ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ, ಏಪ್ರಿಲ್‌ನಿಂದ ಜಾರಿ
ಬೆಂಗಳೂರು, ಮಾ.2 : ಕರ್ನಾಟಕದ ಜನರಿಗೆ ವಿದ್ಯುತ್ ಶಾಕ್ ಕಾದಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪ್ರತಿ ಯೂನಿಟ್‌ಗೆ 13 ರಿಂದ 20 ಪೈಸೆ ತನಕ ದರ ಹೆಚ್ಚಳವಾಗಲಿದೆ.
ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಅವರು ದರ ಏರಿಕೆ ಬಗ್ಗೆ ಮಾಹಿತಿ ನೀಡಿದರು. ಎಸ್ಕಾಂಗಳ ಮನವಿಯಂತೆ ದರ ಏರಿಕೆ ಮಾಡುತ್ತಿರುವುದಾಗಿ ತಿಳಿಸಿದರು.

ಎಲ್ಲಾ 5 ಎಸ್ಕಾಂಗಳಿಗೆ ಅನ್ವಯಾಗುವಂತೆ ಪ್ರತಿ ಯೂನಿಟ್ ವಿದ್ಯುತ್ ದರವನ್ನು 13 ರಿಂದ 20 ಪೈಸೆ ಹೆಚ್ಚಿಸಲಾಗಿದೆ. ಏಪ್ರಿಲ್ 1ರಿಂದ ನೂತನ ದರ ಜಾರಿಗೆ ಬರಲಿದ್ದು, ಮೇ ತಿಂಗಳಿನಲ್ಲಿ ಬರುವ ಬಿಲ್‌ನಲ್ಲಿ ಹೊಸ ದರ ಅನ್ವಯವಾಗಿರುತ್ತದೆ ಎಂದು ಶ್ರೀನಿವಾಸಮೂರ್ತಿ ಹೇಳಿದರು. [ವಿದ್ಯುತ್ ದರ ಹೆಚ್ಚಳ ಮಾಡಿ : ಎಸ್ಕಾಂ ಮನವಿ]
ವಿದ್ಯುತ್ ಸರಬರಾಜು ಕಂಪನಿಗಳಾಗದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಚೆಸ್ಕಾಂ ಡಿಸೆಂಬರ್‌ನಲ್ಲಿ ವಿದ್ಯುತ್ ದರ ಏರಿಕೆ ಮಾಡುವಂತೆ ಕೆಇಆರ್‌ಸಿಗೆ ಮನವಿ ಸಲ್ಲಿಸಿದ್ದವು. ಪ್ರತಿ ಯೂನಿಟ್‌ಗೆ ಕನಿಷ್ಠ 80 ಪೈಸೆ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದ್ದವು. ಹಿಂದೆ 2014ರ ಮೇನಲ್ಲಿ 32 ಪೈಸೆ ದರ ಹೆಚ್ಚಳ ಮಾಡಲಾಗಿತ್ತು. [ಕೆಇಆರ್ ಸಿ ವೆಬ್ ಸೈಟ್ ನೋಡಿ]
ದರ ಏರಿಕೆ ಎಲ್ಲಿ ಎಷ್ಟು?
* 101-200 ಯುನಿಟ್ - 5.40
* 201ಕ್ಕಿಂತ ಹೆಚ್ಚು - 6.40 [ನಗರದ ಪ್ರದೇಶದಲ್ಲಿ]
ಗ್ರಾಮೀಣ ಪ್ರದೇಶ
*101-200 ಯುನಿಟ್ 5.10 ರೂ.
*201ಕ್ಕಿಂತ ಹೆಚ್ಚು - 5.40
ಬಿಬಿಎಂಪಿ ವ್ಯಾಪ್ತಿಯಲ್ಲಿ
* 0-50 ಯುನಿಟ್ 6.95 ರೂ.
ಕೈಗಾರಿಕೆ
* ಮೊದಲ 1 ಲಕ್ಷ ಯುನಿಟ್ - 5.90 ರೂ.
* 1 ಲಕ್ಷ ಮೇಲ್ಪಟ್ಟು - 6.30 ರೂ.












Click it and Unblock the Notifications