ಬಿಜೆಪಿಯವರು ಕೇವಲ ಹಿಂದುತ್ವ, ಲವ್ ಜಿಹಾದ್ ಅಜೆಂಡಾ ಮಾಡಿಕೊಂಡಿದ್ದಾರೆ: ಡಿ.ಕೆ.ಶಿವಕುಮಾರ್

ಬೆಂಗಳೂರು,ಜನವರಿ 4: ಬಿಜೆಪಿಯವರು ಕೇವಲ ಹಿಂದುತ್ವ, ಲವ್ ಜಿಹಾದ್ ಅಜೆಂಡಾ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮನಸ್ಸು ಕೆಡಸುವುದರ ವಿರುದ್ಧ ರಾಹುಲ್ ಗಾಂಧಿ ಪಾದಯಾತ್ರೆ ಮಾಡ್ತಾ ಇದ್ದಾರೆ. ದೇಶ ಒಗ್ಗೂಡಿಸಲು ಪಾದಾರ್ಪಣೆ ಮಾಡ್ತಾ ಇದ್ದಾರೆ. ಈ ದೇಶ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನ ಖಂಡಿಸುತ್ತೆ. ನಾನು ಒಬ್ಬ ಪಕ್ಷದ ಅಧ್ಯಕ್ಷನಾಗಿ ಖಂಡಿಸುತ್ತೇನೆ ಎಂದರು.

ಇನ್ನು ಚುನಾವಣೆಯಲ್ಲಿ ಮೊದಲ ಹಂತದ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿ, ಒಳ್ಳೆಯ ಮುಹೂರ್ತ ಕೂಡಿ ಬರಬೇಕು. ಲಿಸ್ಟ್ ತಯಾರಾಗಲು ಒಳ್ಳೆಯ ಸಮಯ ಬೇಕು. ಜಿಲ್ಲಾ ಕಮಿಟಿಗಳಿಂದ ವರದಿ ಬರಲಿ, ಇನ್ನೂ ಎರಡು ದಿನದಲ್ಲಿ ವರದಿ ಬರಲಿದೆ. ಬಳಿಕ ಒಂದು ಸಭೆ ಮಾಡಿ ಘೋಷಣೆ ಮಾಡುತ್ತೇವೆ. ಈಗಾಗಲೇ ಅಭ್ಯರ್ಥಿಗಳ ಬಗ್ಗೆ ನಾವು ಕೂಡ ಸರ್ವೆ ಮಾಡಿಸಿದ್ದೇವೆ ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. 28 ಲಕ್ಷ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ. ಅವರ ಅಭಿಪ್ರಾಯ ಪಡೆದು ಟಿಕೆಟ್‌ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.

KPCC President D K Shivakumar Slams Nalin Kumar kateel

ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಕೆ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ‌ ಮನೆಯಲ್ಲೂ ನಾಯಿ ಇದೆ. ನಾಯಿ ಬಗ್ಗೆ ನನಗೆ ಗೌರವ ಇದೆ. ಕಳ್ಳರನ್ನು ಹಿಡಿಯಲು ಹಾಗೂ ತಮ್ಮ ರಕ್ಷಣೆಗೆ ನಾಯಿ‌ ಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಅವರನ್ನು ನಾಯಿ ಮರಿಗೆ ಹೋಲಿಸಿ ಮಾತನಾಡಿದ್ದು ನನಗೆ ಗೊತ್ತಿಲ್ಲ. ನಮ್ಮ‌ ಮನೆಯಲ್ಲೂ ನಾಯಿ ಇದೆ. ನಾಯಿ ಬಗ್ಗೆ ನನಗೆ ಗೌರವ ಇದೆ. ಕಳ್ಳರನ್ನು ಹಿಡಿಯಲು ಹಾಗೂ ನಮ್ಮ ರಕ್ಷಣೆಗೆ ನಾಯಿ‌ ಬೇಕು. ಕಷ್ಟಕ್ಕೆ ಸುಖಕ್ಕೆ ನಾಯಿ ಬೇಕು ಎಂದು ಉತ್ತರಿಸಿದ್ದಾರೆ.

ನಾಯಿ ನಾರಾಯಣ ಅಂತಾರೆ. ನಾಯಿ ಬಹಳ ಪ್ರಿಯವಾದ ಪ್ರಾಣಿ ಎಂದರು. ಆದರೆ ಸಿದ್ದರಾಮಯ್ಯ ಅವರು ಏನು ಹೇಳಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ ಎಂದರು. ಇನ್ನು ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿ ಅಜೆಂಡಾ ಭಾವನೆ, ಬದುಕಲ್ಲ. ಕಾಂಗ್ರೆಸ್ ಅಜೆಂಡಾ ಬದಕು ಕಟ್ಟುವುದು. ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ನಾವು ಅವರಿಗೆ ಧ್ವನಿ ಕೊಡಬೇಕು ಹೊರತು ಅವರ ಮನಸ್ಸು ಕೆಡಿಸುವುದು ಅಲ್ಲ ಎಂದರು.

KPCC President D K Shivakumar Slams Nalin Kumar kateel

ಇನ್ನು ಇದೇ ಸಂದರ್ಭದಲ್ಲಿ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿದ ಅವರು, ದೆಹಲಿ ಸುತ್ತ ಭಾರತ್ ಜೋಡೋ ಪಾದಯಾತ್ರೆ ನಡೆಯುತ್ತಿದೆ. ನಾನು ಪಾದಯಾತ್ರೆಯಲ್ಲಿ ಭಾಗಿಯಾಗಬೇಕು ಅಂದುಕೊಂಡಿದ್ದೇನೆ. ಒಂದು ದಿನ ಪಾದಯಾತ್ರೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ. ಉತ್ತರ ಭಾರತದಲ್ಲಿ ಹೆಜ್ಜೆ ಹಾಕುತ್ತೇನೆ. ಒಂದು ಗಂಟೆಯಾದ್ರೂ ಯಾತ್ರೆಯಲ್ಲಿ ಭಾಗಿಯಾಗುತ್ತೇನೆ. ಅಲ್ಲಿಯ ನಾಯಕರು ರಾಜ್ಯದಲ್ಲಿ ಬಂದು ಪಾದಯಾತ್ರೆ ಮಾಡಿದ್ದಾರೆ ಎಂದು ಹೇಳಿದರು.

ಇನ್ನೂ ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬರ್ತಾರೆ. ಮಹಿಳಾ ಕಾರ್ಯಕ್ರಮ ಮಾಡಲು ಸಿದ್ಧತೆ ನಡೆಸಿದ್ದೇವೆ. ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು. ಹೀಗಾಗಿ ಯಾವ‌ ಕಾರ್ಯಕ್ರಮ ಕೊಡಬೇಕು, ಬದಕು ಕಟ್ಟಲು ಏನು ಕೊಡಬೇಕು ಎಂದು ಅಭಿಪ್ರಾಯ ತಿಳಿಸಲು ಮಹಿಳಾ ನಾಯಕಿಯರಿಗೆ ಹೇಳಿದ್ದೇವೆ. ಅಭಿಪ್ರಾಯ ವಾಟ್ಸಪ್ ಮೂಲಕ ಮಾಡಲು ಹೇಳಿದ್ದೇವೆ ಅಥವಾ ಲೆಟರ್ ಬರೆಯಲು ಹೇಳಿದ್ದೇವೆ. ನಾವು ಜನರ ಬದಕು ಕಟ್ಟಲು ಹೋರಾಟ ಮಾಡುತ್ತಿದ್ದೇವರ, ಇದೆ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಇರುವ ವ್ಯತ್ಯಾಸ ಎಂದರು.

ಪಡಿತರ ಅಕ್ಕಿ ಕಡಿತ ವಿಚಾರವಾಗಿ ಮಾತನಾಡಿ, ಈ ವಿಚಾರ ಬಹಳ ಗೊಂದಲ ಇದೆ. ಸರ್ಕಾರದ ಆರ್ಡರ್ ನೋಡಿ ಮಾತನಾಡುತ್ತೇನೆ, ಸಿದ್ದರಾಮಯ್ಯ ನಾನು ಮಾತುಕತೆ ಮಾಡುತ್ತೇವೆ. ಸರ್ಕಾರ ಜನರಿಗೆ ಗೊಂದಲ ಮಾಡುತ್ತಿದ್ದಾರೆ, ಭಾವಣೆ ವಿಚಾರ ಗೊಂದಲ ಮಾಡುತ್ತಿದ್ದಾರೆ. ಬಿಜೆಪಿಗೆ ಅಭಿವೃದ್ಧಿ ವಿಚಾರ ಬೇಡ ಭಾವನೆ ವಿಚಾರಗಳು ಬೇಕು , ಜನರ ಸಮಸ್ಯೆಗಳು ಬೇಡ ಎಂದು ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+