ಶಿವರಾತ್ರಿ; ಕಲ್ಯಾಣ ಕರ್ನಾಟಕ ನಿಗಮದಿಂದ ವಿಶೇಷ ಬಸ್ ವ್ಯವಸ್ಥೆ
ಬೆಂಗಳೂರು, ಫೆಬ್ರವರಿ 27; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ತನ್ನ ವಿವಿಧ ವಿಭಾಗದಿಂದ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ. ಜನರು ವಿಶೇಷ ಬಸ್‌ಗಳ ವ್ಯವಸ್ಥೆ ಉಪಯೋಗ ಪಡೆಯಬೇಕು ಎಂದು ಮನವಿ ಮಾಡಲಾಗಿದೆ.
ಕಲಬುರಗಿ ವಿಭಾಗ-1 ರಿಂದ ಮಾರ್ಚ್ 1 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂನಲ್ಲಿ ನಡೆಯಲಿರುವ ಜಾಗರಣೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಫೆಬ್ರವರಿ 27 ರಿಂದ ಮಾರ್ಚ್ 3 ರವರೆಗೆ ಕಲಬುರಗಿ ಘಟಕ-1 ಮತ್ತು 4, ಚಿಂಚೋಳಿ, ಚಿತ್ತಾಪೂರ ಹಾಗೂ ಸೇಡಂ ಘಟಕಗಳಿಂದ ಶ್ರೀಶೈಲಂಗೆ ವಿಶೇಷ ಬಸ್ ಓಡಿಸಲಾಗುತ್ತಿದೆ.
ಈ ಘಟಕಗಳ ವ್ಯಾಪ್ತಿಗೆ ಬರುವ ಕಲಬುರಗಿ, ಸೇಡಂ, ಚಿಂಚೋಳಿ, ಚಿತ್ತಾಪೂರ, ಕಾಳಗಿ, ಕಮಲಾಪುರ ಹಾಗೂ ಶಹಾಬಾದ ತಾಲೂಕು ಪ್ರದೇಶದಿಂದ ಹಾಗೂ ಇನ್ನಿತರ ಗ್ರಾಮಗಳಿಂದ ನೇರವಾಗಿ 45 ರಿಂದ 50 ಜನರು ಒಟ್ಟಿಗೆ ಸೇರಿ ಶ್ರೀಶೈಲಂಗೆ ಪ್ರಯಾಣಿಸಲು ಇಚ್ಛಿಸಿದ್ದಲ್ಲಿ ಪ್ರಯಾಣಿಕರು ಪ್ರಯಾಣಿಸುವ ಸ್ಥಳದಿಂದಲೇ ನೇರವಾಗಿ ಶ್ರೀಶೈಲಂಗೆ ಹೆಚ್ಚಿನ ವಾಹನಗಳ ಸಾರಿಗೆ ಸೌಕರ್ಯ ಕಲ್ಪಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿಗಳ ಮೊಬೈಲ್ ಸಂಖ್ಯೆ 7760992102, ವಿಭಾಗೀಯ ತಾಂತ್ರಿಕ ಶಿಲ್ಪಿ ಮೊಬೈಲ್ ಸಂಖ್ಯೆ 7760992101, ಕಲಬುರಗಿ ಘಟಕ-1ರ ಘಟಕ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ 7760992113, ಚಿಂಚೋಳಿ ಘಟಕದ ಘಟಕ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ 7760992117,ಚಿತ್ತಾಪೂರ ಘಟಕ ಘಟಕ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ 7760992119, ಸೇಡಂ ಘಟಕ ಘಟಕ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ 7760992466 ಹಾಗೂ ಕಾಳಗಿ ಘಟಕ ಘಟಕ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ 7760992120ಗಳಿಗೆ ಸಂಪರ್ಕಿಸಲು ಕೋರಿದೆ.
ವಿಶೇಷ ಬಸ್ ವ್ಯವಸ್ಥೆ; ಬಳ್ಳಾರಿಯ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ವಿಭಾಗದಿಂದ ಬಳ್ಳಾರಿ, ಮೋಕಾ, ಕುರುಗೋಡು, ಸಿರುಗುಪ್ಪ, ತೆಕ್ಕಲಕೋಟ, ಹಳೇಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ಹೋಗುತ್ತಿದ್ದು, ಸದರಿ ಭಕ್ತಾಧಿಗಳ ಅನುಕೂಲಕ್ಕಾಗಿ ಫೆಬ್ರವರಿ 26ರಿಂದ ಮಾರ್ಚ್ 4ರವರೆಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿಯ 1ನೇ ಘಟಕ ವ್ಯವಸ್ಥಾಪಕರ ಮೊಬೈಲ್ 7760992163, 2ನೇ ಘಟಕ ವ್ಯವಸ್ಥಾಪಕರ ಮೊಬೈಲ್ 7760992164, ಸಿರುಗುಪ್ಪ ಘಟಕ ವ್ಯವಸ್ಥಾಪಕರ ಮೊಬೈಲ್ 7760992165 ಹಾಗೂ ಕುರುಗೋಡು ಘಟಕ ವ್ಯವಸ್ಥಾಪಕರ ಮೊಬೈಲ್ 9606483671ಗೆ ಸಂಪರ್ಕಿಸಬಹುದು.
ಪ್ರಯಾಣ ದರ ಇಳಿಕೆ; ಬಳ್ಳಾರಿ-ತಿರುಪತಿ ನಾನ್ ಎ/ಸಿ ಸ್ಲೀಪರ್ ಹಾಗೂ ಬಳ್ಳಾರಿ-ಬೆಂಗಳೂರು ರಾಜಹಂಸ ಬಸ್ ಸಾರಿಗೆ ಪ್ರಯಾಣ ದರವನ್ನು ಇಳಿಕೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಮಾರ್ಗ ತಿರುಪತಿ ವಯಾ ಅನಂತಪುರ, ನಾನ್ ಎ/ಸಿ ಸ್ಲೀಪರ್ ಬಸ್ ರಾತ್ರಿ 9.5ಕ್ಕೆ ಹೊರಡಲಿದ್ದು ಪ್ರಯಾಣ ದರವು ರೂ.750 ಮತ್ತು ಬಳ್ಳಾರಿಯಿಂದ ಬೆಂಗಳೂರುಗೆ ಹೊರಡಲಿರುವ ರಾಜಹಂಸ ಬಸ್‍ವು ಬೆಳಗ್ಗೆ 4.45, ಸಂಜೆ 5.05 ಮತ್ತು 6ಕ್ಕೆ ಹೊರಡಲಿದ್ದು ಪ್ರಯಾಣ ದರವು ರೂ. 400 ಆಗಿರುತ್ತದೆ.
ಈ ಸಾರಿಗೆ ಸೌಲಭ್ಯಕ್ಕಾಗಿ ವೆಬ್ ಸೈಟ್‌ಗೆ ಲಾಗ್ ಇನ್ ಆಗುವ ಮೂಲಕ ಆನ್ ಲೈನ್ ಮುಖಾಂತರ ಮಾರ್ಚ್ 24ರಿಂದ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದು ಮತ್ತು ಪ್ರತಿಷ್ಠಿತ ಸಾರಿಗೆಗಳ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು.












Click it and Unblock the Notifications