ಎಸಿಬಿ ಬಲೆಗೆ ಬಿದ್ದ ಯಲಬುರ್ಗಾ ಪಟ್ಟಣ ಪಂಚಾಯತ್ ಅಧಿಕಾರಿಗಳು

Subscribe to Oneindia Kannada

ಕೊಪ್ಪಳ, ಏಪ್ರಿಲ್ 21: 15,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಲಬುರ್ಗಾ ಟೌನ್ ಪಟ್ಟಣ ಪಂಚಾಯಿತಿಯ ಇಬ್ಬರು ಸಿಬ್ಬಂದಿಗಳನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣ ಪಂಚಾಯಿತಿ ಜೆ.ಇ ಆಗಿರುವ ಓಂಕಾರಮೂರ್ತಿ ವೀರಾಚಾರ ಬಡಿಗಾರ್ ರವರು ವಾಟರ್ ಸೂಪರ್‍ವೈಸರ್ ಮಹಂತೇಶ್ ನಿಂಗಪ್ಪ ಇಂಡಿಯಾರ್ ರವರ ಮುಖಾಂತರ ಗುತ್ತಿಗೆದಾರರೊಬ್ಬರಿಂದ ರೂಪಾಯಿ 15,000ಗಳ ಲಂಚ ಸ್ವೀಕರಿಸುತ್ತಿದ್ದರು. ಈ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ದಸ್ತಗಿರಿ ಮಾಡಿದ್ದಾರೆ.[ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ]

Koppal: Two Elaburga town panchayat officials caught red hand by ACB

ಬಂಧಿತರು ಕಾಮಗಾರಿಯೊಂದರ ಅಳತೆ ಪುಸ್ತಕ ಹಾಗೂ ಕಾಮಗಾರಿಯ ಬಿಲ್ ಮೊತ್ತ ರೂ. 1.5 ಲಕ್ಷ ಮಂಜೂರಾತಿಗಾಗಿ ಗುತ್ತಿಗೆದಾರರಿಂದ 15,000 ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.[ಮಂಡ್ಯದಿಂದ ವಿಜಯಪುರದವರೆಗೆ ನಿಮ್ಮೂರಲ್ಲೊಂದು ಸುತ್ತಾಟ]

ಬಂಧಿತರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಎಸಿಬಿ ಕೊಪ್ಪಳ ಜಿಲ್ಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Anti corruption bureau police nabbed two officials red hand, when they receiving 15,000 rupees from a contractor. Elaburga town panchayat JE Omkarmurthy has received 15,000 bribe trough Mahantesh Ningappa from a water contractor in Koppal.
Please Wait while comments are loading...