ಕೊಡವರಿಂದಲೇ ಕೊಡವ ಮುಸ್ಲಿಮರಾಗಿದ್ದು: ಎ.ಕೆ.ಸುಬ್ಬಯ್ಯ

ಮಡಿಕೇರಿ, ಡಿಸೆಂಬರ್, 21: ಕೊಡಗು ಜಿಲ್ಲೆಯಲ್ಲಿ ಕೊಡವರೇ ಕೊಡವ ಮುಸ್ಲಿಮರನ್ನಾಗಿ ಮಾಡಿದ್ದು ಎಂದು ಕೊಡಗು ಜಿಲ್ಲಾ ಸಮಾನ ಮನಸ್ಕರ ಜಾತ್ಯಾತೀತ ಒಕ್ಕೂಟದ ಗೌರವ ಅಧ್ಯಕ್ಷ ಎ.ಕೆ.ಸುಬ್ಬಯ್ಯ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಟಿಪ್ಪುವಿನ ಬಳಿ ಬಂಧಿಯಾಗಿದ್ದ ಕೊಡವರು ಮರಳಿ ಕೊಡಗಿಗೆ ಬಂದಾಗ ಮನೆಗಳಿಗೆ ಪ್ರವೇಶ ನೀಡದೆ ಮುಸ್ಲಿಮರೆಂದು ದೂರ ಇಟ್ಟಿದ್ದೇ ಇದಕ್ಕೆ ಕಾರಣ ಎಂದ ಅವರು, ಬಿದ್ದಾಟಂಡ ಕುಟುಂಬದ ಕೆಲವರನ್ನು ಟಿಪ್ಪು ಮತಾಂತರ ಮಾಡಿದ್ದಾನೆಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಟಿ.ಪ್ರದೀಪ್ ಭಾವಿಸಿದ್ದಾರೆ.[ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?]

Madikeri

ಟಿಪ್ಪುವಿನಿಂದ ಬಂಧನಕ್ಕೊಳಗಾದವರು ಬಹುಶಃ ಮತಾಂತರಗೊಂಡಿದ್ದರೆ ಮರಳಿ ಕೊಡಗಿಗೆ ಬರುತ್ತಿರಲಿಲ್ಲ. ಬಂಧನದಿಂದ ತಪ್ಪಿಸಿಕೊಂಡು ಬಂದವರನ್ನು ಸೇರಿಸಿಕೊಳ್ಳದೆ ನೀವು ಮುಸ್ಲಿಂರಾಗಿದ್ದೀರಿ ಎಂದು ಹೊರಗಿಟ್ಟ ಸಂದರ್ಭ ಕೊಡಗಿನ ಅರಸರು ನಿರಾಶ್ರಿತರಿಗೆ ಮಸೀದಿಗಳನ್ನು ನಿರ್ಮಿಸಿಕೊಡಬೇಕಾಯಿತು ಎಂದರು.[700 ಬ್ರಾಹ್ಮಣರನ್ನು ನೇಣಿಗೇರಿಸಿದ್ದ ದಿನದಂದು ಟಿಪ್ಪು ಜಯಂತಿ ಆಚರಿಸಲಾಯಿತೇ?]

ಕೇರಳದಿಂದ ಧರ್ಮಗುರುಗಳು ಬಂದು ನಿರಾಶ್ರಿತರಿಗೆ ಧರ್ಮ ಬೋಧನೆ ಮಾಡಬೇಕಾಯಿತು. ಟಿಪ್ಪುವಿನಿಂದ ತಪ್ಪಿಸಿಕೊಂಡು ಬಂದ ಕೊಡವರನ್ನು ಮನೆಗಳಿಗೆ ಬರಮಾಡಿಕೊಂಡಿದ್ದರೆ ಇಂದು ಕೊಡವ ಮುಸ್ಲಿಮರೆಂಬ ಭಾವನೆ ಇರುತ್ತಿರಲಿಲ್ಲ. ಆದರೆ ಕೊಡವ ಮುಸ್ಲಿಮರ ಸ್ಥಾಪನೆಯ ಮೂಲಕ ಕೊಡವರೇ ಇಸ್ಲಾಂಗೆ ದೊಡ್ಡ ಕೊಡುಗೆಯನ್ನು ನೀಡಿರುವುದರಿಂದ ಟಿಪ್ಪು ದ್ವೇಷ ಸರಿಯಲ್ಲವೆಂದು ಎ.ಕೆ.ಸುಬ್ಬಯ್ಯ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+