KRS Dam Water Level Today: ನಿರಂತರ ಮಳೆಗೆ ಜಲಾಶಯದಲ್ಲಿ ಒಳಹರಿವು ಹೆಚ್ಚಳ: ಹೊರ ಹರಿವು ಸಾಮಾನ್ಯ, ವಿವರ
ಬೆಂಗಳೂರು, ಜೂನ್ 17: ಕರ್ನಾಟಕ ರಾಜ್ಯಾದ್ಯಂತ ಅಲ್ಲಲ್ಲಿ ಮಳೆ ಆಗುತ್ತಿದೆ. ಮೊದಲಿನಷ್ಟು ಭಾರೀ ಮಳೆ ಆಗಿದ್ದರೂ ಸಹ ಹಗುರದಿಂದ ಸಾಧಾರಣ ಮಳೆಯಂತು ಮುಂದುವರಿದಿದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣ ರಾಜಸಾಗರ ಆಣೆಕಟ್ಟಿನಲ್ಲಿ ಇಂದು (ಜೂನ್ 17) ಸೋಮವಾರ ಒಳಹರಿವು ಹೆಚ್ಚಾಗಿದೆ. ಎಂದಿನಂತೆ ಹೊರ ಹರಿವು ಸಹ ಇದೆ.
ಕಾವೇರಿ ನದಿ ಕೊಳ್ಳದ ಪ್ರದೇಶಗಳಲ್ಲಿ ಮತ್ತು ಜಲಾನಯನ ಭಾಗದಲ್ಲಿ ಸಾಧಾರಣದಿಂದ ಭಾರಿ ಮಳೆ ಮುಂದುವರಿದಿದೆ. ಹೀಗಾಗಿ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಹೊರ ಹರವಿನ ಪ್ರಮಾಣ ಕಡಿಮೆ ಇದೆ. ಇನ್ನೂ ಕೆಲವು ದಿನಗಳ ಕಾಲ ಮಂಡ್ಯ, ಮೈಸೂರು, ಹಾಸನ, ಪಶ್ಚಿಮ ಘಟ್ಟಗಳು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸದ್ಯ ಇಂದು ಜೂನ್ 17ರಂದು ಸೋಮವಾರ ಕೃಷ್ಣ ರಾಜಸಾಗರದಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಆಣೆಕಟ್ಟಿನ ಒಳಹರಿವು ಬರೋಬ್ಬರಿ 2117 ಕ್ಯೂಸೆಕ್ ಹೆಚ್ಚಾಗಿದೆ. ಕಳೆದ ಎರಡು ವಾರಗಳಲ್ಲಿ ಇದು ಅತ್ಯಧಿಕ ಪ್ರಮಾಣದ ಒಳಹರಿವು ಎನ್ನಲಾಗುತ್ತಿದೆ.
ಹೊರ ಹರಿವಿನ ಪ್ರಮಾಣ ಸಾಮಾನ್ಯ
ಜಲಾಶಯದ ಒಟ್ಟು ಮಟ್ಟ 49.452 ಟಿಎಂಸಿ ಆಗಿದ್ದು, ಇಂದಿನ ನೀರಿನ ಸಂಗ್ರಹ ಮಟ್ಟ ಶೇಕಡಾ 28.50ರಷ್ಟು ಹೆಚ್ಚಾಗಿದೆ. ಇನ್ನೂ ಹೊರ ಹರಿವು ಪ್ರಮಾಣದ ಒಟ್ಟು 458 ಕ್ಯೂಸೆಕ್ಸ್ ಇದೆ. ಇದರಲ್ಲಿ ಕಾವೇರಿ ನದಿಗೆ 408 ಕ್ಯೂಸೆಕ್ಸ್ ಎಂದಿನಂತೆ 50 ಕ್ಯೂಸೆಕ್ಸ್ ಬಿಡುಗಡೆ ಮಾಡಲಾಗಿದೆ. ಚಾನಲ್‌ಗೆ 50 ಕ್ಯೂಸೆಕ್ಸ್ ನೀರನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.
ಕಳೆದ ಒಂದು ವಾರದ ಅಂಕಿ ಸಂಖ್ಯೆಗಳನ್ನು ನೋಡಿದರೆ, KRS ನಲ್ಲಿ ನಿರಂತರವಾಗಿ ಒಳಹರಿವು ಹೆಚ್ಚಾಗುತ್ತಿದೆ. ಒಳಹರಿವಿನ ಒಟ್ಟು ಪ್ರಮಾಣದಲ್ಲಿ ಶೇಕಡಾ 20ರಿಂದ 30ರಷ್ಟು ನೀರನ್ನು ಮಾತ್ರ ಹೊರ ಬಿಡಲಾಗುತ್ತಿರುವುದು ಕಂಡು ಬಂದಿದೆ.

ನದಿ ನೀರು ಏರಿಕೆ, ವ್ಯಾಪಕ ಮಳೆ ಮುನ್ಸೂಚನೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಪ್ರಕಾರ, ನಾಪೋಕ್ಲು ನದಿಯ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಯ ಒಳಹರಿವು ಕಡಿಮೆಯಾಗಲಿದೆ. ಮುಂದಿನ ವಾರಾಂತ್ಯದಲ್ಲಿ ಭಾರೀ ಮಳೆಯಿಂದಾಗಿ ನದಿಯಲ್ಲಿ ನೀರು ಮತ್ತೆ ಏರಿಕೆ ಆಗುವ ಸಾಧ್ಯತೆಗಳು ಇವೆ ಎಂದು ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ ಮುಂದಿನ ಮೂರು ದಿನ ಕರಾವಳಿಯ ಮೂರು ಜಿಲ್ಲೆಗಳಿಗೆ ಉತ್ತಮ ಮಳೆ ಮುನ್ಸೂಚನೆ ಇದೆ. ಇದೇ ವೇಳೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ 28 ಜಿಲ್ಲೆಗಳಿಗೂ ಹುಗರದಿಂದ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.












Click it and Unblock the Notifications