KRS Dam: ಒಂದೇ ವರ್ಷದಲ್ಲಿ 3 ಬಾರಿ ಕೆಆರ್‌ಎಸ್ ಭರ್ತಿ, 93 ವರ್ಷದಲ್ಲೇ ದಾಖಲೆ...Dam Water Level
ಬೆಂಗಳೂರು, ಅಕ್ಟೋಬರ್ 26: ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಬೆನ್ನಲ್ಲೆ, ಹಿಂಗಾರು ಮಳೆ ಅಬ್ಬರ ಶುರುವಿಟ್ಟುಕೊಂಡಿದೆ. ಹಾಸನ, ಮಡಿಕೇರಿ, ಕೊಡಗು, ಪಶ್ಚಿಮ ಘಟ್ಟಗಳು ಸೇರಿದಂತೆ ಕೇರಳ ಭಾಗದಲ್ಲಿ ಮಳೆ ಮುಂದುವರಿದ ಪರಿಣಾಮ ಕಾವೇರಿ, ಕಬಿನಿ, ಹಾರಂಗಿ ಜಲಾಶಯ ಹಾಗೂ ಇತರ ಭಾಗದ ಜಲಾಶಯಗಳು ಮಳೆಗೆ ಭರ್ತಿಯಾಗಿವೆ. ನದಿಗಳ ಒಳ ಹರಿವು ಏರಿಕೆ ಆಗಿದೆ. ವಿಶೇಷವೆಂದರೆ ಕೃಷ್ಣ ರಾಜ ಸಾಗರ ಅಣೆಕಟ್ಟು (KRS) ಒಂದೇ ವರ್ಷದಲ್ಲಿ ಮೂರು ಬಾರಿ ತುಂಬಿ ದಾಖಲೆ ಮಾಡಿದೆ.
ಕಳೆದ 93 ವರ್ಷಗಳ ಇತಿಹಾಸದಲ್ಲೇ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣ ರಾಜ ಸಾಗರ ಜಲಾಶಯವು ಮೂರನೇ ಬಾರಿ ಭರ್ತಿಯಾಗಿ ದಾಖಲೆ ಬರೆದಿದೆ. ಇದೊಂದು ಅಪರೂಪದ ಸಂಗತಿ ಎನ್ನಬಹುದು. ಕಾವೇರಿ, ನದಿ ಒಳಹರಿ ಮತ್ತು ಹೊರ ಹರಿವು ಹೆಚ್ಚಾಗಿದೆ.

ಕಾವೇರಿ ನದಿ ಹಾಗೂ ಕೆಆರ್‌ಎಸ್ ನದಿ ಭರ್ತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ನಾವು ವರುಣನ ಕೃಪೆಗೆ ಪಾತ್ರರಾಗಿದ್ದೇವೆ. ರಾಜ್ಯದಲ್ಲಿ ಉತ್ತಮ ಮಳೆ ಆಗಿದೆ. ಜನ ಜಾನುವಾರುಗಳಿಗೆ ಈ ಬಾರಿಯು ಮಳೆಯಿಂದ ಕುಡಿಯಲು, ಬಳಕೆಗೆ, ನೀರಾವರಿಗೆ ಅನುಕೂಲವಾಗಿದೆ. ಕೃಷಿಗೆ ಈ ಬಾರಿ ಯಾವುದೇ ತೊಂದರೆ ಆಗುವುದಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿ ದಿನ 1145 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದೆ. ಅದೇ ರೀತಿ ವರ್ಷಕ್ಕೆ 31 ಟಿಎಂಸಿ ನೀರು ಬೇಕಾಗುತ್ತದೆ. ಪ್ರತಿ ತಿಂಗಳು 2.60 ಟಿಎಂಸಿ ನೀರು ಬೇಕಾಗುತ್ತದೆ. ಕಾವೇರಿ ಜಲಾನಯನ, ಹಾರಂಗಿ, ಹೇಮಾವತಿ, ಕಬಿನಿ ಡ್ಯಾಂಗಳಲ್ಲಿ ಸಹ ನೀರು ಭರ್ತಿಯಾಗಿದೆ ಎಂದರು. ಹಿಂಗಾರು ಅವಧಿಯಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ. ಈಗಾಗಲೇ ಮುಂಗಾರು ಅವಧಿಯಲ್ಲಿ ಉತ್ತಮ ಮಳೆ ಆಗಿದೆ. ಇದೆಲ್ಲ ಕಾರಣದಿಂದ ನದಿಗಳು ತುಂಬಿವೆ. ಜಲಾಶಯಗಳು ಸಹ ದಾಖಲೆಯ ಮಟ್ಟದಲ್ಲಿ ನೀರಿನ ಸಂಗ್ರಹವಾಗಿದೆ.
ಬೆಂಗಳೂರಿಗೆ ಕುಡಿಯಲು ನೀರು, ಹಾಸನ, ಮಂಡ್ಯ, ಮದ್ದೂರು, ಮೈಸೂರು ಸೇರಿದಂತೆ ವಿವಿಧ ಭಾಗಗಳ ನೀರಾವರಿಗೆ, ಕುಡಿಯಲು ಕಾವೇರಿ ನೀರು ಲಭ್ಯವಿದೆ. ಈ ಬಾರಿ ಬೇಸಿಗೆಯಲ್ಲೂ ನೀರಿನ ಅಗತ್ಯ ಬೇಡಿಕೆ ಈಡೇರಲಿದೆ. ಕಳೆದ 93 ವರ್ಷದಲ್ಲಿ ಕೆಆರ್‌ಎಸ್ ಅಣೆಕಟ್ಟು 77 ಭಾರಿ ಭರ್ತಿ ಆಗಿದೆ. ಈ ವರ್ಷ 2025ರಲ್ಲಿ ಜೂನ್ ನಲ್ಲಿ ಮೊದಲ ಬಾರಿ, ಅಕ್ಟೊಬರ್ 10ರ ನಂತರ ಹಾಗೂ ಇದೀಗ 19-23ರವರೆಗೆ ಮತ್ತು ಗರಿಷ್ಠ ಸಾಮರ್ಥ್ಯ ತಲುಪಿದೆ.
KRS ಇಂದಿನ ಮಟ್ಟ ಎಷ್ಟಿದೆ?
ಕೆಆರ್‌ಎಸ್ ಅಣೆಕಟ್ಟು ಇಂದು (ಅಕ್ಟೋಬರ್ 26) ಒಟ್ಟು 124.80 ಅಡಿ ಎತ್ತರದಷ್ಟು ನೀರು ಸಂಗ್ರಹವಾಗಿದೆ. ಒಟ್ಟು 49.452 ಟಿಎಂಸಿ ನೀರು ಸಂಗ್ರಹದಲ್ಲಿ ಪೂರ್ತಿ 49.452 ಟಿಎಂಸಿ ನೀರು ಸಂಗ್ರಹವಾಗಿದೆ. ಇಂದಿನ ಒಳಹರಿವು 18,409 ಕ್ಯೂಸೆಕ್ ಇದ್ದು, 18,152 ಕ್ಯೂಸೆಕ್ ಹೊರಹರಿವು ಇದೆ.
ಹೇಮಾವತಿ ಅಣೆಕಟ್ಟಿನ ವಿವರ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ : 37.10 ಟಿಎಂಸಿ
ಇಂದಿನ ಸಂಗ್ರಹ : 37.10 ಟಿಎಂಸಿ
ಒಳಹರಿವು : 6772 ಕ್ಯೂಸೆಕ್
ಹೊರ ಹರಿವು : 6723 ಕ್ಯೂಸೆಕ್
ಹಾರಂಗಿ ಜಲಾಶಯದ ಮಾಹಿತಿ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ : 8.50 ಟಿಎಂಸಿ
ಇಂದಿನ ಸಂಗ್ರಹ : 08.19 ಟಿಎಂಸಿ
ಒಳಹರಿವು : 1197 ಕ್ಯೂಸೆಕ್
ಹೊರ ಹರಿವು : 2266 ಕ್ಯೂಸೆಕ್
ಕಬಿನಿ ಡ್ಯಾಂ ನೀರು ಸಂಗ್ರಹ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ : 19.52 ಟಿಎಂಸಿ
ಇಂದಿನ ಸಂಗ್ರಹ : 19.49 ಟಿಎಂಸಿ
ಒಳಹರಿವು : 5427 ಕ್ಯೂಸೆಕ್
ಹೊರ ಹರಿವು : 5325 ಕ್ಯೂಸೆಕ್
ಭದ್ರಾ ಜಲಾಶಯದ ವಿವರ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 71.54ಟಿಎಂಸಿ
ಇಂದಿನ ಸಂಗ್ರಹ : 69 ಟಿಎಂಸಿ
ಒಳಹರಿವು : 5900 ಕ್ಯೂಸೆಕ್
ಹೊರ ಹರಿವು : 5900 ಕ್ಯೂಸೆಕ್












Click it and Unblock the Notifications