KRS Dam: 29000 ಕ್ಯೂಸೆಕ್ ನೀರು ಬಿಡುಗಡೆ, ಡ್ಯಾಂ ಭರ್ತಿಗೆ 3 ಅಡಿ ಬಾಕಿ, ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ

KRS Dam Water Level Today: ರಾಜ್ಯದ ಹಳೇ ಮೈಸೂರು ಭಾಗದ ಜೀವನಾಡಿ, ನಾಲ್ಕಾರು ಜಿಲ್ಲೆಗಳಿಗೆ ಕುಡಿಯುಲು ಹಾಗೂ ನೀರಾವರಿಗೆ ನೀರು ಒದಗಿಸುವ ಕಾವೇರಿ ನೀರಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣ ರಾಜ ಸಾಗರ (KRS Dam) ಜಲಾಶಯ ಒಳಹರಿವು ಹೆಚ್ಚಾದಂತೆ ಹೊರ ಹರಿವು ಕೂಡ ಏರಿಕೆ ಆಗಿದೆ. ಮಂಗಳವಾರ ಸಂಜೆಯಷ್ಟೇ 15000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಮಳೆ ಆಗಮಿಸುವ ಹಿನ್ನೆಲೆ ಒಳಹರಿವು ಮತ್ತಷ್ಟು ಏರಿಕೆ ಆಗುವ ನಿರೀಕ್ಷೆ ಇದೆ.

ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ ಸೇರಿದಂತೆ ಕೆಲವು ಜಿಲ್ಲೆಗಳ ಲಕ್ಷಾಂತರ ಜನರಿಗೆ ಕುಡಿಯಲು ನೀರು ಒದಗಿಸುವ ಪ್ರಮುಖ ನದಿ ಕಾವೇರಿ. ಈ ಕಾವೇರಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿದೆ. ಒಟ್ಟು 124 ಅಡಿ ಎತ್ತರ ಇರುವ ಈ ಜಲಾಶಯ ಮಳೆಗಾಲ ಆರಂಭದ ಮೂರೇ ವಾರಗಳಲ್ಲಿ ಬರೋಬ್ಬರಿ 119 ಅಡಿ ಭರ್ತಿಯಾಗಿದೆ. ಪೂರ್ತಿ ಭರ್ತಿಗೆ 3-4 ಅಡಿ ಮಾತ್ರವೇ ನೀರು ಅಗತ್ಯವಿದೆ.

KRS Dam Flood Alert 29 000 Cusecs of Water Released as Inflow Surges Amid Heavy Rains

29000 ಕ್ಯೂಸೆಕ್ ನೀರು ಹೊರಕ್ಕೆ

ಕಾವೇರಿ ಜಲಾನಯನ ಭಾಗಗಳಲ್ಲಿ ಉತ್ತಮ ಮಳೆ ಆಗಿರುವ ಕಾರಣಕ್ಕೆ ನದಿ ಹಾಗೂ ಜಲಾಶಯದಲ್ಲಿ ಭಾರೀ ನೀರು ಸಂಗ್ರಹವಾಗಿದೆ. ಒಳಹರಿವು ಹೆಚ್ಚಾದಂತೆ ಹೊರ ಹರಿವು ಹೆಚ್ಚಾಗುತ್ತಿದೆ. ಅಗತ್ಯತೆ ಆಧಾರದಲ್ಲಿ ಕಾವೇರಿ ನೀರಾವರಿ ನಿಗಮವು 29000 ಕ್ಯೂಸೆಕ್ ನೀರು ಹೊರ ಬಿಡಲು ನಿರ್ಧರಿಸಿದೆ. ಈ ಸಂಬಂಧ ನದಿ ಪಾತ್ರದ, ಡ್ಯಾಂ ವ್ಯಾಪ್ತಿಯ ಕೆಳಭಾಗದಲ್ಲಿ ವಾಸಿಸುವ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ. ಸುರಕ್ಷಿತ ಸ್ಥಳಕ್ಕೆ ದೌಡಾಯಿಸುವಂತೆ ತಿಳಿಸಲಾಗಿದೆ. ಕಾವೇರಿ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಮನೆ ಮಾಡಿದೆ.

ಕಾವೇರಿ ನೀರಾವರಿ ನಿಗಮದ ಮಾಹಿತಿ ಪ್ರಕಾರ, ಒಳಹರಿವು ಶೇಕಡಾ 100ರಷ್ಟಿದ್ದರೆ, ಅದರಲ್ಲಿ ಶೇಕಡಾ 85ರಷ್ಟು ನೀರನ್ನು ಹೊರ ಹರಿವಿನ ಮೂಲಕ ಹರಿಸಲಾಗುತ್ತದೆ. ಕಾವೇರಿ ನದಿ ಹಾಗೂ ಕಾಲುವೆಗಳಿಗೆ ಬಿಡಲಾಗುತ್ತಿದೆ. ಇಂದು ಜೂನ್ 25ರಂದು ಒಟ್ಟು 44.194 ಟಿಎಂಸಿ ನೀರು ಕೃಷ್ಣ ರಾಜ ಸಾಗರ ಜಲಾಶಯದಲ್ಲಿದೆ. ಈ ಡ್ಯಾಂ 49.452 ಟಿಎಂಸಿ ನೀರು ಸಂಗ್ರಹಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಉತ್ತಮ ಮಳೆಗೆ ಡ್ಯಾಂ ಒಳ-ಹೊರ ಹರಿವು ಏರಿಕೆ..

ಕಳೆದ ಹಲವು ದಿನಗಳಿಂದ ಕೆಆರ್‌ಎಸ್ ಡ್ಯಾಂನಿಂದ ನೀರು ಬಿಡುಗಡೆ ಪ್ರಮಾಣ ಹೆಚ್ಚಾಗುತ್ತಾ ಬಂದಿದೆ. ತಲಾಕಾವೇರಿ, ಬಾಗಮಂಡಲ, ಮಡಿಕೇರಿ, ಕೇರಳ ಭಾಗದ ವಿವಿಧ ಕಡೆಗಳಲ್ಲಿ ಉತ್ತಮ ಮುಂಗಾರು ಮಳೆ ಆಯಿತು. ನಿರಂತರ ಸುರಿದ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಯಿತು. ಕೇವಲ ಕಾವೇರಿ ಮಾತ್ರವಲ್ಲದೇ ಕಾವೇರಿ ಉಪನದಿಗಳಾದ ಕಬಿನಿ, ಹಾರಂಗಿ ನದಿಗಳಲ್ಲೂ ನೀರು ಹೆಚ್ಚಾಗಿದೆ.

ಕರ್ನಾಟಕ ಹವಾಮಾನ ಇಲಾಖೆ ಪ್ರಕಾರ,ಮುಂದಿನ ಕೆಲವು ದಿನಗಳ ಕಾಲ ಶಿವಮೊಗ್ಗ, ಚಿಕ್ಕಮಗಳುರು, ಕೊಡಗು ಭಾಗದಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ. ಕೇರಳ ಭಾಗದಲ್ಲೂ ಮತ್ತೆ ಮಳೆ ಸಕ್ರಿಯವಾಗುವ ಸಾಧ್ಯತೆ ಇದೆ. ಅಂದುಕೊಂಡಂತೆ ಆದರೆ ಮುಂದಿನ ಕೆಲವೇ ದಿನಗಳಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿ ಆಗಲಿದೆ....

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+