Anant Kumar Hegde: ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನ ಪ್ರಹಾರ: ಬಿಜೆಪಿ ನಾಯಕನ ವಿರುದ್ಧ ದೂರು
ಬೆಂಗಳೂರು, ಜನವರಿ 14: ಚುನಾವಣೆ ಬಂತೆಂದರೆ ಸಾಕು ರಾಜಕೀಯ ಮುಖಂಡರ ಆರೋಪ, ಪ್ರತ್ಯಾರೋಪಗಳು ಮುಗಿಲು ಮುಟ್ಟಿರುತ್ತವೆ. ಇದೀಗ ಇಂತದ್ದೆ ಆರೋಪ ಮಾಡಿದ ಬಿಜೆಪಿ ನಾಯಕ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಇದೀಗ ದೂರು ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಅನಂತ ಕುಮಾರ್ ಹೆಗಡೆ ಅವರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಏಕವಚನದಲ್ಲಿ ವಾಗ್ದಾಳಿ ವಿಚಾರವಾಗಿ ವಿರುದ್ಧ ಮಾತನಾಡಿದ್ದರು. ಇದೀಗ ಅವರ ವಿರುದ್ಧ ನಗರದ ಪೊಲೀಸ್ ಕಮಿಷನರ್‌ಗೆ ಡಿಸಿಪಿ ಮುತ್ತುರಾಜ್ ಮೂಲಕ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ.

ದೂರಿನಲ್ಲಿ ಕೆಪಿಸಿಸಿ ವಕ್ತಾರರು, ಬಿಜೆಪಿ ನಾಯಕರು ಸಮುದಾಯಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇವರನ್ನು ಚುನಾವಣೆ ಮುಗಿಯುವವರೆಗೆ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆನಂತ್ ಕುಮಾರ್ ಹೇಳಿದ್ದೇನು?
ಜಾತಿ, ಪ್ರಾದೇಶಿಕ, ಭಾಷೆ ಹೆಸರಿನಲ್ಲಿ ಒಡೆದರು. ಮೂರ್ಖರಾಮಯ್ಯನಂಥವರು ಇನ್ನೂ ಒಡೆಯುತ್ತಲೇ ಇದ್ದಾರೆ. ಆದರೂ ಈಗ ಹಿಂದೂ ಸಮಾಜ ಒಟ್ಟಾಗಿ ನಿಂತುಕೊಂಡಿದೆ. ಈ ಬಾರಿ ನಮ್ಮ ಗೆಲುವು ಹೇಗಿರಬೇಕೆಂದರೆ ಅದನ್ನು ಮುಂದೆ ಅಳಿಸಲು ನಮ್ಮಿಂದನೂ ಆಗಬಾರದು. ಹೊಡೆದ ಹೊಡೆತ ಹೇಗಿರಬೇಕೆಂದರೆ ಪುನರ್‌ಜನ್ಮವೂ ಸಿಗಬಾರದು. ಆ ರೀತಿಯ ಹೊಡೆತ ನಮ್ಮ ವಿರೋಧಿಗಳಿಗೆ ಆಗಬೇಕು ಎಂದು ಅನಂತ್ ಕುಮಾರ್ ಗುಡುಗಿದ್ದರು.
ಸೇಡು ತೀರಿಸಿಕೊಳ್ಳುವ ಸಮಯ
ದೇಶದಲ್ಲಿ ಅಪಮಾನಗೊಂಡ ಸಾಕಷ್ಟು ಸಂಕೇತಗಳಿವೆ. ಅದನ್ನು ಕಿತ್ತುಹಾಕುವ ತನಕ ಹಿಂದೂ ಸಮಾಜ ವಿರಮಿಸಲ್ಲ. ರಣಭೈರವ ಎದ್ದಾಗಿದೆ, ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಸಾವಿರ ವರ್ಷಗಳ ಸೇಡು ತೀರಿಸಿಕೊಳ್ಳುವ ಸಮಯ ಬಂದಿದೆ. ಸೇಡು ತೀರಿಸಿಕೊಳ್ಳದಿದ್ದರೆ ಇದು ಹಿಂದು ರಕ್ತವೇ ಅಲ್ಲ. ಇದನ್ನು ಬೆದರಿಕೆ ಅಂತ ಬೇಕಾದರೂ ತಿಳಿದುಕೊಳ್ಳಿ ಎಂದರು.
ಭಟ್ಕಳದ ಚಿನ್ನದ ಪಳ್ಳಿ ಮಸೀದಿ ಹಿಂದೆ ಹಿಂದೂ ದೇವಾಲಯವಾಗಿತ್ತು. ಶಿರಸಿಯ ಸಿಪಿ ಬಜಾರ್‌ನಲ್ಲಿರುವ ದೊಡ್ಡ ಮಸೀದಿ ವಿಜಯ ವಿಠಲ ದೇವಸ್ಥಾನ ಆಗಿತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನ ಆಗಿತ್ತು. ಈಗ ಹೋದರೂ ಅಲ್ಲಿ ಮಾರುತಿ ಮೂರ್ತಿ ಕಾಣುತ್ತದೆ. ದೇಶದ, ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡ ಸಂಕೇತಗಳಿವೆ ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗಳೇ ಅವರಿಗೀಗ ಮುಳುವಾಗಿವೆ.












Click it and Unblock the Notifications