ಕೆಪಿಸಿಸಿ ಕಚೇರಿಯಲ್ಲಿ ಶಿಕ್ಷಕರಿಗೆ ಸಚಿವ ಕಿಮ್ಮನೆ ಪಾಠ

ಬೆಂಗಳೂರು, ಸೆ. 19 : ತಮ್ಮನ್ನು ವರ್ಗಾವಣೆ ಮಾಡುವಂತೆ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲು ಬಂದಿದ್ದ ಶಿಕ್ಷಕರಿಗೆ ಕಿಮ್ಮನೆ ರತ್ನಾಕರ್ ಪಾಠ ಮಾಡಿ ವಾಪಸ್ ಕಳುಹಿಸಿದ್ದಾರೆ. ಮಹಾತ್ಮ ಗಾಂಧಿ, ವಿವೇಕಾನಂದರ ಬಗ್ಗೆ ಸಚಿವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದ ಶಿಕ್ಷಕರು ಸಚಿವರಿಂದ ಪಾಠ ಹೇಳಿಸಿಕೊಂಡರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಶುಕ್ರವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಕೋಲಾರ ಮೂಲದ ಶಿಕ್ಷಕರಾದ ಎಲ್​​. ಶ್ರೀನಿವಾಸ್, ನಂಜುಂಡೇಗೌಡ ಮತ್ತು ಕೆ.ಬಿ.ರೆಡ್ಡಪ್ಪ ಅವರು ತಮ್ಮನ್ನು ವರ್ಗಾವಣೆ ಮಾಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.[5,8ನೇ ತರಗತಿಗೆ ಮಕ್ಕಳಿಗಿನ್ನು ಪಬ್ಲಿಕ್ ಪರೀಕ್ಷೆ]

Kimmane Rathnakar

ಶಿಕ್ಷಕರ ಮನವಿ ಸ್ವೀಕರಿಸಿದ ಸಚಿವರು, ಮಹಾತ್ಮ ಗಾಂಧಿ ಹುಟ್ಟಿದ ದಿನಾಂಕ ಮತ್ತು ಅವರ ಆದರ್ಶಗಳು, ವಿವೇಕಾನಂದ ಆದರ್ಶಗಳೇನಾಗಿತ್ತು? ಎಂದು ಕೆಲವು ಪ್ರಶ್ನೆಗಳನ್ನು ಕೇಳಿದರು. ಮೂವರು ಶಿಕ್ಷಕರಿಗೂ ಯಾವ ಪ್ರಶ್ನೆಗಳಿಗೂ ಉತ್ತರ ತಿಳಿದಿರಲಿಲ್ಲ. ಉತ್ತರ ಹೇಳಲು ವಿಫಲರಾದ ಶಿಕ್ಷಕರಿಗೆ ಸಚಿವರು ನಂತರ ಕ್ಲಾಸ್ ತೆಗೆದುಕೊಂಡರು. [ಸಿದ್ದು ಸಹಚರರಿಗೆ ಪರಮೇಶ್ವರ್ ಲವ್ ಲೆಟರ್!]

ಶಿಕ್ಷಕರಾದ ನಿಮಗೆ ಏನೂ ಗೊತ್ತಿಲ್ಲ ಮಕ್ಕಳಿಗೆ ಏನೂ ಪಾಠ ಮಾಡುತ್ತೀರಾ? ಮೊದಲು ಮಹಾತ್ಮ ಗಾಂಧಿ ಮತ್ತು ವಿವೇಕಾನಂದ ಬಗ್ಗೆ ತಿಳಿದುಕೊಂಡು ಬನ್ನಿ, ನಂತರ ನಿಮ್ಮ ಮನವಿ ಬಗ್ಗೆ ಪರಿಶೀಲಿಸುತ್ತೇನೆ ಎಂದು ಶಿಕ್ಷಕರನ್ನು ಕಳುಹಿಸಿಕೊಟ್ಟರು. ನೂರಾರು ಜನರು ಮತ್ತು ಮಾಧ್ಯಮಗಳ ಮುಂದೆ ಉತ್ತರ ನೀಡಲಾಗದ ಶಿಕ್ಷಕರು ತಕ್ಷಣ ಕಚೇರಿಯಿಂದ ನಿರ್ಗಮಿಸಿದರು.

ಸಚಿವರು ಕೆಪಿಸಿಸಿ ಕಚೇರಿಗೆ ಆಗಮಿಸುತ್ತಿಲ್ಲ, ಕಾರ್ಯಕರ್ತರ ಅಹವಾಲು ಸ್ವೀಕರಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬುಧವಾರ ಎಲ್ಲಾ ಸಚಿವರಿಗೆ ಪತ್ರ ಬರೆದಿದ್ದರು. ಆದ್ದರಿಂದ ಗುರುವಾರ ಗೃಹ ಸಚಿವ ಕೆ.ಜೆ.ಜಾರ್ಜ್ ಕೆಪಿಸಿಸಿ ಕಚೇರಿಗೆ ಬಂದು ಕಾರ್ಯಕರ್ತರನ್ನು ಭೇಟಿ ಮಾಡಿದ್ದರು. ಇಂದು ಶಿಕ್ಷಣ ಸಚಿವರು ಕಚೇರಿಗೆ ಆಗಮಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+