KRS Dam: ಭಾರೀ ಮಳೆ ನಡುವೆ 'ಡೆಡ್ ಸ್ಟೋರೇಜ್' ತಲುಪುತ್ತಾ? KRS ಜಲಾಶಯ, ಇಂದಿನ ಮಟ್ಟ..

ಬೆಂಗಳೂರು ಮೇ 22: ಕರ್ನಾಟಕದಾದ್ಯಂತ ಅಲ್ಲಲ್ಲಿ ಜೋರು ಮಳೆ ಆಗುತ್ತಿದೆ. ಕರಾವಳಿಯಿಂದ ಹಿಡಿದು ಪಶ್ಚಿಮ ಘಟ್ಟಗಳು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳವರೆಗೆ ವಿವಿಧೆಡೆ ಭಾರೀ ಮಳೆ ಆಗುತ್ತಿದೆ. ಈ ಮಳೆ ನಡುವೆಯು ಕೃಷ್ಣ ರಾಜ ಸಾಗರ ಜಲಾಶಯ (KRS Dam) ನೀರಿನ ಮಟ್ಟದಲ್ಲಿ ಬದಲಾವಣೆ ಆಗಿದೆ. ಬುಧವಾರದ ಮಾಹಿತಿ ಪ್ರಕಾರ, ಈ ಜಲಾಶಯದಲ್ಲಿ ನಿರೀಕ್ಷೆಯಷ್ಟು ನೀರಿಲ್ಲ ಎನ್ನಲಾಗಿದೆ. ಹಾಗಾದರೆ ಡೆಡ್ ಸ್ಟೋರೆಜ್, ಎಷ್ಟು ಬಳಕೆಗೆ ಇರುವ ನೀರು, ಒಳ ಮತ್ತು ಹೊರ ಹರಿವಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೃಷ್ಣ ರಾಜ ಸಾಗರ ಜಲಾಶಯದಲ್ಲಿ (KRS Dam) ಬುಧವಾರದ ಮಾಹಿತಿ ಪ್ರಕಾರ 89 ಅಡಿಯಷ್ಟು ನೀರಿದೆ. ಜಲಾಶಯವು ಒಟ್ಟು 124.80 ಅಡಿ ಇದೆ. ಆ ಪೈಕಿ 60 ಅಡಿ ತಲುಪುವವರೆಗೂ ನೀರು ಬಳಕೆ ಮಾಡಬಹುದಾಗಿದೆ. ಸದ್ಯ ಇರುವ (89 ಅಡಿ ನೀರು) ನೀರನ್ನು ಮುಂದಿನ ಎರಡು ತಿಂಗಳು ಬಳಸಬಹುದು. ನಂತರ ಅದು 60 ಅಡಿಗೆ ಇಳಿದರೆ ಅದನ್ನು ಡೆಡ್ ಸ್ಟೋರೇಜ್ ಎಂದು ಪರಿಗಣಿಸಲಾಗುತ್ತದೆ.

KRS Dam Water Levels Drop Despite Heavy Rains in Karnataka Approaching Dead Storage

ಕೊಡಗು, ಮಡಿಕೇರಿ, ಮೈಸೂರು ಸೇರಿದಂತೆ ಕೆಆರ್ಎಸ್ ಜಲಾನಯನ ಪ್ರದೇಶಗಳಲ್ಲಿ ಮಳೆ ಆದರೆ ಸಾಕು ಕೆ.ಆರ್.ಎಸ್ ಡ್ಯಾಂ ಭರ್ತಿಯಾಗುತ್ತದೆ. ಕ್ರಮೇಣ ನೀರಿನ ಒಳಹರಿವು ಹೊರ ಹರಿವಿಗಿಂತ ಹೆಚ್ಚಾಗುತ್ತದೆ. ಆದರೆ ಈ ಭಾರಿ ಇಷ್ಟು ಮಳೆ ಆದರೂ ಸಹಿತ ನಿರೀಕ್ಷೆಯಷ್ಟು ನೀರು ಜಲಾಶಯಕ್ಕೆ ಬಂದಿಲ್ಲ. ಹೀಗಾಗಿ 89 ಅಡಿಯಷ್ಟು ನೀರು ಇದೆ. ಅದು ಮುಂದಿನ ಎರಡು ತಿಂಗಳು ಬಳಕೆ ಆಗುತ್ತದೆ. ಹೀಗೆ ಪೂರ್ವ ಮುಂಗಾರು ಮಳೆ ಮುಂದುವರಿದರೆ ಡ್ಯಾಂ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಾಗಬಹುದು.

ಜಲಾಶಯವು ಒಟ್ಟು 49.45 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಆದರೆ ಸದ್ಯಕ್ಕೆ ಕೆಆರ್ಎಸ್ ಜಲಾಶಯದಲ್ಲಿ 15 ಟಿಎಂಸಿ ನೀರು ಸಂಗ್ರಹವಿದೆ. ನೀರಿನ ಒಳಹರಿವುಗಿಂತ ಹೊರ ಹರಿವು, ಕೆನಾಲ್ ಹಾಗೂ ನದಿಗೆ ಬೀಡುವ ಪ್ರಮಾಣ ಹೆಚ್ಚಾಗಿತ್ತು. ಬೇಸಿಗೆ ಹಿನ್ನೆಲೆ ಜಲಾಶಯಕ್ಕೆ ಬರುವ ಒಳಹರಿವು ಕಡಿಮೆ ಆಗುತ್ತಿದೆ. ಹೀಗಾಗಿ ಜಲಾಶದಲ್ಲಿ ನೀರು ಕಡಿಮೆಯಾಗಿತ್ತು.

KRS Dam Water Levels Drop Despite Heavy Rains in Karnataka Approaching Dead Storage

ಒಳ ಹರಿವು ಹೆಚ್ಚಾಗುವ ನಿರೀಕ್ಷೆ

ಸದ್ಯ ಜಲಾಶಯಕ್ಕೆ 148 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಒಟ್ಟು 549 ಕ್ಯೂಸೆಕ್ ನೀರು ಕುಡಿಯಲು, ನೀರಾವರಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಿಡಲಾಗುತ್ತದೆ. ಹೀಗೆ ಒಳ ಹರಿವು ಕಡಿಮೆ ಆಗಿದ್ದು, ಬಳಕೆ ಹೆಚ್ಚಾಗಿದ್ದರಿಂದ ನೀರಿನ ಸಂಗ್ರಹ ಕುಸಿತಗೊಂಡಿದೆ. ಹೀಗಾಗಿ ನಾಲೆಗೆ ನೀರು ಬಿಡುಗಡೆ ಮಾಡುವುದನ್ನು ನಿಲ್ಲಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೆಆರ್‌ಎಸ್‌ ಜಲಾಶಯದಲ್ಲಿ 80 ಅಡಿಯಷ್ಟು ನೀರಿನ ಸಂಗ್ರಹವಿತ್ತು. 270 ಕ್ಯೂಸೆಕ್ ನೀರು ಹೊರ ಬೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ನಾಲೆಗೆ ನೀರು ಬಿಡುಗಡೆ ಇಲ್ಲ

ಕೆಆರ್‌ಎಸ್ ಜಲಾನಯನ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಉತ್ತಮವಾಗಿ ಮುಂಗಾರು ಮಳೆ ಸುರಿಯುತ್ತಿದೆ. ಈ ಡ್ಯಾಂನಿಂದ ವಿಶ್ವೇಶ್ವರಯ್ಯ ನಾಲೆಗೆ ಹರಿಸುತ್ತಿದ್ದ ನೀರು ನಿಲ್ಲಿಸಲಾಗಿದೆ. ಮೇ 11ರಿಂದ ನಾಲೆಗೆ ಹೊರ ಹರಿವು ಸ್ಥಗಿತಗೊಳಿಸಲಾಗಿದೆ. ಮಳೆ ಆಗುತ್ತಿದ್ದು, ನೀರಿನ ಪ್ರಮಾಣ ಹೆಚ್ಚಾಗಲಿದೆ. ಕಾವೇರಿ ಅವಲಂಬಿತ ಪ್ರದೇಶಗಳಿಗೆ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗೆ ಕೊರತೆ ಆಗುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+