ಕರ್ನಾಟಕದಲ್ಲೂ ಓಡಲಿದೆ ಕಿಸಾನ್ ರೈಲು; ವೇಳಾಪಟ್ಟಿ

ಬೆಂಗಳೂರು, ಸೆಪ್ಟೆಂಬರ್ 15: ಕೇಂದ್ರ ಸರ್ಕಾರದ ಘೋಷಣೆ ಮಾಡಿರುವ ಕಿಸಾನ್ ರೈಲು ಕರ್ನಾಟಕದಲ್ಲಿಯೂ ಸಂಚಾರ ನಡೆಸಲಿದೆ. ಈಗಾಗಲೇ ಆರಂಭವಾಗಿರುವ ದೇಶದ ಮೊದಲ ಕಿಸಾನ್ ರೈಲು ನವದೆಹಲಿ ತಲುಪಿದೆ.

ನೈಋತ್ಯ ರೈಲ್ವೆ ಕರ್ನಾಟಕದಲ್ಲಿ ಕಿಸಾಸ್ ರೈಲು ಸಂಚಾರದ ಬಗ್ಗೆ ಮಾಹಿತಿ ನೀಡಿದೆ. ಕೃಷಿ ಉತ್ಪನ್ನಗಳನ್ನು ಕಡಿಮ ಖರ್ಚಿನಲ್ಲಿ ರಾಜ್ಯಗಳಿಗೆ ಸಾಗಾಟ ಮಾಡುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಇದಾಗಿದೆ.

19/9/2020 ರಿಂದ 17/10/2020ರವರೆಗೆ ಕಿಸಾನ್ ರೈಲು ಮೈಸೂರು, ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು ಮತ್ತು ದೆಹಲಿಯ ಹಜರತ್ ನಿಜಾಮುದ್ದೀನ್ ನಡುವೆ ಸಂಚಾರ ನಡೆಸಲಿದೆ. ರೈಲು ಪ್ರತಿ ಶನಿವಾರದಂದು ಬೆಂಗಳೂರಿನಿಂದ ಸಂಚಾರ ನಡೆಸಲಿದೆ.

Kisan Rail Train Service In Karnataka Schedule

ರೈಲ್ವೆಯು ನೀಡಿರುವ ಮಾಹಿತಿ ಅನ್ವಯ 22/9/2020 ರಿಂದ 20/10/2020ರವರೆಗೆ ಹಜರತ್ ನಿಜಾಮುದ್ದೀನ್ ಮತ್ತು ಬೆಂಗಳೂರು ನಡುವೆ ಕಿಸಾನ್ ವಿಶೇಷ ರೈಲು ಸಂಚಾರ ನಡೆಸಲಿದೆ. ಪ್ರತಿ ಮಂಗಳವಾರದಂದು ನಿಜಾಮುದ್ದೀನ್ ನಿಲ್ದಾಣದಿಂದ ರೈಲು ಹೊರಡಲಿದೆ.

ರೈಲು ಮಾರ್ಗ : ಕೆಎಸ್‌ಆರ್‌ ಬೆಂಗಳೂರಿನಿಂದ ಹೊರಡುವ ಕಿಸಾನ್ ರೈಲು ಮೈಸೂರು, ಹಾಸನ, ಅರಸೀಕೆರೆ, ಕಡೂರು, ಹರಿಹರ, ದಾವಣಗೆರೆ, ಹುಬ್ಬಳ್ಳಿ ಬೆಳಗಾವಿ, ಮೀರಜ್ ಪುಣೆ, ಭೋಪಾಲ್, ಝಾನ್ಸಿ ಮೂಲಕ ಹಜರತ್ ನಿಜಾಮುದ್ದೀನ್ ತಲುಪಲಿದೆ.

ದೇಶದ ಯಾವುದೇ ಮೂಲೆಯಲ್ಲಿಯೂ ಕೃಷಿ ಉತ್ಪನ್ನಗಳು ಇದ್ದರೆ ಅದನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ಕಿಸಾನ್ ರೈಲು ಯೋಜನೆ ಜಾರಿಗೆ ತಂದಿದೆ. 2020ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು.

ದಕ್ಷಿಣ ಭಾರತದಿಂದ ಮೊದಲ ಕಿಸಾನ್ ರೈಲು ಆಂಧ್ರ ಪ್ರದೇಶದ ಅನಂತಪುರದಿಂದ 332 ಟನ್‌ಗಳಷ್ಟು ತಾಜಾ ಹಣ್ಣು, ತರಕಾರಿಯನ್ನು ಹೊತ್ತು ದೆಹಲಿಗೆ ತಲುಪಿದೆ. ಆಗಸ್ಟ್ 7ರಂದು ದೇಶದ ಮೊದಲ ಕಿಸಾನ್ ರೈಲು ಮಹಾರಾಷ್ಟ್ರದ ದೇವಳಾಯಿಂದ ಬಿಹಾರದ ದಾನಾಪುರಕ್ಕೆ ಸಂಚಾರ ನಡೆಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+