ಕನ್ನಡ ಪುಸ್ತಕ ಮೇಳಕ್ಕೆ ಕನ್ನಡಿಗ ಕಿಚ್ಚ ಸುದೀಪ್ ಸಪೋರ್ಟ್!
ನಟ ಕಿಚ್ಚ ಸುದೀಪ್ ಅವರು ಕನ್ನಡಿಗರ ಕೆಲಸಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾರೆ. ಹೀಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ, ಕನ್ನಡ ಬೆಳೆಸುವ ಯಾವುದೇ ಕೆಲಸಕ್ಕೂ ಕಿಚ್ಚನಿಂದ ಪ್ರೋತ್ಸಾಹ ಇದ್ದೇ ಇರುತ್ತದೆ. ಈಗಲೂ ಅಷ್ಟೇ ಕನ್ನಡಿಗರು ಸೇರಿ ಮಾಡುತ್ತಿರುವ, ಒಂದು ಮಹತ್ವದ ಕೆಲಸಕ್ಕೆ ನಟ ಕಿಚ್ಚ ಸುದೀಪ್ ಅವರು ಸಪೋರ್ಟ್ ಮಾಡುತ್ತಿದ್ದಾರೆ. ಹಾಗಾದರೆ ಏನದು ಕನ್ನಡಿಗರ ಮಹತ್ವದ ಕೆಲಸ? ಬನ್ನಿ ತಿಳಿಯೋಣ.
ಕಿಚ್ಚ ಸುದೀಪ್ ಅವರು ಈಗಾಗಲೇ ಕಾಲು ಶತಮಾನವನ್ನ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದಿದ್ದಾರೆ. ಈಗಲೂ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ನಟ ಕಿಚ್ಚ ಸುದೀಪ್ ಅವರೇ ಫೆವರಿಟ್, ಹೀಗಿದ್ದರೂ ನಟ ಸುದೀಪ್ ಅವರು ಕನ್ನಡ ಭಾಷೆಯ ಬಗ್ಗೆ ತಮ್ಮ ಕರ್ತ್ಯವನ್ನ ಮರೆಯಲ್ಲ. ಇದೇ ಕಾರಣಕ್ಕೆ, ಕನ್ನಡತನ ಉಳಿಸಿ & ಬೆಳೆಸುವ ಕೆಲಸಗಳಿಗೆ ಅವರು ಸದಾ ಬೆಂಬಲವನ್ನು ನೀಡುತ್ತಿದ್ದಾರೆ. ಈಗಲೂ ಅಷ್ಟೇ ಬರೀ ಪರಭಾಷಿಕರೇ ತುಂಬಿ ಹೋಗಿರುವ ಕನ್ನಡಿಗರ ರಾಜಧಾನಿ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯ ಕನ್ನಡ ಪುಸ್ತಕ ಮೇಳಕ್ಕೆ ಬೆಂಬಲ ನೀಡಿದ್ದಾರೆ.

ಕನ್ನಡಿಗರ ಶಕ್ತಿ ಪದರ್ಶನಕ್ಕೆ ವೇದಿಕೆ
ಅಷ್ಟಕ್ಕೂ ಬೆಂಗಳೂರಿನಲ್ಲಿ ಕನ್ನಡ ಮರೆಯಾಗಿ ಹೋಗುತ್ತಿದೆ ಎನ್ನುವ ಆರೋಪ ಆಗಾಗ ಕಿವಿಗೆ ಬೀಳುತ್ತ ಇರುತ್ತವೆ. ಅದ್ರಲ್ಲೂ ರಾಜಧಾನಿ ಬೆಂಗಳೂರಿನ ಕೆಲವು ಪ್ರದೇಶಗಳು ಸಂಪೂರ್ಣವಾಗಿ ಪರಭಾಷಿಕರ ಹಿಡಿತಕ್ಕೆ ಸಿಲುಕಿವೆ. ಅದೇ ರೀತಿ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆ ಕೂಡ ಪರಭಾಷಿಕರ ಹಿಡಿತದಲ್ಲೇ ಇದ್ದು, ಇದೇ ಸ್ಥಳದಲ್ಲಿ ಈಗ ಕನ್ನಡಿಗರೆಲ್ಲಾ ಒಗ್ಗಟ್ಟಾಗಿ ತಮ್ಮ ಶಕ್ತಿ ತೋರಿಸುತ್ತಿದ್ದಾರೆ. ಹೀಗಿದ್ದಾಗ ನಟ ಸುದೀಪ್ ಅವರು ಕೂಡ ಕನ್ನಡಿಗರ ಈ ಕಾರ್ಯಕ್ಕೆ, ತಮ್ಮ ಸಪೋರ್ಟ್ ಕೊಡುತ್ತಿದ್ದಾರೆ.
ಪುಸ್ತಕ ಮೇಳಕ್ಕೆ ಸುದೀಪ್ ಸಪೋರ್ಟ್
ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆ ತುಂಬಾ ಅನ್ಯಭಾಷಿಕರೇ ಇದ್ದಾರೆ ಎಂಬ ಮಾತುಗಳು ಕೇಳಿಬರುತ್ತವೆ. ಪರಭಾಷಿಕರ ಕಾರಣದಿಂದ ಇಲ್ಲಿ ಕನ್ನಡತನ ದಿನೇ ದಿನೇ ಕ್ಷೀಣಿಸುತ್ತಿದೆ. ಹೀಗೆ ಈ ಭಾಗದ ಕನ್ನಡ ಭಾಷಿಕ ಮಕ್ಕಳಿಗೆ ಕನ್ನಡದ ಓದು, ಹಬ್ಬಗಳು ಮರೆತೇ ಹೋಗುತ್ತಿವೆ ಎಂಬ ಮಾತು ಆಗಾಗ ಕಿವಿಗೆ ಬೀಳುತ್ತಿದೆ. ಈ ಹಿನ್ನೆಲೆ ಕನ್ನಡ ಸಂಸ್ಕೃತಿ ಪಸರಿಸುವ "ಪುಸ್ತಕ ಸಂತೆ"ಯ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಚ್‌ಎಸ್ಆರ್ ಬಡವಾಣೆಯ, ಸ್ವಾಭಿಮಾನಿ ಉದ್ಯಾನದಲ್ಲಿ "ಪುಸ್ತಕ ಸಂತೆ" ಆಯೋಜಿಸಲಾಗಿದೆ. ಈ ಪುಸ್ತಕ ಸಂತೆಗೆ ನಟ ಕಿಚ್ಚ ಸುದೀಪ್ ಕೂಡ ಈಗ ಬೆಂಬಲ ನೀಡಿದ್ದಾರೆ.
100ಕ್ಕೂ ಹೆಚ್ಚು ಪ್ರಕಾಶಕರು ಭಾಗಿ
ಪುಸ್ತಕ ಸಂತೆಯಲ್ಲಿ ಕನ್ನಡ ನಾಡಿನ 100ಕ್ಕೂ ಹೆಚ್ಚು ಪ್ರಕಾಶಕರು ಭಾಗವಹಿಸಿ, ತಮ್ಮ ಬೆಂಬಲ ನೀಡುತ್ತಿದ್ದಾರೆ. ನೂರಾರು ಸಾಹಿತಿಗಳು & ಸಾವಿರಾರು ಓದುಗರು ಪುಸ್ತಕ ಸಂತೆಗೆ ಬರ್ತಿದ್ದಾರೆ. ಕನ್ನಡ ಓದುವ ಸಂಸ್ಕೃತಿ ಪಸರಿಸುವ ದೃಷ್ಟಿಯಿಂದ ಪುಸ್ತಕ ಸಂತೆ ಇದೀಗ ಗಮನ ಸೆಳೆಯುತ್ತಿದೆ. 2024ರ ಫೆಬ್ರವರಿ 10 & 11ನೇ ತಾರೀಖಿನಂದು, ಈ ಮಹತ್ವದ "ಪುಸ್ತಕ ಸಂತೆ" ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದೀಗ ಈ ಪುಸ್ತಕ ಸಂತೆಗೆ ಕಿಚ್ಚ ಸುದೀಪ್ ಬೆಂಬಲ ನೀಡಿದ್ದು, ವಿಶೇಷವಾಗಿ ಟ್ವೀಟ್ ಮಾಡಿದ್ದಾರೆ. ಹಾಗಾದರೆ ನಟ ಸುದೀಪ್ ಅವರು ಪುಸ್ತಕ ಸಂತೆ ಬಗ್ಗೆ ಹೇಳಿದ್ದು ಏನು?
ಲೇಖಕರು - ಪುಸ್ತಕಗಳು -ಓದುಗರನ್ನು ಒಂದೇ ಸೂರಿನಡಿ ಬೆಸೆಯುವ ಈ ಪುಸ್ತಕ ಸಂತೆಗೆ ನನ್ನ ಶುಭಾಶಯಗಳು. ಈಗಾಗಲೇ ಇರುವ ಅನೇಕ ಸಂತೆಗಳ ನಡುವೆ ಈ ಹೊಸ ಸಂತೆ ವಿಶೇಷವೆನಿಸುತ್ತಿದೆ. ಇದು ನಿರೀಕ್ಷಿತ ಉದ್ದೇಶವನ್ನು ತಲುಪಲೆಂದು ಆಶಿಸುವೆ. #ಪುಸ್ತಕಸಂತೆ #ಸಿರಿಗನ್ನಡಂಗೆಲ್ಗೆ pic.twitter.com/xTSwYjJS5j
— Kichcha Sudeepa (@KicchaSudeep) February 5, 2024
ಎಚ್ಎಸ್ಆರ್ ಬಡಾವಣೆಯ ಪುಸ್ತಕ ಸಂತೆಯ ಬಗ್ಗೆ ಇದೀಗ ಟ್ವೀಟ್ ಮಾಡಿರುವ ಸುದೀಪ್ ಅವರು, 'ಲೇಖಕರು - ಪುಸ್ತಕಗಳು -ಓದುಗರನ್ನು ಒಂದೇ ಸೂರಿನಡಿ ಬೆಸೆಯುವ ಈ ಪುಸ್ತಕ ಸಂತೆಗೆ ನನ್ನ ಶುಭಾಶಯಗಳು. ಈಗಾಗಲೇ ಇರುವ ಅನೇಕ ಸಂತೆಗಳ ನಡುವೆ ಈ ಹೊಸ ಸಂತೆ ವಿಶೇಷವೆನಿಸುತ್ತಿದೆ. ಇದು ನಿರೀಕ್ಷಿತ ಉದ್ದೇಶವನ್ನು ತಲುಪಲೆಂದು ಆಶಿಸುವೆ.' ಎಂದಿದ್ದಾರೆ. ಈ ಮೂಲಕ ಪುಸ್ತಕ ಸಂತೆಗೆ ವಿಶೇಷವಾಗಿ ಶುಭ ಕೋರಿದ್ದಾರೆ.












Click it and Unblock the Notifications