Get Updates
Get notified of breaking news, exclusive insights, and must-see stories!

ಸಿ.ಎ., ಅಮೆನಿಟಿ ನಿವೇಶನಗಳ ಹಂಚಿಕೆ; ಹೊಸ ನಿಯಮಗಳು

ಬೆಂಗಳೂರು, ನವೆಂಬರ್ 14; ಕರ್ನಾಟಕ ಸರ್ಕಾರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕೈಗಾರಿಕಾ ಪ್ರದೇಶಗಳಲ್ಲಿನ ಸಿ.ಎ./ ಅಮೆನಿಟಿ ನಿವೇಶನಗಳನ್ನು ಹಂಚಿಕೆ ಮಾಡುವಲ್ಲಿ ಅನುಸರಿಸಬೇಕಾದ ವಿಧಿ-ವಿಧಾನಗಳ ಬಗ್ಗೆ ಆದೇಶವೊಂದನ್ನು ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಹಾಗೂ ಅವರ ಹೆಸರಿನಲ್ಲಿ (ಭೀಮಪ್ಪ ಪ. ಅಜೂರ್) ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.) ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಸರ್ಕಾರದ ಆದೇಶ ದಿನಾಂಕ 08/03/2019 ಮತ್ತು ದಿನಾಂಕ 13/10/2023ರಂದು ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳನ್ನು ಓದಲಾಗಿದೆ.

KIADB CA Site Allotment New Rule Know Details

ಪ್ರಸ್ತಾವನೆ ಏನು?; ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕೈಗಾರಿಕಾ ಪ್ರದೇಶಗಳಲ್ಲಿನ ಸಿ.ಎ./ ಅಮೆನಿಟಿ ನಿವೇಶನಗಳನ್ನು ಹಂಚಿಕೆ ಮಾಡುವಾಗ ಅನುಸರಿಸಬೇಕಾದ ವಿಧಿ-ವಿಧಾನಗಳನ್ನು ನಿಗಧಿಪಡಿಸಿ ಸರ್ಕಾರದ ಆದೇಶದಲ್ಲಿ ಅನುಮೋದನೆ ನೀಡಲಾಗಿದೆ.

ಹಾಲಿ ಕೆ.ಐ.ಎ.ಡಿ.ಬಿ.ಯಲ್ಲಿ ಸಿ.ಎ. ನಿವೇಶನಗಳ ಹಂಚಿಕೆಯ ಸಂಪೂರ್ಣ ಮೊತ್ತವನ್ನು upfront ಪಾವತಿಸಿಕೊಳ್ಳುತ್ತಿದ್ದರೂ ಸಹ ಹಂಚಿಕೆದಾರರಿಗೆ 99 ವರ್ಷಗಳ ಲೀಸ್ ಆಧಾರದ ಮೇಲೆ ನೀಡಲಾಗುತ್ತಿದೆ. ಆದರೆ, ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಿ.ಎ. ನಿವೇಶನಕ್ಕೆ ಹಂಚಿಕೆಯ ಶೇ. 10ರಷ್ಟು ಮೊತ್ತವನ್ನು ಮಾತ್ರ ಪಡೆದು, 30 ವರ್ಷಗಳ ಲೀಸ್ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿದೆ.

ಪರಿಶೀಲನಾ ಸಭೆಯಲ್ಲಿ ಪ್ರಸ್ತುತ ಇರುವ ಕೆ.ಐ.ಎ.ಡಿ.ಬಿ.ಯ ಸಿ.ಎ. ನಿವೇಶನಗಳ ಹಂಚಿಕೆಗಳ ಮಾರ್ಗಸೂಚಿಗಳನ್ನು ಬದಲಾಯಿಸುವುದು ಅವಶ್ಯಕವಿದೆ ಎಂದು ಅಭಿಪ್ರಾಯಪಡಲಾಗಿದೆ. ಅದರಂತೆ, ಸಿ.ಎ. ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಸರ್ಕಾರದಿಂದ ಹೊರಡಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.

ಆದುದರಿಂದ, ಸರ್ಕಾರವು ಈ ಆದೇಶವನ್ನು ಹೊರಡಿಸಿದೆ. ಸರ್ಕಾರದ ಆದೇಶ 10/11/2023ರ ಆದೇಶದಂತೆ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳಲ್ಲಿ ಸಿ.ಎ./ ಅಮೆನಿಟಿ ನಿವೇಶನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಕಂಡ ವಿಧಿ-ವಿಧಾನಗಳನ್ವಯ ಹಂಚಿಕೆ ಮಾಡಲು ಆದೇಶಿಸಲಾಗಿದೆ.

* ಸಿ.ಇ.ಒ.ಇ.ಎಂ., ಕೆ.ಐ.ಎ.ಡಿ.ಬಿ.ರವರು ಲಭ್ಯವಿರುವ ಸಿ.ಎ./ ಅಮೆನಿಟಿ ನಿವೇಶನಗಳಲ್ಲಿ ಕೈಗಾರಿಕಾ ಪದೇಶಗಳಿಗೆ ಒದಗಿಸಬೇಕಾದ ಚಟುವಟಿಕೆಗಳು/ ಸೌಕರ್ಯಗಳನ್ನು ಅಧಿಸೂಚನೆ ಸಂಖ್ಯೆ ಸಿಐ 78 ಎಸ್‌ಪಿಕ್ಯು 2021, ದಿನಾಂಕ: 10/11/2023ರನ್ವಯ ಮೀಸಲಿಡಬೇಕು.

* ಸಿ.ಎ./ ಅಮೆನಿಟಿ ನಿವೇಶನಗಳ ಹಂಚಿಕೆಗೆ ಕನ್ನಡ ಹಾಗೂ ಆಂಗ್ಲ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು. ಜಾಹೀರಾತಿನಲ್ಲಿ ಸಿ.ಎ./ ಅಮೆನಿಟಿ ನಿವೇಶನಗಳ ಸ್ಥಳ, ಉದ್ದೇಶ ಮತ್ತು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹಂಚಿಕೆಗೆ ಅಗತ್ಯವೆಂದು ಪರಿಗಣಿಸಬಹುದಾದ ಇತರೆ ಮಾನದಂಡಗಳ ವಿವರಗಳನ್ನು ಪ್ರಚಾರಪಡಿಸಬೇಕು.

* ಹಂಚಿಕೆಗೆ ಇರುವ ಮಾನದಂಡಗಳನ್ನು ಸಿ.ಇ.ಒ.ಇ.ಎಂ., ಕೆ.ಐ.ಎ.ಡಿ.ಬಿ.ಯವರು ನಿಗದಿಪಡಿಸಬೇಕು.

* ಸ್ವೀಕರಿಸಿದ ಅರ್ಜಿಗಳನ್ನು ಸಿ.ಇ.ಒ.ಇ.ಎಂ., ಕೆ.ಐ.ಎ.ಡಿ.ಬಿ. ರವರ ಅಧ್ಯಕ್ಷತೆಯಲ್ಲಿ ಮಂಡಳಿಯ ಅಧಿಕಾರಿಗಳೊಂದಿಗೆ ಉಪ ಸಮಿತಿಯನ್ನು ರಚಿಸಿ, ಜಾಹೀರಾತಿನಲ್ಲಿ ನೀಡಿರುವ ಮಾನದಂಡಗಳಂತೆ ಅರ್ಜಿಗಳನ್ನು ಪರಿಶೀಲಿಸುವುದು.

* ಪರಿಶೀಲಿಸಿದ ಅರ್ಜಿಗಳನ್ನು SLSWCC ಸಭೆಯ ಮುಂದೆ ಚರ್ಚೆಗಾಗಿ ಹಾಗೂ ಅನುಮೋದನೆಗಾಗಿ ಮಂಡಿಸುವುದು.

* SLSWCC ಸಭೆಯಲ್ಲಿ ಸಿ.ಎ./ ಅಮೆನಿಟಿ ನಿವೇಶನಗಳಲ್ಲಿ ಸ್ಥಾಪಿಸುವ ಯೋಜನೆಯ ಅನುಮೋದನೆ ಪಡೆದವರಿಗೆ ಕೆಐಎಡಿಬಿ ವತಿಯಿಂದ 10 ವರ್ಷಗಳ ಕಾಲ ಲೀಸ್ ಕಂ ಸೇಲ್ ಆಧಾರದಲ್ಲಿ ನಿವೇಶನವನ್ನು ಹಂಚಿಕೆ ಮಾಡುವುದು.

* ಸಿ.ಎ./ಅಮೆನಿಟಿ ನಿವೇಶನಗಳಿಗೆ ಸರ್ಕಾರದ ಆದೇಶ ಸಂಖ್ಯೆ ಸಿಐ 132 ಎಸ್‌ಪಿಕ್ಯು (ಇ) 2021, ದಿನಾಂಕ 01/01/2022ರನ್ವಯ ಶುದ್ಧ ಕ್ರಯ ಪತ್ರಗಳನ್ನು ನೆರವೇರಿಸುವುದು.

* ಪ್ರಸ್ತಾವಿತ ಮೇಲಿನ ನೀತಿಯು KIADB ಯ ಅಸ್ತಿತ್ವದಲ್ಲಿರುವ ಸಿ.ಎ./ಅಮೆನಿಟಿ ನಿವೇಶನಗಳ ಗುತ್ತಿಗೆಗಳಿಗೂ ಅನ್ವಯಿಸುತ್ತದೆ.

ಸರ್ಕಾರದ ಆದೇಶ ದಿನಾಂಕ 08/03/2019ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ರಾಜ್ಯಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+