ಬಿಜೆಪಿ ತಂದಿದ್ದ ಎಪಿಎಂಸಿ, ಮತಾಂತರ ಕಾಯ್ದೆ ವಾಪಸ್ ನಿರ್ಧಾರ ಸ್ವಾಗತಾರ್ಹ: KPRS
ಬೆಂಗಳೂರು, ಜೂನ್ 16: ಕರ್ನಾಟಕದಲ್ಲಿ ಕಳೆದ ಬಿಜೆಪಿ ಸರ್ಕಾರ ತಂದಿದ್ದ ಕಾಯ್ದೆ-ಕಾನೂನುಗಳನ್ನು ಅಧಿಕಾರಕ್ಕೆ ಬಂದು ಒಂದು ತಿಂಗಳಲ್ಲಿಯೇ ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ. ಈ ಕುರಿತು ಬಿಜೆಪಿ ನಾಯಕರು ಮುಗಿಬೀಳುತ್ತಿರುವ ಹೊತ್ತಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ(KPRS) ಕರ್ನಾಟಕ ರಾಜ್ಯ ಸಮಿತಿ ಕಾಂಗ್ರೆಸ್ ನೀರ್ಣಯವನ್ನು ಸ್ವಾಗತಿಸಿದೆ.
ಈ ಕುರಿತು ಕರ್ನಾಟಕ ಪ್ರಾಂತ ರೈತ ಸಂಘ(KPRS) ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹಿಂದೆ ಬಿಜೆಪಿ ಸರ್ಕಾರ ಎಪಿಎಂಸಿ ಮಾರುಕಟ್ಟೆ ಗಳನ್ನು ನಾಶ ಮಾಡುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿತ್ತು. ಸಂವಿಧಾನ ಬದ್ಧ ಧಾರ್ಮಿಕ ಸ್ವಾತಂತ್ರ್ಯ ನಿರಾಕರಿಸುವ 'ಮತಾಂತರ ನಿಷೇಧ ಕಾಯ್ದೆ'ಯನ್ನು ವಾಪಸ್ಸು ಪಡೆಯಲು ನಿರ್ಧರಿಸಿರುವ ಸಿದ್ದರಾಮಯ್ಯ ಸಂಪುಟದ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಜಿಸಿ ಬಯ್ಯಾರೆಡ್ಡಿ ಅವರು ತಿಳಿಸಿದ್ದಾರೆ.

ಇದೇ ರೀತಿ ಉಳಿದ ರೈತ ವಿರೋಧಿ ಕೃಷಿ ಕಾಯ್ದೆಗಳಾದ ಕರ್ನಾಟಕ ರಾಜ್ಯ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020, ಕರ್ನಾಟಕ ಜಾನುವಾರು ಸಂರಕ್ಷಣಾ ಹಾಗೂ ಹತ್ಯೆ ನಿಷೇಧ ಕಾಯ್ದೆ 2020, ಕರ್ನಾಟಕ ರಾಜ್ಯ ಭೂ ಸ್ವಾಧೀನ ಕಾಯ್ದೆ 2019 ಅನ್ನು ಕೂಡ ರದ್ದುಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಬಿಜೆಪಿ ವಿರುದ್ಧ ಆಕ್ರೋಶ
ರಾಜ್ಯದಲ್ಲಿ ಕೃಷಿಯನ್ನೆ ನಂಬಿಕೊಂಡ ಕಟುಂಬಗಳು ಹೆಚ್ಚಿವೆ. ಅಂತಹ ಕೃಷಿ ನಾಶ ಮಾಡಿ ,ಕಾರ್ಪೊರೇಟ್ ಕೃಷಿ ಉತ್ತೇಜಿಸುವ ಉದ್ದೇಶ ಸಾಧನೆಗೆ ತಂದಿದ್ದ ಕೇಂದ್ರ ಕೃಷಿ ಕಾಯ್ದೆಗಳು ರದ್ದಾದ ನಂತರವೂ ಅದೇ ಉದ್ದೇಶದ ರಾಜ್ಯ ಕೃಷಿ ಕಾಯ್ದೆಗಳು ಮುಂದುವರೆಸಿದ್ದನ್ನು ರಾಜ್ಯದ ರೈತರು ಪ್ರಬಲವಾಗಿ ವಿರೋಧಿಸಿದ್ದರು ಎಂದು ಸಂಘ ಬಿಜೆಪಿ ವಿರುದ್ಧ ಬಯ್ಯಾರೆಡ್ಡಿ ಅವರು ಆಕ್ರೋಶ ಹೊರ ಹಾಕಿದ್ದಾರೆ.

ಕೃಷಿ ಬಿಕ್ಕಟ್ಟುನ್ನು ತೀವ್ರಗೊಳಿಸುವುದು, ರಾಜ್ಯದ ರೈತರಿಗೆ ಬೆಂಬಲ ಬೆಲೆ ನಿರಾಕರಿಸುವ ವ್ಯಾಪಾರಿಗಳ ಮರ್ಜಿಗೆ ರೈತರನ್ನು ದಯನೀಯವಾಗಿ ನೂಕುವ ಎಪಿಎಂಸಿ ತಿದ್ದುಪಡಿ ಕಾಯ್ದೆ 2020 ರದ್ದತಿ ನಿರ್ಧಾರ ರೈತ ಹೋರಾಟಕ್ಕೆ ಸಂದ ಜಯವಾಗಿದೆ. ದುರ್ಬಲ ಗೊಂಡಿರುವ ಎಪಿಎಂಸಿ ಯನ್ನು ಬಲಪಡಿಸಬೇಕಿದೆ. ಅದನ್ನು ರೈತ ಸ್ನೇಹಿಯಾಗಿಸಲು, ಎಪಿಎಂಸಿ ಸೆಸ್ ಮೂಲಕ ಸಂಗ್ರಹವಾಗುವ ಅವರ್ಥ ನಿಧಿ ಯನ್ನು ಸಮರ್ಥವಾಗಿ ರೈತರ ಹಿತ ರಕ್ಷಣೆಗೆ ಬಳಸಬೇಕು. ಈ ಕುರಿತು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಮುಖ್ಯಸ್ಥರು ಕಾಂಗ್ರೆಸ್ ಸರ್ಕಾರ ಬಳಿ ಮನವಿ ಮಾಡಿದೆ.
ಪೂರ್ಣ ವ್ಯಾಪ್ತಿಗೆ ಎಪಿಎಂಸಿ ಸಮಿತಿಗಳ ಅಧಿಕಾರವನ್ನು ಪುನರ್ ಸ್ಥಾಪಿಸುವ ಈ ರದ್ದತಿ ಒಂದೇ ಎಪಿಎಂಸಿ ಬಲಪಡಿಸಲು ಸಾಕಾಗುವುದಿಲ್ಲ. ಉದಾರೀಕರಣ ನೀತಿಗಳ ಒತ್ತಡಕ್ಕೆ ತಂದಿರುವ ಖಾಸಗೀ ಕಂಪನಿಗಳ ಪರವಾದ ಈ ಹಿಂದಿನ ತಿದ್ದಪಡಿಗಳಾದ ಆನ್ ಲೈನ್ ಮಾರಾಟ ,ಕೋಲ್ಡ್ ಸ್ಟೋರೇಜ್ ,ಹಣ್ಣು-ತರಕಾರಿ ಮಾರುಕಟ್ಟೆ ಯಲ್ಲಿ ಎಪಿಎಂಸಿ ಯನ್ನು ಬೈ ಪಾಸ್ ಮಾಡುವ ರೈತ ವಿರೋಧಿ ತಿದ್ದುಪಡಿ ಗಳು ಕೂಡ ರದ್ದಾಗಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಒತ್ತಾಯಿಸಿದೆ.












Click it and Unblock the Notifications