ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಲಕ್ಷ ರೂ. ವಂಚನೆ ಮಾಡಿದ ಅಶ್ವಿನ್ ರಾವ್

|
Google Oneindia Kannada News

ಬೆಂಗಳೂರು, ಜುಲೈ 09 : ಲೋಕಾಯುಕ್ತದಲ್ಲಿ ನಡೆದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾದಳಕ್ಕೆ ಮೊದಲ ದೂರು ದಾಖಲಾಗಿದೆ. ಈ ದೂರಿನಲ್ಲಿ ಶಾಸಕ ಮುನಿರತ್ನ, ನಿರ್ಮಾಪಕ ರಾಕ್‌ಲೈನ್ ವೆಂಟಕೇಶ್ ಅವರ ಹೆಸರುಗಳು ಇವೆ.

ಲೋಕಾಯುಕ್ತದ ಲಂಚ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಕೆಪಿಸಿಸಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಅವರು ಬುಧವಾರ ದೂರು ನೀಡಿದ್ದಾರೆ. ಜಮೀನು ವಾಜ್ಯ ಬಗೆಹರಿಸುವುದಾಗಿ ಅಶ್ವಿನ್ ರಾವ್ ಹಣ ಪಡೆದು ವಚಂನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. [ಲೋಕಾಯುಕ್ತರ ಪದಚ್ಯುತಿ, ಕಾನೂನು ಏನು ಹೇಳುತ್ತದೆ?]

lokayukta

ಈ ಹಣದ ವ್ಯವಹಾರ ಲೋಕಾಯುಕ್ತ ಜಂಟಿ ಆಯುಕ್ತ ರಿಯಾಜ್ ಅಹ್ಮದ್ ಅವರ ಕಚೇರಿಯಲ್ಲಿಯೇ ನಡೆದಿದ್ದು, ಹಣವನ್ನು ವಾಸಪ್ ಕೊಡಿಸಬೇಕು ಎಂದು ಎಸ್‌ಐಟಿಗೆ ಕೃಷ್ಣಮೂರ್ತಿ ಅವರು ಮನವಿ ಮಾಡಿದ್ದಾರೆ. ಅಶ್ವಿನ್ ರಾವ್ 80 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. 20 ಲಕ್ಷ ಹಣವನ್ನು ಸಂದಾಯ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಣೆ ನೀಡಿದ್ದಾರೆ. [ಎಸ್ ಐಟಿಗೆ ಮೊದಲ ದೂರು]

ಮುನಿರತ್ನ, ರಾಕ್‌ಲೈನ್ ವೆಂಕಟೇಶ್ ಹೆಸರು : ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷ್ಣಮೂರ್ತಿ ಅವರು, ಈ ವಂಚನೆ ಪ್ರಕರಣದಲ್ಲಿ ಅಶ್ವಿನ್ ರಾವ್, ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಆರ್‌ಟಿಐ ಕಾರ್ಯಕರ್ತ ವಿ.ಭಾಸ್ಕರ್ ಹಾಗೂ ಅಶ್ವಿನ್ ರಾವ್‌ ಅವರ ಇಬ್ಬರು ಸ್ನೇಹಿತರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಜಮೀನು ಖರೀದಿ ಹಾಗೂ ಭೂ ದಾಖಲೆ ಒದಗಿಸಿಕೊಡುವ ವಿಚಾರದಲ್ಲಿ ಹಣ ಪಡೆದು ವಂಚನೆ ಮಾಡಲಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಲಾಗಿತ್ತು. ಅಲ್ಲಿಯೂ ತನಿಖೆ ನಡೆಯದ ಕಾರಣ ಎಸ್‌ಐಟಿಗೆ ದೂರು ನೀಡಿದ್ದೇನೆ. ಲೋಕಾಯುಕ್ತ ಪೊಲೀಸರಿಗೂ ಈ ಕುರಿತು ದೂರು ನೀಡಲಾಗುತ್ತದೆ ಎಂದು ಕೃಷ್ಣಮೂರ್ತಿ ಅವರು ಹೇಳಿದ್ದಾರೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]

ಅಶ್ವಿನ್ ರಾವ್ 7 ಲಕ್ಷ ಪಡೆದಿದ್ದರು : ಅಶ್ವಿನ್ ರಾವ್ ಅವರು 80 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. 20 ಲಕ್ಷ ರೂ.ಗಳನ್ನು ನೀಡಿರುವುದಾಗಿ ಕೃಷ್ಣಮೂರ್ತಿ ಅವರು ಹೇಳಿದ್ದಾರೆ. ಅಶ್ವಿನ್ ರಾವ್‌ ಅವರೇ ಖುದ್ದಾಗಿ 7 ಲಕ್ಷ ರೂ. ಹಣ ಪಡೆದಿದ್ದಾರೆ.

ಅಶ್ವಿನ್ ರಾವ್ ಸ್ನೇಹಿತರು ನರಸಿಂಹ ರಾವ್‌ 3 ಲಕ್ಷ ರೂ. ಹಾಗೂ ವಿ.ಭಾಸ್ಕರ್‌ 10 ಲಕ್ಷ ಹಣವನ್ನು ಪಡೆದಿದ್ದಾರೆ. ಉಳಿದ ಹಣ ನೀಡಲು ತಾವು ಸಿದ್ದವಿದ್ದರೂ ಕೆಲಸ ಮಾಡಿಕೊಟ್ಟಿಲ್ಲ. ಲೋಕಾಯುಕ್ತ ಪಿಆರ್‌ಒ ಕಚೇರಿಯಿಂದ ಕಡತವನ್ನು ವಾಪಸ್ ತಂದಿದ್ದೇನೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.

English summary
KPCC member P.N.Krishnamurthy on Wednesday filed a complaint to SIT against Y.Ashwin Rao son of Lokayukta Justice Y.Bhaskar Rao, Rajarajeshwarinagar MLA Muniratna (Congress), Film producer Rockline Venkatesh and Narasimha Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X