ಅರಶಿನಗುಂಡಿ ಜಲಪಾತಕ್ಕೆ ಚಾರಣ ಹೋಗೋಣ ಬನ್ನಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಕೊಲ್ಲೂರು ಮೂಕಾಂಬಿಕೆ ದರ್ಶನ ಮಾಡಲು ಹೋದವರು ಅರಶಿನಗುಂಡಿ ಜಲಪಾತಕ್ಕೆ ಭೇಟಿ ಕೊಟ್ಟು ಬರಬಹುದು. ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಪ್ರಮುಖ ನದಿಯಾದ ಸೌಪರ್ಣಿಕಾದಿಂದ ಉಂಟಾದ ಭವ್ಯ ಜಲಪಾತವೇ ಈ ಅರಶಿನಗುಂಡಿ.

ಪಶ್ಚಿಮ ಘಟ್ಟದ ಜಲಪಾತಗಳೇ ಹಾಗೆ. ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುವ ಜೊತೆಗೆ ಮನಸ್ಸನ್ನು ಮುದಗೊಳಿಸುತ್ತದೆ. ನೀವು ಚಾರಣಪ್ರಿಯರಾಗಿದ್ದಾರೆ ಒಮ್ಮೆ ಅರಶಿನ ಗುಂಡಿ ಜಲಪಾತಕ್ಕೆ ಬಂದು ಚಾರಣ ಮಾಡಲೇಬೇಕು. [ಮೂಕಾಂಬಿಕ ದೇವಾಲಯದ ಬಗ್ಗೆ ಓದಿ]

arishinagundi

ಸುಪರ್ಣನೆಂಬ ಮುನಿಯು ತನ್ನ ತಾಯಿಗಾಗಿ ಈ ನದಿಯ ತಟದಲ್ಲಿ ಘೋರ ತಪಸ್ಸು ಮಾಡಿದ್ದಕ್ಕಾಗಿ ಸೌಪರ್ಣಿಕಾ ಎಂಬ ಹೆಸರು ಬಂದಿದೆ ಎನ್ನುತ್ತದೆ ಇತಿಹಾಸ. 200-250 ಅಡಿ ಆಳಕ್ಕೆ ಮನಮೋಹಕವಾಗಿ ಕೊರೆದಂತೆ ಕಾಣಿಸುವ ಬಂಡೆಗಳ ನಡುವೆ ಧುಮ್ಮಿಕ್ಕುತ್ತಿರುವ ಜಲಪಾತವನ್ನು ನೋಡುವುದೇ ಒಂದು ಸೊಗಸು. [ಕೊಲ್ಲೂರು ಮೂಕಾಂಬಿಕೆ ದೇವಿಯ ಒಡವೆ ಕದ್ದ ಐವರ ಬಂಧನ]

ಅರಶಿನಗುಂಡಿ ಜಲಪಾತ ಸೌಂದರ್ಯದಲ್ಲಿ ರಾಜ್ಯದ ಇತರ ಜಲಪಾತಗಳಿಗೆ ಪೈಪೋಟಿ ನೀಡುವಂತಿದೆ. ತುಂಬಾ ತಣ್ಣಗಿನ ಶುದ್ಧ ಸ್ಫಟಿಕದಂಥ ನೀರು, ದೂರದಿಂದ ನಡೆದು ಬರುವ ಚಾರಣಿಗರ ದಣಿವನ್ನು ತಣಿಸುತ್ತದೆ. [ಕೊಲ್ಲೂರು ದೇವಳದಲ್ಲಿ ಟಿಪ್ಪು ಹೆಸರಿನಲ್ಲಿ ನಿತ್ಯಪೂಜೆ]

ಎಷ್ಟು ದೂರ? : ಅರಶಿನಗುಂಡಿ ಜಲಪಾತ ಕೊಲ್ಲೂರಿನಿಂದ 6 ಕಿ.ಮೀ.ದೂರದಲ್ಲಿದೆ. ಕೊಲ್ಲೂರು ಘಾಟಿಗೆ ಹೋಗುವ ಮುಖ್ಯ ರಸ್ತೆಯಿಂದ ದತ್ತ ಮೂಕಾಂಬಿಕ ವನ್ಯ ಜೀವಿ ಅಭಯಾರಣ್ಯದ ನಡುವಿನ ಕಾಲುದಾರಿಯಲ್ಲಿ ಸುಮಾರು 6 ಕಿ.ಮೀ.ನಷ್ಟು ದೂರ ಚಾರಣ ಮಾಡಬೇಕು. [ಕಪಿಲ ತೀರದಲ್ಲಿರುವ ಶಿಶಿಲೇಶ್ವರಕ್ಕೆ ಒಮ್ಮೆ ಭೇಟಿ ಕೊಡಿ]

ಪ್ರಯಾಣ ಹೇಗೆ? : ದೇವಾಲಯದಿಂದ ಮುಂದೆ ಘಾಟಿಗೆ ಹೋಗುವ ಮಾರ್ಗದಲ್ಲಿ 2 ಕಿ.ಮೀ. ಕ್ರಮಿಸಿ ಮೂಕಾಂಬಿಕಾ ಅಭಯಾರಣ್ಯ ತಲುಪಬೇಕು. ಅಲ್ಲಿಂದ ಬಲಕ್ಕೆ ಚಲಿಸಿದಾಗ ಅಭಯಾರಣ್ಯದ ಪ್ರವೇಶದ್ವಾರವಿದ್ದು ಒಳದಾರಿಯಲ್ಲಿ ಹೋದಾಗ 'ಫಾಲ್ಸ್‌ಗೆ ಹೋಗುವ ದಾರಿ' ಎಂಬ ಫಲಕ ಸಿಗುತ್ತದೆ. ಅಲ್ಲಿಂದ ಎಡಕ್ಕೆ ಮುಂದುವರಿದರೆ ಈ ಜಲಪಾತ ತಲುಪಬಹುದು.

-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Arishinagundi falls Kollur is one of the best destinations for trekking. Kollur is a small temple-town in Kundapur taluk of Udupi district. Kollur famous for Mookambika temple.
Please Wait while comments are loading...