KRS Dam: 84 ವರ್ಷದ ಬಳಿಕ ಜೂನ್‌ನಲ್ಲಿ KRS ಡ್ಯಾಂ ಗೇಟ್ ಓಪನ್! 80,000 ಕ್ಯೂಸೆಕ್ ಹೊರಹರಿವು, ಪ್ರವಾಹ
KRS Dam Water Level: ಕರ್ನಾಟಕ ರಾಜ್ಯಾದ್ಯಂತ ವ್ಯಾಪಕ ಮಳೆ ಮುಂದುವರಿದಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ, ಕೆರಳ ಹಾಗೂ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಕಳೆದ ವಾರ ಭಾಗಮಂಡಲ, ತಲಕಾವೇರಿಯಲ್ಲಿ ನಿರಂತರವಾಗಿ ಉತ್ತಮ ಮಳೆ ಆಗಿತ್ತು. ಇದೀಗ ಮತ್ತೆ ಮಳೆ ಅಬ್ಬರ ಜೋರಾದ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ (KRS) ಅಣೆಕಟ್ಟಿನ ಶೇಕಡಾ 90ರಷ್ಟು ಭರ್ತಿಯಾಗಿದೆ. ಒಳಹರಿವು ನಿರಂತರವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ಅಪಾರ ಪ್ರಮಾಣದ ನೀರನ್ನು ಗುರುವಾರ ಸಂಜೆ ಬಿಡುಗಡೆ ಮಾಡಲಾಗಿದೆ. ಪ್ರವಾಹ ಎಚ್ಚರಿಕೆ ನೀಡಲಾಗಿದೆ.
ಹೌದು, ಕೃಷ್ಣರಾಜಸಾಗರ (KRS) ಅಣೆಕಟ್ಟು ಜಲಾಶಯ ವ್ಯಾಪ್ತಿಯಲ್ಲಿ ಸಾಧಾರಣದಿಂದ ಭಾರೀ ಮಳೆ ಮುಂದುವರಿದಿದೆ. ಕಾವೇರಿ ನದಿ ಭರ್ತಿಯಾಗಿದೆ. ಕೆಆರ್‌ಎಸ್ ಡ್ಯಾಂ ಉಕ್ಕಿ ಹರಿಯುತ್ತಿದೆ. ಮುಂಜಾಗ್ರತಾ ದೃಷ್ಟಿಯಿಂದ ಕಾವೇರಿ ನದಿಗೆ 50,000 ಕ್ಯೂಸೆಕ್ ಗೂ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮ (CNNL) ಗುರುವಾರ ತಿಳಿಸಿದೆ.

ಮಂಡ್ಯ, ಮೈಸೂರು, ಮಡಿಕೇರಿ, ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶಗಳ ಸುತ್ತಮುತ್ತಲಿನ ಭಾಗದಲ್ಲಿ ವ್ಯಾಪಕ ಮಳೆ ಮುಂದುವರಿದೆ. ಹೀಗಾಗಿ ಹೆಚ್ಚುವರಿ ಗೇಟ್‌ಗಳನ್ನು ತೆರೆದು ನೀರು ನದಿ ಹಾಗೂ ಕಾಲುವೆಗೆ ಬಿಡುಗಡೆ ಮಾಡಲಾಗಿದೆ. ನದಿ ಪಾತ್ರದ ಜನರಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಸುರಕ್ಷಿತ ಸ್ಥಳಕ್ಕೆ ತೆರಲುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
84 ವರ್ಷಗಳ ನಂತರ ಜೂನ್‌ನಲ್ಲಿ ಡ್ಯಾಂ ಗೇಟ್ ಓಪನ್..
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಂದರೆ ಒಟ್ಟು 84 ವರ್ಷಗಳ ನಂತರ ಮೊದಲ ಬಾರಿಗೆ, ಜೂನ್ 23 ರಂದು ಅಣೆಕಟ್ಟಿನ ಕ್ರೇಸ್ಟ್ ಗೇಟ್‌ಗಳನ್ನು ತೆರೆದು ನೀರು ಬಿಡುಗಡೆ ಮಾಡಲಾಗಿದೆ. ಏಕೆಂದರೆ ಜಲಾನಯನ ಪ್ರದೇಶಗಳಲ್ಲಿ ಜೂನ್ ತಿಂಗಳ ಆರಂಭದಿಂದಲೇ ಉತ್ತಮ ಮಳೆಯಾಗಿದೆ. ಹಿಂದೆ ಜೂನ್ ನಲ್ಲಿ ಮಳೆ ಆರಂಭವಾದರೆ, ನಂತರದ ತಿಂಗಳುಗಳಲ್ಲಿ ಹೆಚ್ಚಿನ ಮಳೆ ಆಗಿ ಡ್ಯಾಂ ತುಂಬುತ್ತಿತ್ತು. ಆನಂತರವೇ ಕೆಆರ್‌ಎಸ್ ಡ್ಯಾಂ ಗೇಟ್ (ಜುಲೈ, ಆಗಸ್ಟ್, ಸೆಪ್ಟಂಬರ್ ವೇಳೆಗೆ) ಓಪನ್ ಮಾಡುತ್ತಿದ್ದೇವೆ. ಇದೀಗ ಭಾರಿ ಮಳೆಗೆ ಋತುವಿನ ಆರಂಭದ ಜೂನ್ ತಿಂಗಳಲ್ಲೇ ಡ್ಯಾಂ ಭರ್ತಿಯಾಗಿದ್ದರಿಂದ ಈ ತಿಂಗಳಲ್ಲೇ ಡ್ಯಾಂ ನಿಂದ ಮೊದಲ ಬಾರಿ ನೀರು ಬಿಡಲಾಗುತ್ತಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
Krishanarajasagara (KRS) Dam is roaring with over 50,000 cusecs of outflows into the Kaveri River. The Cauvery Neeravari Nigam (CNNL) has issued a flood warning alert this evening
— Karnataka Weather (@BengaluruRains_) June 26, 2025
After 84 years & 1st time since Independence, the gates of the dam are opened in June month on June… https://t.co/dj4xiwA1xE
80,000 ಕ್ಯೂಸೆಕ್ ನೀರು ಬಿಡುಗಡೆ ನಿರೀಕ್ಷೆ
ಕಾವೇರಿ ನೀರಾವರಿ ನಿಗಮ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಎಚ್ಚರಿಕೆ ನೀಡಿದೆ. ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುವುದರಿಂದ ಯಾವುದೇ ಕ್ಷಣದಲ್ಲಿ ಸುಮಾರು 50,000 ರಿಂದ 80,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುವುದು ಎಂದು ಹೇಳಿದೆ. ಮಳೆ ಹೀಗೆ ಮುಂದುವರಿದರೆ ಗರಿಷ್ಠ ಪ್ರಮಾಣದದಲ್ಲಿ ಅಂದರೆ 80,000 ಸಾವಿರ ಕ್ಯೂಸೆಕ್ ನೀರು ಬಿಟ್ಟರೂ ಅಚ್ಚರಿ ಇಲ್ಲ ಎನ್ಲಾಗಿದೆ. ಜಲಾಶಯದಲ್ಲಿ ಕಾವೇರಿ ನೀರಿನ ಮಟ್ಟವು ಅದರ ಪೂರ್ಣ ಸಂಗ್ರಹದ (49 TMC) ಹಂತಕ್ಕೆ ಏರುತ್ತದೆ. ಕಾವೇರಿ ನದಿ ಅಕ್ಕಪಕ್ಕದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.
ಕೆಆರ್‌ಎಸ್ ಜಲಾಶಯ ಇಂದಿನ ಮಟ್ಟ
* ಡ್ಯಾಂ ಒಟ್ಟು ಎತ್ತರ: 124 ಅಡಿ
* ನೀರು ಸಂಗ್ರಹ: 120.90 ಅಡಿ
* ಡ್ಯಾಂ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 44.194 ಟಿಎಂಸಿ
* ಒಳಹರಿವು : 46,804 ಕ್ಯೂಸೆಕ್
* ಇಂದಿನ ಹೊರ ಹರಿವು : 55,446 ಕ್ಯೂಸೆಕ್
ಇನ್ನೂ ಮಳೆ ಬರುತ್ತಿರುವ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಇಂದು ರಜೆ ನೀಡಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತಹಶೀಲ್ದಾರ್ ಮತ್ತು ಜಿಲ್ಲಾಡಳಿತ ಮಳೆ ರಜೆ ಘೋಷಣೆ ಮಾಡಿದೆ.












Click it and Unblock the Notifications