ಲೋಕಸಭೆ ಚುನಾವಣೆಗೆ ತಯಾರಿ, ಪತ್ರಿಕೆ ಪ್ರಾರಂಭಿಸಲು ರಾಜ್ಯ ಕಾಂಗ್ರೆಸ್ ಚಿಂತನೆ
ಬೆಂಗಳೂರು, ಜನವರಿ 04: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಯಾಗಿ ರಾಜ್ಯದ ಎಲ್ಲಾ 28 ಸ್ಥಾನಗಳನ್ನೂ ಗೆಲ್ಲಬೇಕೆಂದು ನಿರ್ಧಿರಿಸಿರುವ ಈಗಾಗಲೇ ಚುನಾವಣೆ ತಯಾರಿ ಶುರುವಿಟ್ಟುಕೊಂಡಿದೆ.
ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಹಾಗೂ ವಿರೋಧ ಪಕ್ಷವನ್ನು ಟೀಕಿಸಲು ಪಾಕ್ಷಿಕ ಪತ್ರಿಕೆಯೊಂದನ್ನು ಹರತರಲು ಕೆಪಿಸಿಸಿ ಚಿಂತಿಸಿದೆ.
ಹಲವು ಪಕ್ಷಗಳು ತಮ್ಮ ಮುಖವಾಣಿ ಹೊಂದಿರುವಂತೆ ಸ್ವತಃ ಕಾಂಗ್ರೆಸ್ ಸಹ ನ್ಯಾಷನಲ್ ಹೆರಾಲ್ಡ್ ಹೊಂದಿರುವಂತೆ ರಾಜ್ಯ ಸರ್ಕಾರ ಸಹ ಪಾಕ್ಷಿಕ ಹೊರತರಲು ಯೋಜಿಸಿದ್ದು, ಇದೇ ತಿಂಗಳ ಅಂತ್ಯಕ್ಕೆ ರಾಜ್ಯ ಕಾಂಗ್ರೆಸ್ ಪ್ರಾಯೋಜಿತ ಪತ್ರಿಕೆಯೊಂದು ಮಾರುಕಟ್ಟೆಗೆ ಬರಲಿದೆ.

ಸಾಮಾಜಿಕ ಜಾಲತಾಣಗಳನ್ನು ಶಕ್ತವಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್, ತನ್ನ ಪತ್ರಿಕೆ ಮೂಲಕ ಇನ್ನಷ್ಟು ಆಳವಾಗಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಪತ್ರಿಕೆಯನ್ನು ಬಳಸಿಕೊಳ್ಳಲಿದೆ. ಪತ್ರಿಕೆಯು ಜನವರಿ 26 ರಂದು ಬಿಡುಗಡೆ ಆಗಲಿದೆ.
ತಿಂಗಳಿಗೆ ಎರಡು ಬಾರಿ ಹೊರ ಬರುವ ಈ ಪತ್ರಿಕೆಯಲ್ಲಿ ಕಾಂಗ್ರೆಸ್ ಸಂಬಂಧಿತ ಸುದ್ದಿಗಳ ಜೊತೆಗೆ ಇತರ ಕೆಲವು ಸುದ್ದಿಗಳೂ ಇರಲಿವೆ.












Click it and Unblock the Notifications