ವಿಧಾನಪರಿಷತ್ ಚುನಾವಣೆಗೆ ಪ್ರೊ.ಭಗವಾನ್ ಸ್ಪರ್ಧೆ

Posted By:
Subscribe to Oneindia Kannada

ಬೆಂಗಳೂರು, ಮೇ 16 : ವಿಚಾರವಾದಿ, ವಿಮರ್ಶಕ ಪ್ರೊಫೆಸರ್ ಕೆ.ಎಸ್. ಭಗವಾನ್ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ವಿಧಾನಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಲಿದ್ದು, ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

'ದಕ್ಷಿಣ ಪದವೀಧರ ಕ್ಷೇತ್ರದಿಂದ ಕೆ.ಎಸ್.ಭಗವಾನ್ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ' ಎಂದು ದಲಿತ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ಶಾಂತರಾಜು ಹೇಳಿದ್ದಾರೆ. 'ವಿಧಾನಪರಿಷತ್‌ನಲ್ಲಿ ವಿಚಾರವಂತರ ಕೊರತೆ ಇದೆ. ಇದನ್ನು ಹೋಗಲಾಡಿಸಲು ದಲಿತ ಪರ ಸಂಘಟನೆಗಳು ಭಗವಾನ್ ಅವರನ್ನು ಕಣಕ್ಕಿಳಿಸುತ್ತಿವೆ' ಎಂದು ಶಾಂತರಾಜು ತಿಳಿಸಿದ್ದಾರೆ. [ಭಗವಾನ್! ಯಾರು? ಏನು? ಎತ್ತ?]

ks bhagawan

ವಿಚಾರವಂತರ ಕೊರತೆ ಇದೆ : ಭಾನುವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಂತರಾಜು ಅವರು, 'ಚಿಂತಕರ ಚಾವಡಿಯಾದ ವಿಧಾನಪರಿಷತ್ ಸರ್ಕಾರಕ್ಕೆ ಸಲಹೆ ನೀಡಬೇಕು. ಆದರೆ, ಪ್ರಸ್ತುತ ಪರಿಷತ್ ಉದ್ಯಮಿಗಳು, ರಿಯಲ್ ಎಸ್ಟೇಟ್ ಏಜೆಂಟರ ತಾಣವಾಗಿದೆ' ಎಂದು ಶಾಂತರಾಜು ಆರೋಪಿಸಿದರು. [ಭಗವಂತಾ ಇದೇನಿದು? ಭಗವಾನ್ ಕೈಯಲ್ಲಿ ಸರಸ್ವತಿ ವಿಗ್ರಹ!]

'ಯಾರಿಗೆ ಮಾತನಾಡಲು ಬರುವುದಿಲ್ಲವೋ ಅವರು ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಆದ್ದರಿಂದ, ಪ್ರಗತಿಪರ ಮನೋಭಾವನೆಯ ಭಗವಾನ್ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ' ಎಂದರು.

4 ಸ್ಥಾನಗಳಿಗೆ ಚುನಾವಣೆ : ದಕ್ಷಿಣ ಪದವೀಧರ, ಪಶ್ಚಿಮ ಶಿಕ್ಷಕ, ವಾಯುವ್ಯ ಪದವೀಧರ, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ನಾಲ್ವರು ವಿಧಾನಪರಿಷತ್ ಸದಸ್ಯರ ಅವಧಿ ಜುಲೈ 4ಕ್ಕೆ ಅಂತ್ಯಗೊಳ್ಳಲಿದೆ, ಅವರಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. [4 ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆ ಘೋಷಣೆ]

ಜೂನ್ 9ರಂದು ಚುನಾವಣೆ : 4 ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಮೇ 16ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಜೂನ್ 9ರಂದು ಮತದಾನ ನಡೆಯಲಿದೆ. ಜೂನ್ 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prof K.S.Bhagavan will contest for Legislative Council election scheduled on June 9, 2016. Bhagavan will contest as independent candidate from South graduate constituency.
Please Wait while comments are loading...