KuRSi ಸರ್ಕಾರದ ಲೆಕ್ಕಾಚಾರ ಬಿಚ್ಚಿಟ್ಟ ಕೆ.ಎಸ್.ಈಶ್ವರಪ್ಪ ಟ್ವೀಟ್!

ಬೆಂಗಳೂರು, ಜುಲೈ 23 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ನಿರ್ಣಯದ ಮೇಲೆ ಕಳೆದ ಮೂರು ದಿನಗಳಿಂದ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷ ಬಿಜೆಪಿ ಸದಸ್ಯರ ತಾಳ್ಮೆಯನ್ನು ಆಡಳಿತ ಪಕ್ಷ ಪರೀಕ್ಷೆ ಮಾಡುತ್ತಿದೆ.

ಗುರುವಾರ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತದ ನಿರ್ಣಯ ಮಂಡನೆ ಮಾಡಿದ್ದರು. ಗುರುವಾರ, ಶುಕ್ರವಾರ, ಸೋಮವಾರ ರಾತ್ರಿ 11.45ರ ತನಕ ಕಲಾಪ ನಡೆದರೂ ಆಡಳಿತ ಪಕ್ಷದ ಸದಸ್ಯರ ಭಾಷಣ ಪೂರ್ಣವಾಗಿಲ್ಲ.

ಬಹುಮತ ಕಳೆದುಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇಂದು ಬೀಳುತ್ತದೆ, ನಾಳೆ ಬೀಳುತ್ತದೆ ಎಂದು ಪ್ರತಿಪಕ್ಷ ಬಿಜೆಪಿ ಕಾಯುತ್ತಿದೆ. ಆಡಳಿತ ಪಕ್ಷದ ಸದಸ್ಯರು ಮಾತನಾಡುವಾಗ ಯಾವುದೇ ಗದ್ದಲ ಮಾಡದೇ ತಾಳ್ಮೆಯಿಂದ ಕುಳಿತುಕೊಂಡಿದೆ.

ಮತ್ತೊಂದು ಕಡೆ ಸಾಮಾಜಿಕ ಜಾಲತಾಣದ ಮೂಲಕ ಆಡಳಿತ ಪಕ್ಷದ ನಡೆಯನ್ನು ಲೇವಡಿ ಮಾಡುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಟ್ವೀಟರ್‌ ವಾರ್ ನಡೆಯುತ್ತಿದೆ. ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಮೈತ್ರಿ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.

ಕೆ.ಎಸ್.ಈಶ್ವರಪ್ಪ ಟ್ವೀಟ್

ಕೆ.ಎಸ್.ಈಶ್ವರಪ್ಪ ಟ್ವೀಟ್

ಕೆ. ಎಸ್. ಈಶ್ವರಪ್ಪ ಟ್ವೀಟ್ ಹೀಗಿದೆ

'ನಾನು ರಾಜಕೀಯದಲ್ಲಿ ಸುಳ್ಳೇ ಹೇಳಿಲ್ಲ - ಸಿದ್ದರಾಮಯ್ಯ

'ನಾನು ಅಧಿಕಾರಕ್ಕಾಗಿ ಕುರ್ಚಿಗೆ ಅಂಟಿಕೊಂಡು ಕೂತಿಲ್ಲ - ಕುಮಾರಸ್ವಾಮಿ

KuRSi - Kumaraswamy (Ku), Rameshkumar (R), Siddaramaiah (Si).

ಏನಾರ ಚರ್ಚೆ ಮಾಡಿ ಜನ ನೋಡುತ್ತಾ ಇದ್ದಾರೆ

ಏನಾರ ಚರ್ಚೆ ಮಾಡಿ ಜನ ನೋಡುತ್ತಾ ಇದ್ದಾರೆ

ಮತ್ತೊಂದು ಟ್ವೀಟ್‌ನಲ್ಲಿ ಕೆ. ಎಸ್. ಈಶ್ವರಪ್ಪ

1.ಮಾನ್ಯ ಸಭಾಧ್ಯಕ್ಷರೇ
2. ನಾವು ಇನ್ನೂ ಬಹಳ ಚರ್ಚೆ ಮಾಡೋದಿದೆ
3.ದಯವಿಟ್ಟು ಅವಕಾಶ ಮಾಡಿಕೊಡಿ
4. ಸಂಜೆ ಆಗುತ್ತಲೇ, ಮನೆಗೆ ಹೋಗ್ಬೇಕು

(ಕಂಪ್ಲಿ ಗಣೇಶ್ ಬಿಟ್ಟು)

ಇಷ್ಟು ಬಿಟ್ಟು ಇವತ್ತು ಆದರೂ ಏನಾರ ಚರ್ಚೆ ಮಾಡಿ. ರಾಜ್ಯದ ಜನ ನೋಡುತ್ತಾ ಇದ್ದಾರೆ ಎಂದು ಲೇವಡಿ ಮಾಡಿದ್ದಾರೆ.

 ಡ್ರಾಮ ಸಾಕು ನಡೆಯಿರಿ

ಡ್ರಾಮ ಸಾಕು ನಡೆಯಿರಿ

ಕರ್ನಾಟಕ ಬಿಜೆಪಿ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದ್ದು ಒಂದು ವರ್ಷದಿಂದ ನಿಮ್ಮ ದುರಾಡಳಿತವನ್ನು ತಡೆದುಕೊಂಡು ಸಾಕಾಗಿದೆ ಈಗ ನಿಮ್ಮ ಡ್ರಾಮ ಸಾಕು ನಡಿಯಿರಿ ಎಂದು ಕಾಂಗ್ರೆಸ್ ಪಕ್ಷದ ಟ್ವೀಟ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಮಹಾಶೂರರು ನಾಪತ್ತೆ

ಮಹಾಶೂರರು ನಾಪತ್ತೆ

ಕರ್ನಾಟಕ ಬಿಜೆಪಿ ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿ ಕಾಂಗ್ರೆಸ್‌ ನಾಯಕರ ಕಾಲು ಎಳೆದಿದೆ. ಮಾತನಾಡಬೇಕಿದ್ದ ಮಹಾಶೂರರು ವಿಧಾನಸಭೆಯಲ್ಲಿ ನಾಪತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+