Get Updates
Get notified of breaking news, exclusive insights, and must-see stories!

ಕೊಟ್ಟೂರು ಜಾತ್ರೆ: ಫೆ. 15 ರಿಂದ 20 ರ ವರೆಗೆ ಹುಬ್ಬಳ್ಳಿಯಿಂದ ವಿಶೇಷ ರೈಲು- ಮಾರ್ಗ, ನಿಲುಗಡೆ, ರೈಲು ಸಂಖ್ಯೆ, ಮಾಹಿತಿ

ಫೆ. 15ರಂದು (ನಾಳೆ) ನಡೆಯಲಿರುವ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಕೊಟ್ಟೂರು ಗುರುಬಸವೇಶ್ವರ ರಥೋತ್ಸವ ಅಂಗವಾಗಿ ಹುಬ್ಬಳ್ಳಿಯಿಂದ ದಾವಣಗೆರೆ– ಹೊಸಪೇಟೆ ಮಾರ್ಗದಲ್ಲಿ ಫೆ. 15ರಿಂದ 20ರ ವರೆಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಮಾಹಿತಿ

ಹುಬ್ಬಳ್ಳಿ, ಫೆಬ್ರವರಿ 14: ಫೆ. 15ರಂದು (ನಾಳೆ) ನಡೆಯಲಿರುವ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಕೊಟ್ಟೂರು ಗುರುಬಸವೇಶ್ವರ ರಥೋತ್ಸವ ಅಂಗವಾಗಿ ಹುಬ್ಬಳ್ಳಿಯಿಂದ ದಾವಣಗೆರೆ- ಹೊಸಪೇಟೆ ಮಾರ್ಗದಲ್ಲಿ ಫೆ. 15ರಿಂದ 20ರ ವರೆಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಐತಿಹಾಸಿಕ ಕೊಟ್ಟೂರು ಜಾತ್ರೆ ಅಂಗವಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸುವಂತೆ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿರುವ ನೈರುತ್ಯ ರೈಲ್ವೆ ಇಲಾಖೆಯು ಹುಬ್ಬಳ್ಳಿಯಿಂದ ಹೊಸಪೇಟೆಗೆ ರೈಲು ಬಿಡುವುದಾಗಿ ಘೋಷಿಸಿದೆ. ಈ ಕುರಿತು ಟ್ವೀಟ್‌ ಮಾಡಿದೆ.

ವಿಶೇಷ ಪ್ಯಾಸೆಂಜರ್ ರೈಲು (ಸಂಖ್ಯೆ 07339/07340) ಹುಬ್ಬಳ್ಳಿ- ದಾವಣಗೆರೆ-ಹೊಸಪೇಟೆ-ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸಲಿವೆ. ರೈಲು ಸಂಖ್ಯೆ - 07339 ಹುಬ್ಬಳ್ಳಿಯಿಂದ ಬೆಳಿಗ್ಗೆ 6:15ಕ್ಕೆ ಹೊರಟು, ಹೊಸಪೇಟೆಗೆ ಮದ್ಯಾಹ್ನ 1:45ಕ್ಕೆ ತಲುಪಲಿದೆ. ರೈಲು ಸಂಖ್ಯೆ- 07340 ಹೊಸಪೇಟೆಯಿಂದ ಮದ್ಯಾಹ್ನ 3 ಗಂಟೆಗೆ ಹೊರಟು ಹುಬ್ಬಳ್ಳಿಯನ್ನು ರಾತ್ರಿ 10:50ಕ್ಕೆ ತಲುಪಲಿದೆ.

ಯಳವಗಿ, ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ತೊಳಹುಣಸಿ, ಅಮರಾವತಿ ಕಾಲೋನಿ, ತೆಲಗಿ, ಹಾರಣಹಳ್ಳಿ, ಬೆನೆಹಳ್ಳಿ, ಕೊಟ್ಟುರು, ಮಾನವಿ, ಹಗರಿಬೊಮ್ಮನಹಳ್ಳಿ, ಹಂಪಾಪಟ್ಟಣಂ, ಮರಿಯಮ್ಮನಹಳ್ಳಿ, ವ್ಯಾಸ ಕಾಲೋನಿ, ತುಂಗಭದ್ರಾ ಡ್ಯಾಮ್‌ ರೈಲು ನಿಲ್ದಾಣಗಳಲ್ಲಿ ಈ ರೈಲು ನಿಲ್ಲಲಿದೆ. ಈ ರೈಲು ಒಂಬತ್ತು ಜನರಲ್‌ ಕ್ಲಾಸ್‌ ಕೋಚ್‌ಗಳು ಹಾಗೂ ಎರಡು ಸೆಕೆಂಡ್‌ ಕ್ಲಾಸ್‌ ಕೋಚ್‌ಗಳನ್ನು ಹೊಂದಿರುತ್ತದೆ.

Kotturu Jatre 2023: SWR to run Special train between Hubballi & Hosapete via Davangere

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕು ಕೇಂದ್ರವಾಗಿದೆ. ಇದು 15 ನೇ ಶತಮಾನದ ಶೈವ ಸಂತ ಗುರು ಕೊಟ್ಟೂರೇಶ್ವರ ಅವರ ವಾಸಸ್ಥಳವಾಗಿತ್ತು. ಪ್ರತಿ ವರ್ಷ, ಫೆಬ್ರವರಿಯಲ್ಲಿ ನಡೆಯುವ ರಥೋತ್ಸವಕ್ಕೆ 200,000 ಕ್ಕೂ ಹೆಚ್ಚು ಜನರು ಸೇರುತ್ತಾರೆ.

Kotturu Jatre 2023: SWR to run Special train between Hubballi & Hosapete via Davangere

ಐತಿಹಾಸಿಕವಾಗಿ, ಕೊಟ್ಟೂರು ತನ್ನ ಹತ್ತಿ ಜಿನ್ ಉದ್ಯಮಕ್ಕೆ ಮತ್ತು ಹೊಸಪೇಟೆಯಿಂದ ರೈಲು ಮಾರ್ಗದ ಟರ್ಮಿನಸ್‌ಗೆ ಹೆಸರುವಾಸಿಯಾಗಿದೆ. 2019 ರಲ್ಲಿ, ಆ ರೈಲು ಮಾರ್ಗವನ್ನು ಹರಿಹರಕ್ಕೆ ವಿಸ್ತರಿಸಲಾಯಿತು ಮತ್ತು ಮೀಟರ್ ಗೇಜ್‌ಗೆ ನವೀಕರಿಸಲಾಯಿತು.

Kotturu Jatre 2023: SWR to run Special train between Hubballi & Hosapete via Davangere

ಪ್ರಸ್ತುತ, ಕೊಟ್ಟೂರು ಮೂಲಕ ಒಂದೇ ಎಕ್ಸ್‌ಪ್ರೆಸ್ ರೈಲು ಇದೆ, ಇದು ಹೊಸಪೇಟೆಯಿಂದ ದಾವಣಗೆರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ವರ್ಷದ ಸೆಪ್ಟೆಂಬರ್‌ನಿಂದ ಪ್ರತಿ ರಾತ್ರಿ ವಿಜಯಪುರದಿಂದ ಕೊಟ್ಟೂರು ಮಾರ್ಗವಾಗಿ ಯಶವಂತಪುರಕ್ಕೆ ಹೊಸ ರೈಲು ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+