ಸಿದ್ದರಾಮಯ್ಯ ಸಂಪುಟ; ನೂತನ ಸಚಿವರ ವಿಧಾನಸೌಧದ ಕೊಠಡಿ ಸಂಖ್ಯೆ

ಬೆಂಗಳೂರು, ಮೇ 29; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಮಾಡಿ 34 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ರಾತ್ರಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಪರಿಪೂರ್ಣ ಮಂತ್ರಿ ಮಂಡಲ ರಚನೆಯಾಗಿದ್ದು, ಹೊಸ ಸರ್ಕಾರ ಆಡಳಿತದತ್ತ ಗಮನ ಹರಿಸಬೇಕಿದೆ.

Know Your Ministers Office Numbers At Vidhana Soudha

27/5/2023ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸಂಪುಟ ದರ್ಜೆ ಸಚಿವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ವಿಧಾನಸೌಧ/ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಸಚಿವರು, ಕೊಠಡಿಗಳ ಸಂಖ್ಯೆ

ಎಚ್. ಕೆ. ಪಾಟೀಲ್, ಕಾನೂನು & ಸಂಸದೀಯ, ಪ್ರವಾಸೋದ್ಯಮ ಸಚಿವರು. ವಿಧಾನಸೌಧದಲ್ಲಿ ಕೊಠಡಿ ಸಂಖ್ಯೆ 314-314ಎ.

Know Your Ministers Office Numbers At Vidhana Soudha

ಕೆ. ವೆಂಕಟೇಶ. ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರು. ವಿಧಾನಸೌಧದಲ್ಲಿ ಕೊಠಡಿ ಸಂಖ್ಯೆ 329-329ಎ ಹಂಚಿಕೆ ಮಾಡಲಾಗಿದೆ.

ಡಾ. ಎಚ್. ಸಿ. ಮಹದೇವಪ್ಪ. ಸಂಪುಟ ದರ್ಜೆ ಸಚಿವರು. ಸಮಾಜ ಕಲ್ಯಾಣ ಖಾತೆ. ವಿಧಾನಸೌಧ ಕೊಠಡಿ ಸಂಖ್ಯೆ 330-330ಎ.

ಕೆ. ಎನ್. ರಾಜಣ್ಣ. ಸಂಪುಟ ದರ್ಜೆ ಸಚಿವರು. ಸಹಕಾರ ಖಾತೆ ಸಚಿವರು. ವಿಧಾನಸೌಧ ಕೊಠಡಿ ಸಂಖ್ಯೆ 339-339ಎ.

ಶರಬಸಪ್ಪ ದರ್ಶನಾಪುರ್‌. ಸಂಪುಟ ದರ್ಜೆ ಸಚಿವರು. ಸಣ್ಣ ಕೈಗಾರಿಕೆ & ಸಾರ್ವಜನಿಕ ಉದ್ದಿಮೆ ಖಾತೆ ಸಚಿವರು. ವಿಧಾನಸೌಧ ಕೊಠಡಿ ಸಂಖ್ಯೆ 328-328ಎ.

ಸಂತೋಷ ಎಸ್. ಲಾಡ್. ಸಂಪುಟ ದರ್ಜೆ ಸಚಿವರು. ಕಾರ್ಮಿಕ ಇಲಾಖೆ. ವಿಧಾನಸೌಧ ಕೊಠಡಿ ಸಂಖ್ಯೆ 342-342ಎ.

ಸುರೇಶ್ ಬಿ. ಎಸ್.. ಸಂಪುಟ ದರ್ಜೆ ಸಚಿವರು. ನಗರಾಭಿವೃದ್ಧಿ, ನಗರ ಯೋಜನೆ ಖಾತೆ ಸಚಿವರು. ವಿಧಾನಸೌಧ ಕೊಠಡಿ ಸಂಖ್ಯೆ 316-316ಎ.

ಬಿ. ನಾಗೇಂದ್ರ. ಸಂಪುಟ ದರ್ಜೆ ಸಚಿವರು. ಯುವ ಸಬಲೀಕರಣ, ಕ್ರೀಡೆ ಇಲಾಖೆ. ವಿಧಾನಸೌಧ ಕೊಠಡಿ ಸಂಖ್ಯೆ 343-343ಎ.

ಕೃಷ್ಣ ಬೈರೇಗೌಡ. ಸಂಪುಟ ದರ್ಜೆ ಸಚಿವರು. ಕಂದಾಯ ಇಲಾಖೆ. ವಿಕಾಸ ಸೌಧ ಕೊಠಡಿ ಸಂಖ್ಯೆ 245-245.

ಡಾ. ಎಂ. ಸಿ. ಸುಧಾಕರ್. ಸಂಪುಟ ದರ್ಜೆ ಸಚಿವರು. ಉನ್ನತ ಶಿಕ್ಷಣ ಇಲಾಖೆ. ವಿಕಾಸ ಸೌಧ ಕೊಠಡಿ ಸಂಖ್ಯೆ 344-45.

ರಹೀಂ ಖಾನ್. ಸಂಪುಟ ದರ್ಜೆ ಸಚಿವರು. ಪೌರಾಡಳಿತ ಮತ್ತು ಹಜ್ ಖಾತೆ ಸಚಿವರು. ವಿಕಾಸ ಸೌಧ. ಕೊಠಡಿ ಸಂಖ್ಯೆ 38-39.

ಲಕ್ಷ್ಮೀ ಹೆಬ್ಬಾಳ್ಕರ್. ಸಂಪುಟ ದರ್ಜೆ ಸಚಿವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರು. ವಿಧಾನ ಸೌಧ ಕೊಠಡಿ ಸಂಖ್ಯೆ 301-301ಎ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+