ಸಿದ್ದರಾಮಯ್ಯ ಇನ್ನಷ್ಟು ಸಂಕಷ್ಟ: ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ
ಬೆಂಗಳೂರು, ಅಕ್ಟೋಬರ್ 16: ರಾಜ್ಯದಲ್ಲಿ ಮುಡಾ ಹಗರಣದ ಕುರಿತು ಮುಖ್ಯಮಂತ್ರಿ ರಾಜೀನಾಮೆಗೆ ವಿಪಕ್ಷಗಳು ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಒತ್ತಯಿಸಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರಿಗೆ ಇನ್ನಷ್ಟು ಸಂಕಷ್ಟಗಳು ಎದುರಾಗಲಿದೆ ಎಂದು ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು, ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಸಿಲುಕಿಹಾಕಿಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಆ ಸಂಕಷ್ಟದಿಂದ ಹೊರಬರಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ರಾಜಕಾರಣದಲ್ಲಿ ದುರ್ಯೋಧನ ಗೆಲ್ಲುತ್ತಾನೆ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಸಿದ್ದರಾಮಯ್ಯ ಇನ್ನಷ್ಟು ಸಂಕಷ್ಟ ಎದುರಿಸುತ್ತಾನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳಿಗೆ ನೋವು ಕೊಟ್ಟಾಗಿದೆ. ಮುಖ್ಯಮಂತ್ರಿಗಳ ಪತ್ನಿ ರಂಗ ಪ್ರವೇಶ ಮಾಡಿಯಾಗಿದೆ. ಈ ಮಹಾಭಾರತದಲ್ಲಿ ರಾಜ ಗೆಲ್ಲುತ್ತಾನೆ. ಆದರೆ ದೈವಬಲ ಈಗ ಇಲ್ಲ. ಇನ್ನೂ ಸ್ವಲ್ಪ ದಿನ ರಾಜಕೀಯ ಏರಪೇರು ನಡೆಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಕೋಡಿಮಠದ ಸ್ವಾಮೀಜಿಗಳು ತಿಳಿಸಿದ್ದಾರೆ.
ಇನ್ನೂ ಮಳೆಯ ವಿಚಾರವಾಗಿ ಮಾತನಾಡಿ, ಈ ವರ್ಷ ಹಿಂಗಾರು ಮಳೆ ಇನ್ನು ಆಗುವ ಲಕ್ಷಣಗಳು ಇದೆ. ಆದರೆ ವಿಷದ ವಾಯು ಬೀಸಿ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ ಎಂದು ಕೋಡಿ ಶ್ರೀಗಳು ಎಚ್ಚರಿಕೆ ನೀಡಿದ್ದರು. ಭೂಮಿಯಿಂದ ವಿಷ ಜಂತುಗಳು ಹೊರಕ್ಕೆ ಬರಲಿದ್ದು, ಇವುಗಳು ಮನುಷ್ಯ ಕುಲಕ್ಕೆ ಅಪಾಯ ಆಗುತ್ತವೆ. ಕಾಡಿನಿಂದ ಪ್ರಾಣಿಗಳು ಊರಿಗೆ ನುಗ್ಗುತ್ತವೆ, ಈಗ ನೋಡಿ ಮಾನವ ಹಾಗೂ ವನ್ಯ ಜೀವಿಗಳ ಸಂಘರ್ಷ ಹೆಚ್ಚಾಗಿದೆ ಎಂದು ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿಸಿದ್ದಾರೆ.
ಇದೇ ವೇಳೆ ಯುದ್ಧ ಭೀತಿ ಹೆಚ್ಚಾಗುವ ಸಾಧತ್ಯೆ ಇದೆ. ಜನರಿನಲ್ಲಿ ಶಾಂತಿ ಸಹನೆ ಇಲ್ಲ, ಆರೋಗ್ಯ ಹದಗೆಡುತ್ತಿದೆ. ದೊಡ್ಡ ದೊಡ್ಡ ನಗರಗಳಿಗೆ ಅಪಾಯ ಇದ್ದು, ಭೂ ಕಂಪನದ ಅಪಾಯಗಳು ಹೆಚ್ಚಿದೆ. ಮತ್ತೆ ಭೂ ಸಡಿಲ ಆಗಿ ಜನರಿಗೆ ತೊಂದರೆ ಆಗಲಿದೆ, ಅಕಾಶ ತತ್ವದಿಂದ ತೊಂದರೆ ಆಗುವ ಲಕ್ಷಣಗಳು ಇದೆ ಎಂದು ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ವಿಶೇಷವಾಗಿ ಕಾಲಭೈರವ ಅಸಂತೋಷಗೊಂಡಿದ್ದು, ಅವನ ಕುಲದ ಶ್ವಾನಗಳು ಜನರಿಗೆ ಬಹಳ ತೊಂದರೆ ಕೊಡ್ತಿವೆ. ಶ್ವಾನಗಳಿಗೆ ಊಟ ಹಾಕುವುದರ ಮೂಲಕ ಕಾಲಭೈರವನ ಶಾಂತಿ ಮಾಡಬೇಕಿದೆ. ಭೂಮಿಯಿಂದ ಜೀವಜಲ ಉಕ್ಕಲಿದೆ, ಪ್ರಾಣಿಗಳು ಕಾಡಿನಿಂದ ನಾಡಿನತ್ತ ಬರಲಿದ್ದು, ಅದರ ಬಗ್ಗೆ ಜನ ಎಚ್ಚರದಿಂದ ಇರಬೇಕು ಎಂದು ಕೋಡಿಹಳ್ಳಿ ಶ್ರೀಗಳು ತಿಳಿಸಿದ್ದಾರೆ.
ಇನ್ನೂ ಪಾಪದ ಪಾಶ ಉಕ್ಕಿದರೆ ಪಶ್ಚಾತ್ತಾಪ ಆಗಲಿದೆ. ಪಾಯಸಕ್ಕೆ ಹಾಕಿದ ಬೆಲ್ಲದ ಕೊಳೆ ಉಕ್ಕಬೇಕು, ತಾನು ಮಾಡಿದ ಪಾಪ ಹೋಗಬೇಕು. ತಾ ಮಾಡಿದ ಕರ್ಮ ಬಲವಂತವಾದರೇ ಯಾರೇನು ಮಾಡುವರು? ಎಂದು ಹೇಳುವ ಮೂಲಕ ನಟ ದರ್ಶನ್‌ಗೆ ಜಾಮೀನು ವಿಳಂಬವಾಗುತ್ತಿರುವುದ ಬಗ್ಗೆ ಭವಿಷ್ಯ ನುಡಿದಿದ್ದಾರೆ.












Click it and Unblock the Notifications