Get Updates
Get notified of breaking news, exclusive insights, and must-see stories!

KIADB: ರಾಜ್ಯದ ಕೈಗಾರೀಕರಣಕ್ಕಾಗಿ ಬರೋಬ್ಬರಿ 4100 ಎಕರೆ ಭೂಮಿ ಹಂಚಿಕೆ, ಉತ್ತರಕ್ಕೆ ಸಿಕ್ಕಿದ್ದೆಷ್ಟು?

ಬೆಂಗಳೂರು, ಆಗಸ್ಟ್ 08: ಕರ್ನಾಟಕ ರಾಜ್ಯ ಸರ್ಕಾರವು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯಾಭಿವೃದ್ಧಿ ಸಚಿವ ಎಂ. ಬಿ.ಪಾಟೀಲ್ ನೇತೃತ್ವದಲ್ಲಿ ರಾಜ್ಯ ಕೈಗಾರಿಕೆ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತಹ ಉದ್ದೇಶಿತ ಕೈಗಾರಿಕೆ ಯೋಜನೆಗಳು ಸಾಕಾರಗೊಳ್ಳಲು ಬರೋಬ್ಬರಿ 4,100 ಎಕರೆ ಭೂಮಿ ಹಂಚಿಕೆ ಮಾಡಲಾಗಿದೆ ಎಂದು ಸಚಿವರು ಗುರುವಾರ ಮಾಹಿತಿ ನೀಡಿದ್ದಾರೆ.

ಈ ಕುರಿತು ಸಚಿವ ಎಂಬಿ ಪಾಟೀಲ್ ಅವರು ಗುರುವಾರ ಸಮಾಜಿಕ ಜಾಲತಾಣ (ಎಕ್ಸ್‌)ದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಕೈಗಾರಿಕರಣ ಕ್ಷೇತ್ರಕ್ಕೆ ಮತ್ತಷ್ಟು ವೇಗ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ಸುಮಾರು 4,100 ಎಕರೆ ಭೂಮಿ ಹಂಚಿಕೆ ಮಾಡಿದೆ. ಇದರಲ್ಲಿ ಉತ್ತರ ಕರ್ನಾಟಕದ್ದು ಸಿಂಹಪಾಲು ಇದೆ ಎಂದು ತಿಳಿಸಿದರು.

KIADB Distributed 4100 Acres Land For Industrial Projects North Karnataka Got 2045 acre MB Patil

ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಗೆ 857.92 ಎಕರೆ ಭೂಮಿಯನ್ನು ಕೈಗಾರೀಕರಣಕ್ಕೆ ನೀಡಲಾಗಿದೆ. ಒಟ್ಟಾರೆ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಕೈಗಾರಿಕೆ ಉದ್ದೇಶಗಳಿಗೆ ಬಳಸುವಂತೆ ಕೆಐಎಡಿಬಿಯು ಸುಮಾರು 2,045.40 ಎಕರೆ ಭೂಮಿ ನೀಡಿದೆ ಎಂದು ಅವರು ಖಚಿತಪಡಿಸಿದರು.

ಕೈಗಾರಿಕರಣದಲ್ಲಿ ಮಹತ್ವದ ಹೆಜ್ಜೆ ಇಟ್ಟ ಕರ್ನಾಟಕ

KIADB ಸುಮಾರು 4,108.94 ಎಕರೆ ಜಮೀನು ಹಂಚಿಕೆ ಮಾಡಿದ್ದರ ಕುರಿತು ಪಾರದರ್ಶಕತೆಯಿಂದ ಕೂಡಿದ ಅಧಿಸೂಚನೆ ಹೊರಡಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರಾಜ್ಯವು ಕೈಗಾರಿಕರಣದಲ್ಲಿ ಮಹತ್ವದ ಹೆಜ್ಜೆ ಇಡಲಿದೆ. ಈ ವಲಯದಲ್ಲಿ ಅತ್ಯಧಿಕ ಪ್ರಗತಿಯತ್ತ ಸಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

KIADB Distributed 4100 Acres Land For Industrial Projects North Karnataka Got 2045 acre MB Patil

ಇತ್ತೀಚೆಗೆ ಕೈಗಾರಿಕೆ ಸಚಿವರು ಜರ್ಮನಿ, ಜಪಾನ್ ಸೇರಿದಂತೆ ಕೆಲವು ದೇಶಗಳ ಪ್ರವಾಸ ಕೈಗೊಂಡಿದ್ದರು. ಅಲ್ಲಿ ವಾಹನಗಳ ಬಿಡಿಭಾಗ ತಯಾರಿಸುವ ಕಂಪನಿ ಹಾಗೂ ಇನ್ನಿತರ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಬಂಡವಾಳ ಆಕರ್ಷಿಸಿದ್ದಾರೆ. ವಿದೇಶಿ ಕಂಪನಿಗಳು ಬೆಂಗಳೂರ ಸೇರಿದಂತೆ ಕರ್ನಾಟಕದ ವಿವಿಧೆಡೆ ಬಂಡವಾಳ ಹೂಡಿಕೆಗೆ ಒಪ್ಪಿಗೆ ಪಡೆದುಕೊಂಡು ಬಂದಿದ್ದಾರೆ.

ಕಳೆದ ಜಪಾನ್ ಪ್ರವಾಸ ಬಳಿಕ ಅವರು ಬರೋಬ್ಬರಿ 25000 ಕೋಟಿ ಬಂಡವಾಳ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಹರಿದು ಬರಲಿರುವ ಬಂಡವಾಳ ಹೂಡಿಕೆಯು ರಾಜ್ಯದಲ್ಲಿ ಕೆಐಎಡಿಬಿ ನೀಡಿರುವ ಪ್ರದೇಶಗಳಲ್ಲಿ ಉದ್ದೇಶಿತ ಯೋಜನೆ ಅನುಷ್ಠಾನಕ್ಕೆ ತರುವ ಮೂಲಕ ಬಳಕೆ ಆಗಲಿದೆ ಎಂದು ತಿಳಿದು ಬಂದಿದೆ.

ಜಿಲ್ಲೆಯಲ್ಲಿ ಫುಡ್ ಹಬ್, ಕೈಗಾರಿಕಾ ಕಾರಿಡಾರ್

ಸದ್ಯ ರಾಜ್ಯ ಸರ್ಕಾರ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್ ಬಳಿಕ ಮಿನಿ ಸಿಟಿ (KHIR) ನಿರ್ಮಿಸಲು ಮುಂದಾಗಿದ್ದು, ಆಗಸ್ಟ್ 23ರಂದು ಮೊದಲ ಹಂತದ ಯೋಜನೆಗೆ ಚಾಲನೆ ನೀಡಲಿದೆ. ಸ್ಕೈಡೆಕ್ ನಿರ್ಮಿಸುತ್ತಿದೆ. ವಿಜಯಪುರದಲ್ಲಿ ಫುಡ್ ಹಬ್ ಸ್ಥಾಪನೆಗೆ ಮುಂದಾಗಿದೆ.

ಇತ್ತೀಚೆಗೆ ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಬೃಹತ್ ಕೈಗಾರಿಕೆ ಕಾರಿಡಾರ್ ನಿರ್ಮಿಸಲು ಉದ್ದೇಶಿದೆ. ಈ ಕುರಿತು ಜಾಗದ ಅವಶ್ಯಕತೆ ಇದ್ದು, ಅದೀಗ ಸಿಕ್ಕಂತಾಗಿದೆ.

ಕರ್ನಾಟಕ ಸರ್ಕಾರ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ, ತುಮಕೂರು, ದೇವನಹಳ್ಳಿ, ಚಿಕ್ಕಬಳ್ಳಾಪುರ ಕಡೆಗಳಲ್ಲಿ ಕೈಗಾರಿಗಳು ತಲೆ ಎತ್ತಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+