೀಕ್ 50 ಎಸಿ ಬಸ್‌ಗಳ ಅಂತರ್ ನಗರ ಸಂಚಾರಕ್ಕೆ ಚಾಲನೆ
ಬೆಂಗಳೂರು, ಜನವರಿ 01: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ)ವು ಅಂತರ ನಗರ ಎಲೆಕ್ಟ್ರಿಕ್ ಎಸಿ ಬಸ್ ಸೇವೆ ಪರಿಚಯಿಸಲಿದೆ. ಮುಂದಿನ ಕೆಲವೇ ದಿನಗಳಲ್ಲಿ 50 ಅಂತರ್ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳು ಕಾರ್ಯಾಚರಣೆ ನಡೆಸಲಿವೆ.
ಅಂತರ್ ನಗರ ಹವಾನಿಯಂತ್ರಿತ ವಿದ್ಯುತ್ ಬಸ್ ಪ್ರಾಯೋಗಿಕ ಚಾಲನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಶನಿವಾರ ಚಾಲನೆ ನೀಡಿದರು. ಭಾರತ ಸರ್ಕಾರವು ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳು ಆದಷ್ಟು ಶೀಘ್ರವೇ ಸೇವೆ ನೀಡಲಿವೆ. ಇದಾದ ಬಳಿಕ ಸಾರ್ವಜನಿಕರು ಒಂದು ನಗರದಿಂದ ಮತ್ತೊಂದು ನಗರಕ್ಕೆ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಸಂಚರಿಸಬಹುದಾಗಿದೆ.
ಎಲೆಕ್ಟ್ರಿಕ್ ಬಸ್‌ಗೆ ಹಸಿರು ಬಾವುಟ ತೋರುವ ಜೊತೆಗೆ ಅಪಘಾತದಲ್ಲಿ ಮೃತಪಟ್ಟ ಚಾಲಕನ ಕುಟುಂಬಕ್ಕೆ ಪರಿಹಾರ ವಿಮಾ ಸೌಲಭ್ಯದ ರೂ.1 ಕೋಟಿ ಚೆಕ್ ನೀಡುವುದು. ಅಂತರ್ ನಿಗಮ ವರ್ಗಾವಣೆ 1013 ನೌಕರರಿಗೆ ವರ್ಗಾವಣೆ ಆದೇಶ ನೀಡುವ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ನಿಗಮದ ಅಂತರಿಕ ನಿಯತಕಾಲಿಕ 'ಸಾರಿಗೆ ಸಂಪದ' ಅನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು ಎಂದು ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳು ತಿಳಿಸಿದರು.

ನಿಗಮವು ತನ್ನ ವಿದ್ಯುತ್ ವಾಹನಗಳಿಗೆ ಸ್ಪರ್ಧೆಯ ಮೂಲಕ ಸಾರ್ವಜನಿಕರಿಂದ ಸ್ವೀಕರಿಸಿದ ಹೆಸರುಗಳ ಮೂಲಕ ಇವಿ ಪವರ್ ಪ್ಲಸ್' ಟ್ಯಾಗ್ ಲೈನ್' ಅತ್ಯುತ್ತಮ ಅನುಭವ' ಎಂದು ಹೆಸರಿಸಲಾಗಿದೆ. ಪ್ರಾಯೋಗಿಕ ಯಶಸ್ವಿ ಕಾರ್ಯಾಚರಣೆಯಲ್ಲಿ ಇವಿ ಬಸ್‌ಗಳು ಬೆಂಗಳೂರಿನಿಂದ - ಮೈಸೂರು, ಬೆಂಗಳೂರು -ಮಡಿಕೇರಿ, ಬೆಂಗಳೂರು -ವಿರಾಜಪೇಟೆ, ಬೆಂಗಳೂರು- ದಾವಣಗೆರೆ, ಬೆಂಗಳೂರು- ಶಿವಮೊಗ್ಗ ಹಾಗೂ ಬೆಂಗಳೂರು -ಚಿಕ್ಕಮಗಳೂರು ಮಾರ್ಗಗಳಲ್ಲಿ ಕಾರ್ಯಚರಣೆಗೊಳಿಸಲು ಯೋಜಿಸಲಾಗಿದೆ ಎಂದರು.
ವಿದ್ಯುತ್ ವಾಹನಗಳ ಚಾರ್ಚಿಂಗ್ ಕೇಂದ್ರವನ್ನು ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ. ಅಲ್ಲದೇ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರುಗಳಲ್ಲಿ ಚಾರ್ಚಿಂಗ್ ಕೇಂದ್ರ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ.
ಮೃತ ಸಿಬ್ಬಂದಿಗೆ ರೂ.1 ಕೋಟಿ ಚೆಕ್ ವಿತರಣೆ
ನಿಗದಮ ಸಿಬ್ಬಂದಿ ರೂ.1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ ರೂ 50 ಲಕ್ಷಗಳ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ರವರಿಂದ ವಾರ್ಷಿಕ ರೂ.885/- ಪ್ರೀಮಿಯಂ (ನೌಕರರಿಂದ) ಪಾವತಿಯ ಮೇರೆಗೆ ರೂ.50 ಲಕ್ಷಗಳ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ನಿಗಮದ ಚಾಲಕ ಜೆ.ಎಸ್. ಉಮೇಶ್ (1113) ಚಿತ್ರದುರ್ಗ ಘಟಕ, ಚಿತ್ರದುರ್ಗ ವಿಭಾಗರದವರು ಅಪಘಾತದಲ್ಲಿ ಮರಣ ಹೊಂದಿದ್ದಾರೆ. 35 ವರ್ಷದ ಉಮೇಶ್ ಅವರು 8 ವರ್ಷ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಇಬ್ಬರು ಮಕ್ಕಳು, ಪತ್ನಿ ಇದ್ದು, ಆ ಕುಟುಂಬದ ಜೀವನ ನಿರ್ವಹಣೆಗೆ ನೂತನ ವಿಮಾ ಯೋಜನೆಯಡಿಯಲ್ಲಿ ಅಪಘಾತ ಪರಿಹಾರ ಧನ ರೂ.1 ಕೋಟಿ ಚೆಕ್ ನೀಡಲಿದ್ದೇವೆ ಎಂದು ತಿಳಿಸಿದರು.
ಇಂದು 1013 ಸಿಬ್ಬಂದಿಯ ಅಂತರ ನಿಗಮ ವರ್ಗಾವಣಾ ಪಟ್ಟಿ ಪ್ರಕಟಿಸಲಾಗಿದೆ. ಸಾಂಕೇತಿಕವಾಗಿ 03 ಸಿಬ್ಬಂದಿಗೆ ವರ್ಗಾವಣಾ ಪತ್ರ ನೀಡಲಾಗುತ್ತದೆ. ಇನ್ನು ಬಿಡುಗಡೆಗೊಂಡ 'ಸಾರಿಗೆ ಸಂಪದ' ನಿಯತಕಾಲಿಕೆ ನಿಗಮದ ಕಾರ್ಯಚಟುವಟಿಕೆಗಳು, ಜಾರಿ ಗೊಳಿಸಲಾದ ಕಾರ್ಮಿಕ ಕಲ್ಯಾಣ ಯೋಜನೆಗಳು, ವಿನೂತನ ಕಾರ್ಯಕ್ರಮ, ನೂತನ ಅವಿಷ್ಕಾರ, ವಿಷಯಗಳನ್ನು ಒಳಗೊಂಡಿದೆ.












Click it and Unblock the Notifications