ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ನೇಮಕಾತಿಗೆ ಮತ್ತೊಂದು ಅಧಿಸೂಚನೆ !

|
Google Oneindia Kannada News

ಬೆಂಗಳೂರು, ಜನವರಿ 28: ಪ್ರಸಕ್ತ ಸಾಲಿನಲ್ಲಿ ಪದವಿ ಮುಗಿಸಿದವರಿಗೆ ಸಂತಸದ ಸುದ್ದಿ ! ರಾಜ್ಯದಲ್ಲಿ 545 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ನೇಮಕಾತಿಗಾಗಿ ಪೊಲೀಸ್ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ. ಫೆಬ್ರವರಿ 22 ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ಪೊಲೀಸ್ ಇಲಾಖೆ ನಿಗದಿಯಾಗಿದೆ. ಬೆನ್ನಲ್ಲೇ ಪ್ರಸಕ್ತ ಸಾಲಿನಲ್ಲಿ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿ ಮತ್ತೊಂದು ಪೊಲೀಸ್ ಸಬ್‌ಇನ್ಸ್ಪೆಕ್ಟರ್ ನೇಮಕಾತಿ ಆದೇಶ ಅತಿ ಶೀಘ್ರದಲ್ಲಿಯೇ ಹೊರಬೀಳಲಿದೆ.

ಪಿಎಸ್ಐ ನೇಮಕಾತಿ ಸಂಬಂಧ ಎರಡನೇ ಅಧಿಸೂಚನೆಯಲ್ಲಿ ಎಷ್ಟು ಹುದ್ದೆಗಳು, ಅದಲ್ಲಿ ಸೇವಾ ನಿರತರಿಗೆ ಎಷ್ಟು ಹುದ್ದೆಗಳು ಎಂಬ ಅಧಿಕೃತ ಮಾಹಿತಿ ಫೆಬ್ರವರಿ 22 ರಂದು ಪೊಲೀಸ್ ನೇಮಕಾತಿ ವಿಭಾಗದಿಂದ ಅಧಿಕೃತವಾಗಿ ಹೊರ ಬೀಳಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪಿಎಸ್ಐ ನೇಮಕಾತಿ ಅಧಿಸೂಚನೆಯಲ್ಲಿ ಪ್ರಸಕ್ತ ಸಾಲಿನ 2020- 21 ಶೈಕ್ಷಣಿಕ ವರ್ಷದಲ್ಲಿ ಪದವಿ ಮುಗಿಸಿದವರಿಗೆ ಅವಕಾಶ ನೀಡಿಲ್ಲ. ಈ ಬಗ್ಗೆ ಸಾಕಷ್ಟು ಅಭ್ಯರ್ಥಿಗಳು ದೂರು ನೀಡಿದ್ದರು. ಅಲ್ಲದೇ ಸೇವಾ ನಿರತರಿಗೆ ಪಿಎಸ್ ಐ ಹುದ್ದೆ ನೇಮಕ ವಿಚಾರವಾಗಿಯೂ ಪ್ರಸಕ್ತ ಸಾಲಿನ ನೇಮಕಾತಿ ಅಧಿಸೂಚನೆಯಿಂದ ತಾಂತ್ರಿಕ ಸಮಸ್ಯೆ ತಲೆದೋರಿತ್ತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಮತ್ತೊಂದು ಪಿಎಸ್ ಐ ನೇಮಕಾತಿ ಅಧಿಸೂಚನೆ ಹೊರಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ವಿದ್ಯಾರ್ಥಿಗಳಿಗೆ ಆಗಲಿದ್ದ ಅನ್ಯಾಯ

ವಿದ್ಯಾರ್ಥಿಗಳಿಗೆ ಆಗಲಿದ್ದ ಅನ್ಯಾಯ

ವಿದ್ಯಾರ್ಥಿಗಳಿಗೆ ಆಗಲಿದ್ದ ಅನ್ಯಾಯ ಸರಿಪಡಿಸಲು ಪರಿಷ್ಕೃತ ಪಿಎಸ್ಐ ನೇಮಕಾತಿ ಆದೇಶ ಹೊರಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಈ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ನೇಮಕಾತಿ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮಹತ್ವದ ಟ್ವೀಟ್ ಮಾಡಿದ್ದಾರೆ. ಪಿಎಸ್ ಐ ನೇಮಕಾತಿ ಸಂಬಂಧ ಮತ್ತೊಂದು ನೇಮಕಾತಿ ಆದೇಶ ಅತಿ ಶೀಘ್ರದಲ್ಲಿಯೇ ಹೊರಬೀಳಲಿದೆ. ನಾವು ಮತ್ತಷ್ಟು ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ. ಕಟ್‌ ಅಫ್ ಡೇಟ್‌ ನ್ನು ಏಪ್ರಿಲ್ 1, 2021 ನ್ನು ಪರಿಗಣಿಸಲಾಗುವುದು. ಫೆಬ್ರವರಿ 22 , 2021 ರಂದು ಈ ಕುರಿತ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಪೊಲೀಸ್ ಮಹಾನಿರ್ದೆಶಕರು ಟ್ವೀಟ್ ಮಾಡಿದ್ದಾರೆ.

ಪೊಲೀಸ್ ಮಹಾ ನಿರ್ದೇಶಕರ ಈ ಟ್ವೀಟ್

ಪೊಲೀಸ್ ಮಹಾ ನಿರ್ದೇಶಕರ ಈ ಟ್ವೀಟ್

ಪೊಲೀಸ್ ಮಹಾ ನಿರ್ದೇಶಕರ ಈ ಟ್ವೀಟ್ ಹಿನ್ನೆಲೆ ಕೆದರಿಕಾಗ ಇತ್ತೀಚೆಗೆ ಪಿಎಸ್ಐ ನೇಮಕಾತಿ ಸಂಬಂಧ ಹೊರಡಿಸಿದ್ದ ಅಧಿಸೂಚನೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆ ತಲೆದೋರಿತ್ತು. ಹೀಗಾಗಿ ಸೇವಾ ನಿರತ ಪೊಲೀಸ್ ಸಿಬ್ಬಂದಿ ಕಟ್ ಆಪ್ ಡೇಟ್ ನ್ನು ಬದಲಿಸುವಂತೆ ಕೋರಿದ್ದರು. ಅಲ್ಲದೇ ಕರೋನಾ ಹಿನ್ನೆಲೆಯಲ್ಲಿ ಪರೀಕ್ಷೆಗಳು ಮುಂದೂಡಿ ಪ್ರಸಕ್ತ ಸಾಲಿನಲ್ಲಿ ಪದವಿ ಮುಗಿಸಿದವರೂ ಪಿಎಸ್ಐ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ ವಂಚಿತರಾಗಿದ್ದರು. ಈ ಅನ್ಯಾಯ ಸರಿಪಡಿಸಲು ಪಿಎಸ್ಐ ನೇಮಕಾತಿ ಸಂಬಂಧ ಮತ್ತೊಂದು ಆಧಿಸೂಚನೆ ಹೊರಡಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.

ಪ್ರಸಕ್ತ ಸಾಲಿನ 545 ಪಿಎಸ್ಐಗಳ ನೇಮಕಾತಿ

ಪ್ರಸಕ್ತ ಸಾಲಿನ 545 ಪಿಎಸ್ಐಗಳ ನೇಮಕಾತಿ

ಪ್ರಸಕ್ತ ಸಾಲಿನ 545 ಪಿಎಸ್ಐಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಫೆ. 22. 2021 ಕ್ಕೆ ಸೀಮಿತಗೊಳಿಸಲಾಗಿದೆ. ಹೀಗಾಗಿ ಸೇವಾ ನಿರತ ಪೊಲೀಸ್ ಸಿಬ್ಬಂದಿ ಹಾಗೂ ಪ್ರಸಕ್ತ ಸಾಲಿನ ಪದವಿ ಪೂರ್ಣಗೊಳಿಸಲಿರುವ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಹೊಸ ನೇಮಕಾತಿ ಆದೇಶ ಹೊರಡಿಸಲು ಪೊಲೀಸ್ ಇಲಾಖೆ ತಿರ್ಮಾನಿಸಿದೆ ಎಂದು ಗೊತ್ತಾಗಿದೆ.

ಪರಿಷ್ಕೃತ ಹೊಸ ಪಿಎಸ್ಐ ನೇಮಕಾತಿ

ಪರಿಷ್ಕೃತ ಹೊಸ ಪಿಎಸ್ಐ ನೇಮಕಾತಿ

ಹೀಗಾಗಿ ಪರಿಷ್ಕೃತ ಹೊಸ ಪಿಎಸ್ಐ ನೇಮಕಾತಿ ಆಧಿಸೂಚನೆ ಹೊರ ಬೀಳಬಹುದು. ಇಲ್ಲವೇ ಈಗಾಗಲೇ ಪಿಎಸ್ಐ ನೇಮಕಾತಿ ಸಂಬಂಧ ಕಟ್ ಅಫ್ ಡೇಟ್ ನ್ನು ಬದಲಿಸಿ ಪ್ರಸಕ್ತ ಸಾಲಿನಲ್ಲಿ ಪದವಿ ಮುಗಿಸಿದವರು ಹಾಗೂ ಸೇವಾ ನಿರತ ಪೊಲೀಸ್ ಸಿಬ್ಬಂದಿ ಕೂಡ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬಹುದು. ಈ ಕುರಿತು ಸ್ಪಷ್ಟ ಮಾಹಿತಿ ಫೆ. 22 ರಂದು ಹೊರ ಬೀಳಲಿರುವ ನೇಮಕಾತಿ ಅಧಿಸೂಚನೆಯಿಂದ ಗೊತ್ತಾಗಲಿದೆ.

English summary
KSP PSI anther Recruitment notification 2021: KSP has released a notification for recruitment to the post of Police Sub Inspector Civil Posts. Check educational qualification, age limit, salary, qualification and process here,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X