ತೆಗೆದುಕೊಂಡ ಪ್ರಾಜೆಕ್ಟ್ ಮುಗಿಸದ ಸಾವಿರಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳಿಗೆ ಕೆಐಎಡಿಬಿ ನೋಟಿಸ್
ಬೆಂಗಳೂರು, ಫೆಬ್ರವರಿ 09: ರಾಜ್ಯದಲ್ಲಿ ತೆಗೆದುಕೊಂಡ ಯೋಜನೆಗಳನ್ನು ಪೂರ್ಣಗೊಳಿಸಲು ವಿಳಂಬ ಮಾಡಿದ ರಾಜ್ಯದ ಎಲ್ಲಾ 30 ಜಿಲ್ಲೆಗಳ 1,061 ಕೈಗಾರಿಕೋದ್ಯಮಿಗಳಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಜನವರಿಯಲ್ಲಿ ನೋಟಿಸ್ ನೀಡಿದೆ ಎಂದು ಮಾಹಿತಿ ತಿಳಿದ ಅಧಿಕಾರಿಗಳು ತಿಳಿಸಿದ್ದಾರೆ.
ಕೆಐಎಡಿಬಿ ಕೈಗಾರಿಕೋದ್ಯಮಿಗಳಿಗೆ ಪ್ರತಿ ವರ್ಷ ಸಾವಿರಾರು ಎಕರೆ ಭೂಮಿಯನ್ನು 10 ವರ್ಷಗಳ ಅವಧಿಗೆ ಗುತ್ತಿಗೆಗೆ ಮಂಜೂರು ಮಾಡಿತ್ತು. ಗುತ್ತಿಗೆ ಪಡೆದ 5 ವರ್ಷಗಳಲ್ಲಿ ಕಟ್ಟಡಗಳ ನಿರ್ಮಾಣವನ್ನು ಪೂರ್ಣಗೊಳಿಸಬೇಕು. ಆದರೆ, ಕಳೆದ ದಶಕದಲ್ಲಿ ರಾಜ್ಯಾದ್ಯಂತ 7,002.93 ಎಕರೆ ಪಡೆದಿರುವ 1,061 ಕೈಗಾರಿಕೋದ್ಯಮಿಗಳು ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸಲು ವಿಫಲರಾಗಿದ್ದಾರೆ.

ಉದ್ಯೋಗ ಸೃಷ್ಟಿಗೆ ಪ್ರತಿಯಾಗಿ MSMEಗಳು ಮತ್ತು ದೊಡ್ಡ ಕೈಗಾರಿಕೆಗಳನ್ನು ಬೆಂಬಲಿಸಲು ಸರ್ಕಾರವು ಈ ನಿರ್ಧಾರ ಮಾಡಿದೆ. ಆದರೆ ಕೊರೊನಾ ಸಾಂಕ್ರಾಮಿಕ ರೋಗದ ನಂತರ, ಹಲವಾರು ಸಣ್ಣ ಮತ್ತು ಮಧ್ಯಮ-ಪ್ರಮಾಣದ ಕೈಗಾರಿಕೆಗಳು ಕೆಟ್ಟ ಸ್ಥಿತಿಯಲ್ಲಿವೆ ಮತ್ತು ಹೂಡಿಕೆಯ ಕೊರತೆಯಿದೆ ಎಂದು ಕೆಐಎಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಎಂ ಮಾತನಾಡಿ, "ಕೆಐಎಡಿಬಿ ಈಗಾಗಲೇ ಕಳೆದ ಕೆಲವು ತಿಂಗಳುಗಳಲ್ಲಿ 40 ಕೈಗಾರಿಕೋದ್ಯಮಿಗಳಿಂದ 931.78 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಾವು ಹತ್ತು ವರ್ಷಗಳ ಅವಧಿಗೆ ಗುತ್ತಿಗೆಗೆ ಭೂಮಿಯನ್ನು ಮಂಜೂರು ಮಾಡುತ್ತೇವೆ ಮತ್ತು ಗುತ್ತಿಗೆ ಅವಧಿ ಮುಗಿದ ನಂತರ ಅದನ್ನು ವಿಸ್ತರಿಸಬಹುದು. ಒಪ್ಪಂದದ ಪ್ರಕಾರ, ಕೈಗಾರಿಕೋದ್ಯಮಿಗಳು ಗುತ್ತಿಗೆ ಅವಧಿಯ ಮೊದಲ ಐದು ವರ್ಷಗಳಲ್ಲಿ ತಮ್ಮ ವ್ಯಾಪಾರ ಅಗತ್ಯಗಳಿಗೆ ಅನುಗುಣವಾಗಿ ಕಾರ್ಖಾನೆಗಳು, ಗೋದಾಮು, ಉತ್ಪಾದನಾ ಸೌಲಭ್ಯಗಳು ಇತ್ಯಾದಿಗಳನ್ನು ನಿರ್ಮಿಸಬೇಕು. ಅವರು ಪ್ರಾಜೆಕ್ಟ್ ಮುಗಿಸಲು ವಿಫಲವಾದರೆ, ನಾವು ಅವರಿಗೆ ನೋಟಿಸ್ ನೀಡುತ್ತೇವೆ. ಈಗ ಒಟ್ಟು 7,002 ಎಕರೆ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಯಾವುದೇ ಕೈಗಾರಿಕೋದ್ಯಮಿಗಳು ಕೈಗಾರಿಕೆಗಳನ್ನು ಪ್ರಾರಂಭಿಸಲು ಕೆಐಎಡಿಬಿಯಿಂದ ಭೂಮಿ ಪಡೆಯಬಹುದು. ಇಲಾಖೆಯು ಸುಮಾರು ಒಂದು ತಿಂಗಳಲ್ಲಿ ಭೂಮಿಯನ್ನು ಹಂಚುತ್ತದೆ. ಆಯಾ ಫಲಾನುಭವಿಗಳು ಜಮೀನು ಸ್ವಾಧೀನಪಡಿಸಿಕೊಂಡ ತಿಂಗಳೊಳಗೆ ಶೇ.30 ಠೇವಣಿ ಮತ್ತು ಉಳಿದ ಹಣವನ್ನು ಮೂರು ತಿಂಗಳೊಳಗೆ ಪಾವತಿಸಬೇಕಾಗುತ್ತದೆ ಎಂದು ಕೆಐಎಡಿಬಿ ಅಧಿಕಾರಿಗಳು ಗುತ್ತಿಗೆ ವಿಧಾನವನ್ನು ವಿವರಿಸಿದ್ದಾರೆ.
"ನಾವು ಗುತ್ತಿಗೆಯನ್ನು ಮುಕ್ತಾಯಗೊಳಿಸುವ ಮೊದಲು ಮತ್ತು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ಕೈಗಾರಿಕೆಗಳಿಗೆ ಕೆಐಎಡಿಬಿ ಕಾಯಿದೆಯ 34 B ಅಡಿಯಲ್ಲಿ ಮೂರು ಸೂಚನೆಗಳನ್ನು ನೀಡಬೇಕಾಗಿದೆ. ಮೊದಲು ನಾವು ಗುತ್ತಿಗೆ ಫಲಾನುಭವಿಗಳಿಗೆ ಉತ್ತರಿಸಲು ಮೂರು ತಿಂಗಳ ಕಾಲಾವಕಾಶವನ್ನು ನೀಡುತ್ತೇವೆ. ಗುತ್ತಿಗೆದಾರರು ಸಮರ್ಪಕ ಕಾರಣಗಳನ್ನು ನೀಡಲು ವಿಫಲವಾದರೆ ನಾವು ಎರಡನೇ ನೋಟಿಸ್ ನೀಡುತ್ತೇವೆ. ಕೊನೆಗೆ ಅವರನ್ನು ಬರುವಂತೆ ನೋಟೀಸ್ ನೀಡುತ್ತೇವೆ. ಈಗ ಈ 1,061 ನೋಟಿಸ್‌ಗಳು ವಿವಿಧ ಹಂತಗಳಲ್ಲಿದ್ದು, ಬಳಕೆಯಾಗದ ಎಲ್ಲ ಜಮೀನುಗಳನ್ನು ನಾವು ಸ್ವಾಧೀನಪಡಿಸಿಕೊಳ್ಳುತ್ತೇವೆ" ಎಂದು ಮಹೇಶ್ ತಿಳಿಸಿದ್ದಾರೆ.
ಬೆಂಗಳೂರು ನಗರವೊಂದರಲ್ಲೇ ಐಟಿ ವಲಯದ 43 ಕೈಗಾರಿಕೋದ್ಯಮಿಗಳು ಮತ್ತು ಹಾರ್ಡ್‌ವೇರ್ ವಲಯದ 14 ಮಂದಿ 58 ಎಕರೆ ಗುತ್ತಿಗೆ ಭೂಮಿಗೆ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಬೆಂಗಳೂರು ಗ್ರಾಮಾಂತರದಲ್ಲಿ 19 ಏರೋಸ್ಪೇಸ್ ಕಂಪನಿಗಳು, ವಿಶೇಷ ಆರ್ಥಿಕ ವಲಯಗಳಲ್ಲಿರುವ 2 ಏರೋಸ್ಪೇಸ್ ಕಂಪನಿಗಳು ಮತ್ತು ಇತರ ಏಳು ಕೈಗಾರಿಕೋದ್ಯಮಿಗಳಿಗೆ ನೋಟಿಸ್ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 222 ಎಕರೆ ಜಮೀನು ಮಂಜೂರಾಗಿದೆ. ಅದೇ ರೀತಿ ಬೆಳಗಾವಿಯಲ್ಲಿ 4, ಬಳ್ಳಾರಿಯಲ್ಲಿ 4, ಬೀದರ್‌ನಲ್ಲಿ 2, ವಿಜಯನಗರದಲ್ಲಿ 1, ಚಿಕ್ಕಬಳ್ಳಾಪುರದಲ್ಲಿ 2, ಚಿಕ್ಕಮಂಗಳೂರಿನಲ್ಲಿ 1, ದಕ್ಷಿಣ ಕನ್ನಡದಲ್ಲಿ 6, ಧಾರವಾಡದಲ್ಲಿ 4, ಗದಗನಲ್ಲಿ 1, ಕಲಬುರಗಿಯಲ್ಲಿ 1, ಹಾಸನದಲ್ಲಿ 4, ಕೋಲಾರದಲ್ಲಿ 8, ಮಂಡ್ಯದಲ್ಲಿ 4, ಮೈಸೂರಿನಲ್ಲಿ 6, ರಾಯಚೂರಿನಲ್ಲಿ 3, ರಾಮನಗರದಲ್ಲಿ 4, ದಾವಣಗೆರೆಯಲ್ಲಿ 2, ಶಿವಮೊಗ್ಗದಲ್ಲಿ 2, ತುಮಕೂರಿನಲ್ಲಿ 4, ಉಡುಪಿಯಲ್ಲಿ 1, ಉತ್ತರ ಕನ್ನಡದಲ್ಲಿ 1, ಯಾದಗಿರಿಯಲ್ಲಿ 1 ಮತ್ತು ವಿಜಯಪುರದಲ್ಲಿ 3 ಕೈಗಾರಿಕೋದ್ಯಮಿಗಳಿಗೆ ಮಂಡಳಿ ನೋಟಿಸ್ ನೀಡಿದೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications