ಸಿದ್ಧರಾಮಯ್ಯ ಬಗ್ಗೆ ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ: ಸಿಎಂ ಕುರ್ಚಿಗೆ ಕಾದಿದ್ಯಾ ಕಂಟಕ
ಹಾಸನ, ಜೂನ್ 23: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದು ಬರೋಬ್ಬರಿ ಎರಡು ವರ್ಷ ತುಂಬಿದ ಬೆನ್ನಲ್ಲೇ ಕೈ ಪಾಳಿಯದಲ್ಲಿ ಮಹತ್ತರ ಬೆಳವಣಿಗೆಗೆಳು ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಧ್ಯೆ ಆಂತರಿಕ ಬಿಕ್ಕಟ್ಟು ಹೆಚ್ಚುತ್ತಿದ್ದು. ಇದು ಸರ್ಕಾರದ ಸ್ಥಿರತೆ ಮತ್ತು ಕಾಂಗ್ರೆಸ್ ಪಕ್ಷದ ಭವಿಷ್ಯದ ತೀವ್ರ ಆತಂಕ ಮೂಡಿದೆ. ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಹೊತ್ತಲ್ಲೇ, ಕೋಡಿಮಠದ ಶ್ರೀಗಳು ಸ್ಟೋಟಕ ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯ ಹಾರನಹಳ್ಳಿ ಕೋಡಿಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಭಾರತಕ್ಕೆ ನಿರೀಕ್ಷೆಗೂ ಮೀರಿದಂತ ದುಃಖ ಬರಲಿದೆ. ಕರ್ನಾಟಕದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವಿಪ್ಲವದ ಲಕ್ಷಣಗಳು ಗೋಚರಿಸಲಿದ್ದಾವೆ. ಆದರೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬುದಾಗಿ ಕೋಡಿಮಠ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಈ ಹಿಂದೆ ಎರಡು ಮೂರು ಪ್ರಧಾನ ಮಂತ್ರಿಗಳ ಕೊಲೆ ಆಗ್ತಾರೆ ಎಂಬುದಾಗಿ ಭವಿಷ್ಯ ನುಡಿದಿದ್ದೆನು. ಅದು ಈಗ ಆಗಿದೆ. ಸಾಗರದಲ್ಲಿ ಒಂದು ಜಲಸ್ಪೋಟ ಎದ್ದಿದೆ. ಅದು ಕೂಡ ಆಗಲಿದೆ ಎಂದು ತಿಳಿಸಿದರು. ಇನ್ನೂ ಮೇಘ ಸ್ಪೋಟ, ಯುದ್ಧದ ಜೊತೆಗೆ ಅರಸನಾಲಯಕ್ಕೆ ಕಾರ್ಮೋಡವು ಕಾದಿದೆ. ಇದು ರಾಜ್ಯ, ದೇಶಕ್ಕೂ ಕಾಲಿಡುವುದಾಗಿ ಆಘಾತಕಾರಿ ಎಂದು ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ನುಡಿದರು.
ಇನ್ನೂ ಕೊರೋನಾ ವಿಶ್ವದಲ್ಲಿ ಮತ್ತೊಂದು ರೂಪ ತಾಳಲಿದೆ. ವಿಶ್ವದಲ್ಲಿ ನಡೆಯುತ್ತಿರುವಂತ ಯುದ್ಧ ನಿಲ್ಲೋದು ಸಂವತ್ಸರ ಪರ್ವದಲ್ಲಿ ಕಷ್ಟವಾಗಿದೆ. ಈ ದ್ವೇಷ, ಅಸೂಯೆಗಳ ಮಧ್ಯದಲ್ಲಿ ಒಂದಿಬ್ಬರು ಬಲಿಯಾಗುತ್ತಾರೆ. ಅಕಾಲದಲ್ಲಿ ಮಳೆ ಬಂದರೇ, ಸಕಾಲದಲ್ಲಿ ತೊಂದರೆ ಆಗಲಿದೆ. ಈ ಬಾರಿ ಮಳೆ ಚೆನ್ನಾಗಿ ಆಗಲಿದೆ. ಆದರೇ ಜಲಸ್ಪೋಟದ ಜೊತೆಗೆ ವಾಯು, ಭೂ ಪ್ರಳಯವಾಗುತ್ತದೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದರು.












Click it and Unblock the Notifications