Kodi Sri On Chandrayaan 3: ಚಂದ್ರಯಾನ ಯಶಸ್ವಿಯಾಗುತ್ತಾ? ಕೋಡಿಮಠ ಶ್ರೀ ಹೇಳಿದ್ದೇನು ಗೊತ್ತಾ?
ಇಂದು ಇಡೀ ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತದತ್ತ ನೋಡುತ್ತಿದ್ದರೆ, ಎಲ್ಲಾ ಭಾರತೀಯರು ಚಂದ್ರನತ್ತ ನೋಡುತ್ತಿದ್ದಾರೆ. ಚಂದ್ರಯಾನ -3 ನೌಕೆ ಚಂದ್ರನ ಅಂಗಳದಲ್ಲಿ ಇಳಿಯಲು ಕ್ಷಣಗಣನೆ ಆರಂಭವಾಗಿದ್ದು, ಆಗಸ್ಟ್ 23 ರಂದು ಸಂಜೆ ಸಾಫ್ಟ್ ಲ್ಯಾಂಡಿಂಗ್‌ಗೆ ಮುಹೂರ್ತ ನಿಗದಿ ಮಾಡಲಾಗಿದೆ.
ಚಂದ್ರಯಾನ -3 ಯಶಸ್ವಿಯಾಗಲಿ ಎಂದು ದೇಶದ ಮೂಲೆ ಮೂಲೆಗಳಿಂದ ಜನ ಪ್ರಾರ್ಥನೆ ಮಾಡುತ್ತಿದ್ದಾರೆ. ಮಂದಿರ, ಮಸೀದಿಗಳಲ್ಲೂ ಪೂಜೆ - ಪ್ರಾರ್ಥನೆ ಸಲ್ಲಿಸುವ ಮೂಲಕ ಇಸ್ರೋ ಜೊತೆ ಭಾರತೀಯರು ನಿಂತಿದ್ದಾರೆ. ಇತ್ತ ಇಸ್ರೋ ಕೂಡ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ.

ರಾಜ್ಯ-ದೇಶ-ವಿದೇಶಗಳ ವಿದ್ಯಮಾನಗಳ ಬಗ್ಗೆ ಭವಿಷ್ಯ ನುಡಿಯುವಲ್ಲಿ ಭಾರಿ ಪ್ರಸಿದ್ಧವಾಗಿರುವ ಕೋಡಿಮಠ ಶ್ರೀಗಳು ಕೂಡ ಭಾರತದ ಚಂದ್ರಯಾನದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಭಾರತದ ಮಹತ್ವಪೂರ್ಣ ಚಂದ್ರಯಾನ -3 ಯಶಸ್ವಿಯಾಗಲಿದೆ ಎಂದು ಹೇಳುವ ಮೂಲಕ ಭಕ್ತರ ಆತಂಕ ದೂರವಾಗಿಸಿದ್ದಾರೆ.
ಕೋಡಿಮಠಶ್ರೀಗಳ ಭವಿಷ್ಯ ಬಹುತೇಕ ಸಂದರ್ಭಗಳಲ್ಲಿ ನಿಜವಾಗುವ ಕಾರಣ ಭಕ್ತರ ಆತ್ಮವಿಶ್ವಾಸ ಹೆಚ್ಚಾಗಿದೆ. ಕೋಡಿಮಠ ಶ್ರೀಗಳ ಭವಿಷ್ಯವಾಣಿ ಇಸ್ರೋ ವಿಜ್ಞಾನಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಲಿರುವ ಮೊದಲ ದೇಶ
ಈವರೆಗೂ ಚಂದ್ರನ ಅಂಗಳದಲ್ಲಿ ಮೂರು ದೇಶಗಳು ಮಾತ್ರ ಯಶಸ್ವಿಯಾಗಿ ನೌಕೆಯನ್ನು ಇಳಿಸಿವೆ. ಅಮೆರಿಕ, ಚೀನಾ, ರಷ್ಯಾ ನಂತರ ಚಂದ್ರನ ಮೇಲೆ ನೌಕೆ ಇಳಿಸುವ ನಾಲ್ಕನೇ ದೇಶವಾಗಲು ಭಾರತ ಕಾತರವಾಗಿದೆ. ಚಂದ್ರನ ದಕ್ಷಿಣ ಧೃವದಲ್ಲಿ ಚಂದ್ರಯಾನ 3 ನೌಕೆ ಇಳಿಯಲಿದ್ದು, ಸಾಫ್ಟ್ ಲ್ಯಾಂಡಿಂಗ್ ಮಾಡಿದರೆ, ಈ ಭಾಗದಲ್ಲಿ ನೌಕೆ ಇಳಿಸಿದ ಮೊದಲ ದೇಶವಾಗಲಿದೆ.












Click it and Unblock the Notifications