76 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ
ಮಂಡ್ಯ, ಜೂ. 09 : ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 76.62 ಅಡಿಗಳಿಗೆ ಕುಸಿದಿದೆ. 70 ಅಡಿಗಳಿಗೆ ನೀರಿನ ಮಟ್ಟ ತಲುಪಿದರೆ ನಾಲೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಲ್ಲಿ ಗರಿಷ್ಠ 124 ಅಡಿ ನೀರನ್ನು ಸಂಗ್ರಹಿಸಬಹುದಾಗಿದೆ. ಸೋಮವಾರದ ಮಾಹಿತಿಯಂತೆ ಜಲಾಶಯಕ್ಕೆ 544 ಕ್ಯೂಸೆಕ್ ನೀರು ಹರಿದುಬರುತ್ತಿದೆ. ನದಿಗೆ 239 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. [85 ಅಡಿಗೆ ಕುಸಿದ ನೀರಿನ ಮಟ್ಟ]

2014ರ ಜೂನ್‌ನಲ್ಲಿ ಜಲಾಶಯದಲ್ಲಿ 72 ಅಡಿಗಳಷ್ಟು ನೀರಿತ್ತು. ನೀರಿನ ಮಟ್ಟ 70 ಅಡಿಗಳಿಗೆ ಕುಸಿದರೆ ನಾಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ. ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಲ್ಲಾ ನಾಲೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. [ರಾಜ್ಯಕ್ಕೆ ಆಗಮಿಸಿದ ವರುಣ ಆರ್ಭಟಿಸುತ್ತಿಲ್ಲ]
ಅಣೆಕಟ್ಟೆಯ ನಾಲೆಗಳಾದ ವಿಶ್ವೇಶ್ವರಯ್ಯ, ಬಲದಂಡೆ ನಾಲೆ, ಎಡದಂಡೆ ನಾಲೆಗಳು ಮಾತ್ರವಲ್ಲದೆ, ಚಿಕ್ಕದೇವರಾಯ ಸಾಗರ (ಸಿಡಿಎಸ್), ದೇವರಾಯ, ರಾಮಸ್ವಾಮಿ, ರಾಜಪರಮೇಶ್ವರಿ ನಾಲೆಗಳಿಗೂ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ.
ಮೇ 5ರಂದು ಜಲಾಶಯದ ನೀರಿನ ಮಟ್ಟ 85 ಅಡಿಗೆ ಕುಸಿದಿತ್ತು. 68 ಅಡಿಗಳಷ್ಟು ನೀರನ್ನು ಕುಡಿಯುವ ನೀರು ಪೂರೈಕೆ ಮಾಡಲು ಬಳಸಬಹುದಾಗಿದೆ. ವಾಡಿಕೆಯಂತೆ ಜಲಾನಯನ ಪ್ರದೇಶಗಳಲ್ಲಿ ಮಳೆಯಾದರೆ ಜಲಾಶಯ ಭರ್ತಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications