ಕೆಜೆ ಜಾರ್ಜ್ ಮತ್ತೆ ಸಂಪುಟಕ್ಕೆ, ಸೆ. 26ರಂದು ಪ್ರಮಾಣ ವಚನ

Posted By:
Subscribe to Oneindia Kannada

ಬೆಂಗಳೂರು, ಸೆ. 24: ಡಿವೈಎಸ್ಪಿ ಎಂಕೆ ಗಣಪತಿ ಸಾವಿನ ಪ್ರಕರಣದಲ್ಲಿಆರೋಪಿಯಾಗಿದ್ದ ಕೆಜೆ ಜಾರ್ಜ್ ಅವರಿಗೆ ಸಿಐಡಿಯಿಂದ ಕ್ಲೀನ್ ಚಿಟ್ ಸಿಕ್ಕಿರುವ ಹಿನ್ನಲೆಯಲ್ಲಿ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸಿದ್ದರಾಮಯ್ಯ ಅವರು ಸೇರಿಸಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 26ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

ಎಂಕೆ ಗಣಪತಿ ಪ್ರಕರಣದಲ್ಲಿ ಆರೋಪ ಹೊತ್ತುಕೊಂಡಿದ್ದ ಕೆಜೆ ಜಾರ್ಜ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವಿಪಕ್ಷಗಳ ಒತ್ತಾಯಕ್ಕೆ ಮಣಿದು ರಾಜೀನಾಮೆ ನೀಡಿದ್ದೇನೆ. ನಾನು ನಿರಪರಾಧಿ ಎಂದು ಜಾರ್ಜ್ ಹೇಳಿದ್ದರು. ಈಗ ಎರಡೂವರೆ ತಿಂಗಳೊಳಗೆ ಮತ್ತೆ ಸಚಿವ ಸಂಪುಟ ಸೇರುತ್ತಿದ್ದಾರೆ.

KJ George to be reinstated in to Siddaramaiah Cabinet

ಸೋಮವಾರ ಬೆಳಗ್ಗೆ 9.30ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಡಿವೈಎಸ್‍ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಅವರು ಆರೋಪ ಹೊತ್ತಿದ್ದರು. ಆದರೆ, ಸಿಐಡಿಯಿಂದ ಜಾರ್ಜ್ ಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಮಡಿಕೇರಿಯ ಜೆಎಂಎಎಫ್ ಸಿ ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸಿದ್ದರು.

ಸದ್ಯ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಳಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಉಳಿಸಿಕೊಂಡಿದ್ದು, ಜಾರ್ಜ್ ಅವರು ಸಂಪುಟ ಸೇರಿದ ಬಳಿಕ ಖಾತೆಯನ್ನು ಹಸ್ತಾಂತರಿಸುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
KJ George to be reinstated into Siddaramaiah Cabinet on Monday(September 26). KJ George who was Former Minister for Bengaluru Development and Town Planning will take oath as a Minister in Karnataka Government.KJ George was forced to resign from his post by the opposition after he was accused in DYSP, MK Ganapathi's death case.
Please Wait while comments are loading...