ಗೃಹ ಮಂಡಳಿ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ, ಮೇ 11 : ಕರ್ನಾಟಕ ಗೃಹ ಮಂಡಳಿಯು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಸಾರ್ವಜನಿಕ ಸೌಲಭ್ಯಗಳೊಡನೆ ಅಭಿವೃದ್ಧಿಪಡಿಸಿರುವ ನಿವೇಶನಗಳ ಹಂಚಿಕೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 20, 2015.

ಗೃಹ ಮಂಡಳಿ ಮೆ.ಎಸ್.ಆರ್.ಎಸ್ಟೇಟ್ಸ್‌, ಬೆಂಗಳೂರು ಇವರೊಂದಿಗೆ ಸೇರಿ ಖಾಸಗಿ ಸಹಭಾಗಿತ್ವದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದು, 'ಕೆ.ಎಚ್.ಬಿ. ಭಾಗ್ಯನಗರ' ಎಂದು ಯೋಜನೆಗೆ ನಾಮಕರಣ ಮಾಡಿದೆ. [ಜಾಹೀರಾತು ಇಲ್ಲಿದೆ]

Karnataka Housing Board

ಬಡಾವಣೆಯ ವೈಶಿಷ್ಟ್ಯತೆಗಳು : ಇದು ವಿಶಾಲವಾದ ರಸ್ತೆಗಳು, ಉತ್ತಮ ನೀರು ಮತ್ತು ಒಳ ಚರಂಡಿ ಸೌಲಭ್ಯ, ಮಳೆ ನೀರು ಕೊಯ್ಲು ವ್ಯವಸ್ಥೆ, ಉದ್ಯಾನವನ ಹಾಗೂ ಆಟದ ಮೈದಾನ ವ್ಯವಸ್ಥೆಯನ್ನು ಒಳಗೊಂಡ ಸುಸಜ್ಜಿತ ಬಡಾವಣೆಯಾಗಿದೆ. [ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವಿಳಾಸ]

ಅರ್ಜಿ ಆಹ್ವಾನ : ಸದರಿ ಬಡಾವಣೆಯ ನಿವೇಶನಗಳನ್ನು 30/10/2013ರಂದು ಪ್ರಕಟಣೆ ನೀಡಿ ಲಾಟರಿ ಮೂಲಕ ಹಂಚಿಕೆ ಮಾಡಲಾಗಿದೆ. ಉಳಿದ ನಿವೇಶನಗಳ ಹಂಚಿಕೆಗೆ ಸದ್ಯ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಷರತ್ತುಗಳು : ನಿವೇಶನಗಳಿಗೆ ಅರ್ಜಿ ಸಲ್ಲಿಸುವವರು ಮತ್ತು ಅವರ ಕುಟುಂಬದವರು ರಾಜ್ಯದ ಯಾವುದೇ ಪ್ರಾಧಿಕಾರದಿಂದ ಮನೆ/ನಿವೇಶನ/ಫ್ಯ್ಲಾಟ್ ಹೊಂದಿಲ್ಲವೆಂದು ಮತ್ತು ಹತ್ತು ವರ್ಷಗಳಿಗೆ ಕಡಿಮೆ ಇಲ್ಲದಷ್ಟು ಕರ್ನಾಟಕದ ವಾಸಿಯಾಗಿದ್ದೇವೆ ಎಂದು ಪ್ರಮಾಣ ಪತ್ರ ಸಲ್ಲಿಸಬೇಕು.

ನಿವೇಶನಗಳನ್ನು ಕರ್ನಾಟಕ ಗೃಹ ಮಂಡಳಿಯ ನಿಯಮ ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಲಾಟರಿ ಮೂಲಕ ಹಂಚಿಕೆ ಮಾಡಲಾಗುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ : ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ಯೋಜನಾ ಕಚೇರಿ, ಚಿಕ್ಕಬಳ್ಳಾಪುರ, ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. 9739946532/9740335386 ಮೊಬೈಲ್ ನಂಬರ್‌ಗೆ ಕರೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+