ಮಕ್ಕಳೊಂದಿಗೆ ಸಾಲಿನಲ್ಲಿ ನಿಂತು ಬಿಸಿಯೂಟ ಸವಿದ ಸಿಇಓ

Posted By:
Subscribe to Oneindia Kannada

ಕೊಪ್ಪಳ, ಆಗಸ್ಟ್ 06 : ಯಲಬುರ್ಗಾ ತಾಲೂಕಿನ ಹಿರೇ ಅರಳಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಕಸ್ಮಿಕವಾಗಿ ಭೇಟಿ ನೀಡಿದ ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು, ಶಾಲೆಯ ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ತಟ್ಟೆ ಹಿಡಿದು ನಿಂತು, ನಂತರ ಬಿಸಿಯೂಟ ಸವಿದರು.

ಶುಕ್ರವಾರ ಗ್ರಾಮಕ್ಕೆ ಭೇಟಿದ್ದ ಅವರು ಅನಿರೀಕ್ಷಿತವಾಗಿ ಶಾಲೆಗೆ ತೆರಳಿದರು. ಶಾಲೆಯಲ್ಲಿನ ಸ್ಥಿತಿ-ಗತಿ, ಬೋಧನೆ, ಸರ್ಕಾರದಿಂದ ಮಕ್ಕಳಿಗೆ ಒದಗಿಸುವ ಸಮವಸ್ತ್ರ, ಪುಸ್ತಕ, ಕ್ಷೀರಭಾಗ್ಯದಡಿ ಹಾಲು ವಿತರಣೆ ಮುಂತಾದ ಯೋಜನೆಗಳ ಅನುಷ್ಠಾನದ ಬಗ್ಗೆ ಶಾಲಾ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.[ಬಿಸಿಯೂಟದ ರುಚಿ ನೋಡಿದ ಸಿಎಂ]

midday meal

ಶಾಲೆಯ ಶೌಚಾಲಯ ಹಾಗೂ ಸ್ವಚ್ಛತೆ ಮತ್ತು ಶಾಲೆಯಲ್ಲಿ ಕೈತೋಟ ನಿರ್ಮಿಸಿಕೊಳ್ಳುವ ಬಗ್ಗೆ ಶಾಲೆಯ ಶಿಕ್ಷಕರು ಆಸಕ್ತಿ ವಹಿಸಬೇಕೆಂದು ಸಲಹೆ ನೀಡಿದರಲ್ಲದೆ, ಮಕ್ಕಳಿಗೆ ಮಳೆ ನೀರು ಕೊಯ್ಲು ಕುರಿತು ಶಿಕ್ಷಕರು ಮಾರ್ಗದರ್ಶನ ನೀಡಬೇಕೆಂದು ಸೂಚನೆ ನೀಡಿದರು.[ತಂದೆಯ ಜೊತೆ ಕೂಲಿ ಮಾಡುತ್ತಿದ್ದ ಬಾಲಕ ಶಾಲೆ ಸೇರಿದ]

ಬಿಸಿಯೂಟ ಸೇವನೆ : ಶಾಲೆಯ ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಬಿಸಿಯೂಟ ಸವಿದರು. 'ಮಕ್ಕಳ ಜೊತೆ ಊಟ ಸವಿದಿದ್ದು ಸಂತೋಷ ತಂದಿದೆ. 15 ವರ್ಷಗಳ ಹಿಂದೆ ತಾವೂ ಸಹ ಇದೇ ರೀತಿ ಕಷ್ಟಪಟ್ಟು ಓದಿ, ಉನ್ನತ ಹುದ್ದೆಗೆ ಬಂದಿದ್ದೇನೆ. ಸಾಧಿಸುವ ಛಲವೊಂದಿದ್ದರೆ, ಮಕ್ಕಳು ಏನನ್ನಾದರೂ ಸಾಧಿಸಬಹುದು' ಎಂದರು.

ಚೆನ್ನಾಗಿ, ಕಷ್ಟಪಟ್ಟು ಓದಿ, ಶಾಲೆ, ಗ್ರಾಮ ಹಾಗೂ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಮಕ್ಕಳಿಗೆ ಕರೆ ನೀಡಿದರು. ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

midday meal2

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Koppal zilla panchayat CEO R. Ramachandran tastes mid-day meal with students at Yelburga taluk Hirearahalli village.
Please Wait while comments are loading...