ಸ್ಥಳೀಯ ಸಂಸ್ಥೆಗಳ ಚುನಾವಣೆ ಅಭ್ಯರ್ಥಿಗೆ ಕೆಪಿಸಿಸಿ ಮಾನದಂಡ
ಬೆಂಗಳೂರು, ಆಗಸ್ಟ್ 12 : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೆಪಿಸಿಸಿ ಮಾನದಂಡಗಳನ್ನು ನಿಗದಿ ಮಾಡಿದೆ. ಆಗಸ್ಟ್ 29ರಂದು 105 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮೂರು ಪುಟಗಳ ಮಾನದಂಡಗಳನ್ನು ಜಿಲ್ಲಾ ಕಾಂಗ್ರೆಸ್ ಘಟಕಕ್ಕೆ ಕಳುಹಿಸಿಕೊಟ್ಟಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಈ ಮಾನದಂಡಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಟಿಕೆಟ್ ಆಕಾಂಕ್ಷಿಗಳ ಹಿನ್ನಲೆ, ಪ್ರಭಾವ, ಜಾತಿ, ಸಮಾಜ ಸೇವೆ ಮುಂತಾದವುಗಳನ್ನು ಪರಿಗಣಿಸಬೇಕು ಎಂದು ಪಕ್ಷ ನೀಡಿರುವ ಸೂಚನೆಯಲ್ಲಿ ತಿಳಿಸಲಾಗಿದೆ. ಟಿಕೆಟ್ ಆಕಾಂಕ್ಷಿಗಳ ಅಪರಾಧ ಹಿನ್ನಲೆಯನ್ನು ಪರಿಗಣಿಸುವಂತೆ ನಿರ್ದೇಶನ ನೀಡಲಾಗಿದೆ.

ಅಭ್ಯರ್ಥಿಯ ಪ್ರಭಾವ, ನ್ಯಾಷನಲ್ ಹೆರಾಲ್ಡ್‌ಗೆ ಚಂದಾದಾರರಾಗುವುದು. ಶಕ್ತಿ ಮೊಬೈಲ್ ಅಪ್ಲಿಕೇಶನ್ ಅಡಿ ಯುವಕರ ಸೇರ್ಪಡೆ ಸೇರಿದಂತೆ ವಿವಿಧ ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ನ್ಯಾಷನಲ್ ಹೆರಾಲ್ಡ್ ವಾರ್ಷಿಕ ಚಂದಾ 1,100 ರೂ.ಗಳು.
ಅಭ್ಯರ್ಥಿ ಎಲ್ಲಾ ಟಿಕೆಟ್ ಆಕಾಂಕ್ಷಿಗಳ ನಡುವೆ ಅವಿರೋಧವಾಗಿ ಆಯ್ಕೆಯಾಗಬೇಕು ಎಂದು ಮಾನದಂಡದಲ್ಲಿ ತಿಳಿಸಲಾಗಿದೆ. ವಾರ್ಡ್‌ವಾರು ಮೀಸಲಾತಿ ಅನ್ವಯ ಎಸ್‌ಸಿ/ಎಸ್‌ಟಿ ಪಂಗಡದ ಯುವಕರನ್ನು ಆಯ್ಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಬ್ಲಾಕ್ ಲೆವೆಲ್ ಸಮಿತಿ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಘಟಕಕ್ಕೆ ಕಳುಹಿಸಲಿದೆ. ಜಿಲ್ಲಾ ಘಟಕ ಅದನ್ನು ಕೆಪಿಸಿಸಿಗೆ ರವಾನೆ ಮಾಡಲಿದೆ.












Click it and Unblock the Notifications