ರಾಜ್ಯದ ಮೊದಲ ಡಿಜಿಟಲ್ ಹಳ್ಳಿ ಕೋಲಾರದ ಯಶವಂತಪುರ

Written By:
Subscribe to Oneindia Kannada

ಬೆಂಗಳೂರು, ಜುಲೈ 01: ಕರ್ನಾಟಕದ ಕೋಲಾರ ಜಿಲ್ಲೆ ಮಾಲೂರಿನ 'ಯಶವಂತಪುರ' ಗ್ರಾಮ ರಾಜ್ಯದ ಮೊದಲ ಡಿಜಿಟಲ್ ವಿಲೇಜ್' ಎಂಬ ಹೆಮ್ಮೆಯ ಗರಿಯನ್ನು ತನ್ನ ಮುಡಿಗೇರಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪುಗೊಂಡಿರುವ ರಾಜ್ಯದ ಮೊದಲ ಡಿಜಿಟಲ್ ವಿಲೇಜ್' ಅನ್ನು ಮಾಲೂರು ಶಾಸಕ ಎಸ್.ಮಂಜುನಾಥ್ ಗೌಡ ಲೋಕಾರ್ಪಣೆಗೊಳಿಸಿದರು.

'ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ..' ಇದು ಗಾಂಧಿ ಕನಸಿನ ಗ್ರಾಮಸ್ವರಾಜ್ಯದ ಪರಿಕಲ್ಪನೆ. ಈ ಪರಿಕಲ್ಪನೆಯ ಮೊದಲ ಹೆಜ್ಜೆಯಾಗಿ ಕೋಲಾರ ಜಿಲ್ಲೆ, ಮಾಲೂರು ತಾಲೂಕಿನಲ್ಲಿರುವ ಯಶವಂತಪುರ' ಗ್ರಾಮ ಡಿಜಿಟಲ್ ವಿಲೇಜ್ ಆಗಿ ಇತರ ಹಳ್ಳಿಗಳಿಗೂ ಮಾದರಿಯಾಗುವತ್ತ ಹೆಜ್ಜೆ ಇಟ್ಟಿದೆ.[ಎಸ್‌ಬಿಐನಲ್ಲಿ ವಿಲೀನಗೊಳ್ಳುತ್ತಿರುವ 5 ಬ್ಯಾಂಕ್‌ಗಳು ಯಾವವು?]

sbi

ಇದೇವೇಳೆ ಬ್ಯಾಂಕಿನ ವತಿಯಿಂದ ಸ್ಥಾಪಿಸಲಾಗಿರುವ ಸೌರವಿದ್ಯುತ್ ಚಾಲಿತ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸೌರವಿದ್ಯುತ್ ಚಾಲಿತ ಗ್ರಾಹಕರ ಸೇವಾ ಕೇಂದ್ರವನ್ನು ಬಲೂನ್ ಹಾರಿಬಿಡುವ ಮೂಲಕ ಉದ್ಘಾಟಿಸಲಾಯಿತು. ಈ ವೇಳೆ ಎಸ್ ಬಿಐ ನ ಪ್ರಾದೆಶಿಕ ವ್ಯವಸ್ಥಾಪಕರಾದ ಶ್ರೀ ಎಸ್. ದಿನೇಶ್, ಮಾಲೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕರಾದ ರಮೇಶ್ ಉಪಸ್ಥಿತರಿದ್ದರು.

ಡಿಜಿಟಲ್ ವಿಲೇಜ್‍ನ ವಿಶೇಷತೆಗಳು:
ಇನ್ನುಂದೆ ಯಶವಂತಪುರ ಗ್ರಾಮಸ್ಥರು ತಮ್ಮ ಗ್ರಾಮದಲ್ಲೇ ಕಾಗದ ರಹಿತ, ನಗದು ರಹಿತ ವಹಿವಾಟು ನಡೆಸಬಹುದು. ಇಷ್ಟು ದಿನ ನೇಗಿಲು ಹಿಡಿಯುತ್ತಿದ್ದ ಯಶವಂತಪುರ ಗ್ರಾಮದ ರೈತರ ಕೈಗಳಿಗೆ ಇದೀಗ ಕಂಪ್ಯೂಟರ್, ಸ್ಮಾರ್ಟ್ ಫೋನ್ ಬಂದಿದೆ. ಇಷ್ಟೇ ಅಲ್ಲ, ಇವುಗಳನ್ನು ಪರಿಣಾಮಕಾರಿಯಾಗಿ ಬಳಸುವ ತರಬೇತಿಯನ್ನೂ ಗ್ರಾಮಸ್ಥರಿಗೆ ನೀಡಲಾಗಿದೆ. 450 ಮನೆಗಳಿರೋ ಯಶವಂತಪುರದಲ್ಲಿ ಸಂಪೂರ್ಣ ಡಿಜಿಟಲ್ ಕ್ರಾಂತಿಯಾಗಿದ್ದು, ಗ್ರಾಮದಲ್ಲಿರೋ ಒಟ್ಟು 2500 ಮಂದಿ ವರ್ಷದ 365 ದಿನವೂ ಉಚಿತ ವೈ-ಫೈ ಸೌಲಭ್ಯ ಬಳಸಬಹುದಾಗಿದೆ[ಕೋಲಾರದ ಕೆರೆ ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆಗೆ ಚಾಲನೆ]

sbi

ಯಶವಂತಪುರ ಗ್ರಾಮದ ಯಾವೊಬ್ಬ ರೈತನೂ ಬ್ಯಾಂಕಿಂಗ್ ವಹಿವಾಟು ನಡೆಸೋಕೆ ದೂರದ ನಗರಕ್ಕೆ ಹೋಗಬೇಕಿಲ್ಲ.. ಸ್ಟೇಟ್ ಬ್ಯಾಂಕ್ ಇಂಡಿಯಾ ವತಿಯಿಂದ ಗ್ರಾಮದಲ್ಲಿ ಎಟಿಎಂ ಕೇಂದ್ರ ಮತ್ತು ಕಮ್ಯುನಿಟಿ ಸರ್ವಿಸ್ ಪಾಯಿಂಟ್ ಸ್ಥಾಪಿಸಲಾಗಿದೆ. ಇದರಿಂದ ಕೃಷಿ ಉತ್ಪನ್ನ ಮಾರಾಟ ಸೇರಿದಂತೆ ಯಾವುದೇ ವಹಿವಾಟನ್ನೂ ರೈತರು ಆನ್ ಲೈನ್ ಮೂಲಕವೇ ನಗದು ವರ್ಗಾವಣೆ ಮಾಡಬಹುದು. ಸಾಲವನ್ನು ರೈತರು ಬೆರಳ ತುದಿಯಲ್ಲೇ ಮರುಪಾವತಿ ಮಾಡಬಹುದು.[ಬಯಲುಸೀಮೆ ಗೌರಿಬಿದನೂರಲ್ಲಿ ಹಸಿರು ಕ್ರಾಂತಿ]

sbi

ಇದರಿಂದ ಯಶವಂತಪುರ ಗ್ರಾಮಸ್ಥರು ತಮ್ಮ ಹಳ್ಳಿಯ ಅಂಗಡಿಯಿಂದ ಯಾವುದೇ ಸಾಮಾನು ಕೊಂಡರೂ ಸ್ಮಾರ್ಟ್ ಪೋನ್ ಬಳಕೆ ಮಾಡಿಕೊಂಡೆ ಅಂಗಡಿ ಮಾಲೀಕನಿಗೆ ಸುಲಭವಾಗಿ ಹಣ ವರ್ಗಾವಣೆ ಮಾಡುವಷ್ಟು ಸ್ವಾವಲಂಬನೆ ಸಾಧಿಸಿದ್ದಾರೆ ಎನ್ನಲು ಯಾವುದೇ ಅಡ್ಡಿ ಇಲ್ಲ.

ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮದಲ್ಲಿ ಸ್ಥಾಪಿಸಿರುವ ಕಮ್ಯುನಿಟಿ ಸರ್ವಿಸ್ ಪಾಯಿಂಟ್ ಮೂಲಕವೂ ರೈತರು ತಮ್ಮ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದು. ಬ್ಯಾಂಕ್ ನಲ್ಲಿ ಹೊಸ ಖಾತೆ ತೆರೆಯುವುದರಿಂದ ಹಿಡಿದು ನೀರು, ವಿದ್ಯುತ್, ದೂರವಾಣಿ ಬಿಲ್ ಪಾವತಿ ಸೇರಿದಂತೆ ಹಲವು ಸೇವೆಗಳನ್ನು ಈ ಕೇಂದ್ರದಿಂದ ನಿರ್ವಹಿಸಲಾಗುತ್ತದೆ.

sbi

ಆಧಾರ್ ಲಿಂಕ್ ಆಗಿರುವ ಸರ್ಕಾರ ಎಲ್ಲ ಸೌಲಭ್ಯಗಳನ್ನೂ ಈ ಕಮ್ಯುನಿಟಿ ಸರ್ವಿಸ್ ಪಾಯಿಂಟ್ ನಲ್ಲಿ ಪಡೆದುಕೊಳ್ಳಬಹುದು. ಗ್ರಾಮದಲ್ಲಿ ಕಲ್ಪಿಸಿರುವ ಡಿಜಿಟಲ್ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವ ಎಸ್ ಬಿಐ ನಾಗರಿಕರಿಗೆ ತರಬೇತಿಯನ್ನೂ ನೀಡಿದೆ.

ಡಿಜಿಟಲ್ ಕ್ರಾಂತಿಯ ಮೂಲಕ ಸ್ವಾವಲಂಬಿ ಗ್ರಾಮದ ಮಂತ್ರ ಜಪಿಸುತ್ತಿರುವ ಈ ಹಳ್ಳಿಯಲ್ಲಿ ಎಸ್ ಬಿಐ ವತಿಯಿಂದ 25 ಸೋಲಾರ್ ಬೀದಿದೀಪಗಳನ್ನು ಅಳವಡಿಸುವ ಕೆಲಸವೂ ನಡೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
SBI has developed a small village in Malur Taluk of Kolar district in to ‘First Digital Village of Karnataka'. Yashwantpur village is the latest addition to the list of self-reliant digital villages. Farmers of Yashwanthpur will now do all bank transactions through computers and smartphones, thanks to the efforts by State Bank of India. Otherwise normal farmers of this village are trained to use technology effectively.
Please Wait while comments are loading...