ಬ್ರೇಕಿಂಗ್ : ಕರ್ನಾಟಕದಲ್ಲಿ ವಿದ್ಯುತ್ ದರಗಳು ಏರಿಕೆ
ಬೆಂಗಳೂರು, ಮಾರ್ಚ್ 30 : ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಏರಿಕೆ ಮಾಡಿದೆ. ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿಯೂ ದರ ಹೆಚ್ಚಳವಾಗಿದ್ದು, ಏ.1ರಿಂದ ನೂತನ ದರ ಜಾರಿಗೆ ಬರಲಿದೆ.
ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಆಯೋಗದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಅವರು ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದರು. 2016-17ನೇ ಸಾಲಿಗೆ ಜಾರಿಗೆ ಬರುವಂತೆ ದರವನ್ನು ಹೆಚ್ಚಳ ಮಾಡಲಾಗಿದೆ ಎಂದು ಅವರು ಹೇಳಿದರು. [ಕರೆಂಟ್ ಕೊಡಿ ಎಂದು ಕರೆ ಮಾಡಿದ್ದಕ್ಕೆ ಕಂಬಿ ಹಿಂದೆ ಹೋದ್ರು]

ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 48 ಪೈಸೆ ಹೆಚ್ಚಳ ಮಾಡಲಾಗಿದೆ. ರಾಜ್ಯದಲ್ಲಿ ಶೇ 9ರಷ್ಟು ದರ ಹೆಚ್ಚಳ ಮಾಡಲಾಗಿದೆ. [ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]
ಗೃಹ ಬಳಕೆ
ನಗರ ಪ್ರದೇಶ : ನಗರ ಪ್ರದೇಶದಲ್ಲಿ ಗೃಹ ಬಳಕೆಗೆ 30 ಯೂನಿಟ್ ವರೆಗೆ 3 ರೂ., 31-100 ಯೂನಿಟ್‌ಗೆ 4.40 ರೂ., 101-200 ಯೂನಿಟ್ ವರೆಗೆ 5.90 ರೂ., 200 ಯೂನಿಟ್ ಮೀರಿದರೆ 6.90 ರೂ.ಗಳು
ಗ್ರಾಮೀಣ ಪ್ರದೇಶ : ಗ್ರಾಮೀಣ ಪ್ರದೇಶದಲ್ಲಿ ಗೃಹ ಬಳಕೆಗೆ 30 ಯೂನಿಟ್ ವರೆಗೆ 2.90 ರೂ., 31-100 ಯೂನಿಟ್ 4.10 ರೂ., 101-200 ಯೂನಿಟ್ 5.60 ರೂ., 200 ಯೂನಿಟ್ ಮೀರಿದರೆ 6.40 ರೂ.
ಹುಕ್ಕೇರಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ 38 ಪೈಸೆ, ಮಂಗಳೂರು ಎಸ್‌ಇಝಡ್ ವ್ಯಾಪ್ತಿಯಲ್ಲಿ 6.05 ಪೈಸೆ ಹೆಚ್ಚಳ, ಮಂಗಳೂರು ವಿಕಾಸ್ ಕಂಪನಿ ವ್ಯಾಪ್ತಿಯಲ್ಲಿ 6.55ಪೈಸೆ ಹೆಚ್ಚಳ ಮಾಡಲಾಗಿದೆ.
ಕೈಗಾರಿಕೆ
ಬೆಸ್ಕಾಂ ವ್ಯಾಪ್ತಿಯಲ್ಲಿ ಎಲ್‌ಟಿ ಕೈಗಾರಿಕೆಗಳಿಗೆ ಸರಾಸರಿ 15 ರಿಂದ 30 ಪೈಸೆ ಹೆಚ್ಚಳ. ಮೊದಲ 500 ಯೂನಿಟ್‌ಗೆ 4.90 ಪೈಸೆಯಿಂದ 5 ರೂ. 10 ಪೈಸೆಗೆ ಹೆಚ್ಚಳ, 500 ಯೂನಿಟ್‍ಗಿಂತ ಹೆಚ್ಚಿನ ಬಳಕೆಗೆ 6 ರೂ. ನಿಂದ 6.30 ಪೈಸೆಗೆ ಏರಿಕೆ.
ಬೆಸ್ಕಾಂ ಹೊರತು ಪಡಿಸಿ ಉಳಿದ ಎಸ್ಕಾಂಗಳ ವ್ಯಾಪ್ತಿಯಲ್ಲಿ ಮೊದಲ 500 ಯೂನಿಟ್‌ಗೆ 4.75 ಪೈಸೆಯಿಂದ 4. 95 ಪೈಸೆಗೆ ಹೆಚ್ಚಳ. 501 ರಿಂದ 1000 ಯೂನಿಟ್‍ವರೆಗೆ 5.55ರಿಂದ 5.85 ಪೈಸೆಗೆ ಹೆಚ್ಚಳ. 1000 ಯೂನಿಟ್ ಮೇಲ್ಪಟ್ಟು 5.85ರಿಂದ 6.15 ಪೈಸೆಗೆ ಹೆಚ್ಚಳ.
ವಾಣಿಜ್ಯ ಬಳಕೆ
ವಾಣಿಜ್ಯ ಬಳಕೆಯ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 20 ಪೈಸೆ ಹೆಚ್ಚಳ. ಮೊದಲ 50 ಯೂನಿಟ್ಗೆ 6.95 ರೂ. ನಿಂದ 7.15 ಪೈಸೆಗೆ ಏರಿಕೆ. 50 ಯೂನಿಟ್ ನಂತರದ ಬಳಕೆಗೆ 7.95 ರೂ. ನಿಂದ 8.15 ಪೈಸೆಗೆ ಹೆಚ್ಚಳ.
ವಾಣಿಜ್ಯ ಬಳಕೆ (ಗ್ರಾಮೀಣ ಪ್ರದೇಶ) : ಗ್ರಾಮಾಂತರ ಪ್ರದೇಶದ ವಾಣಿಜ್ಯ ಬಳಕೆಗೆ ಮೊದಲ 50 ಯೂನಿಟ್ಗೆ 6.45 ರೂ.ನಿಂದ 6.65 ಪೈಸೆಗೆ ಹೆಚ್ಚಳ. 50 ಯೂನಿಟ್ ನಂತರದ ಬಳಕೆಗೆ 7.45 ರೂ.ನಿಂದ 7.65 ಪೈಸೆಗೆ ಹೆಚ್ಚಳ.
* ಕುಡಿಯುವ ನೀರು ಸರಬರಾಜು, ಬೀದಿದೀಪ ಬಳಕೆಯ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 50 ಪೈಸೆ ಹೆಚ್ಚಳ.
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ












Click it and Unblock the Notifications