Kerala Onam: ಕರ್ನಾಟಕ KSRTC ಬಸ್ ಫುಲ್ ರಷ್, ಎಲ್ಲ ಸೀಟುಗಳು ಬುಕ್ಕಿಂಗ್
ಬೆಂಗಳೂರು, ಆಗಸ್ಟ್ 25: ಕೇರಳ ರಾಜ್ಯ ಪ್ರಸಿದ್ಧ ಹಬ್ಬಗಳಲ್ಲಿ ಒಂದಾಗಿರುವ ಓಣಂ (Onam) ಮುಂದಿನ ವಾರ ಇರುವುದರಿಂದ ಈ ವಾರಾಂತ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಬಸ್‌ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಎಲ್ಲ ಬಸ್‌ಗಳು ರಷ್ ಆಗಿದ್ದು, ನಾ ಮುಂದು ತಾಮುಂದು ಎಂದು ಟಕೆಟ್ ಬುಕ್ ಮಾಡಲಾಗಿದೆ.
'ಓಣಂ' ಹಬ್ಬದಾಚರಣೆಗೆ ಸಂಬಂಧ ರಾಜ್ಯ ರಾಜದಾನಿ ಬೆಂಗಳೂರಿನಲ್ಲಿ ನೆಲೆಸಿರುವ ಕೇರಳಿಗರು ಇದೇ ವಾರಾಂತ್ಯದಲ್ಲಿ (ಆಗಸ್ಟ್ 25) ಮನೆಗೆ ತೆರಳುತ್ತಿದ್ದಾರೆ. ಗುಂಪು ಗುಂಪಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ, ಯಶವಂತಪುರ, ಸ್ಯಾಟ್ ಲೈಟ್ ಸೇರಿದಂತೆ ವಿವಿಧ ಬಸ್‌ನಿಲ್ದಾಣಗಳಲ್ಲಿ ಕೇರಳಿ ಮಂದಿ ಊರಿಗೆ ತೆರಳಲು ಜಮಾಯಿಸಿದ್ದರು.

ಕರ್ನಾಟಕದ ಎಲ್ಲ ಸರ್ಕಾರಿ ಬಸ್‌ಗಳ ತುಂಬಿ ತುಳುಕುತ್ತಿದ್ದು, ಬಹುತೇಕ ಎಲ್ಲ ಸೀಟುಗಳು ಬುಕ್ ಆಗಿವೆ. ಬಸ್ ಗಳಿಗೆ ಬಾರಿ ಬೇಡಿಕೆ ಸಹ ಬಂದಿವೆ. ಈ ಬೇಡಿಕೆಯನ್ನು ಪೂರೈಸಲು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೆಚ್ಚುವರಿ 70 ತಾತ್ಕಾಲಿಕ ಮಾರ್ಗಗಳನ್ನು ಒಳಗೊಂಡಂತೆ ಕೇರಳದ ವಿವಿಧ ಸ್ಥಳಗಳಿಗೆ ಸಂಚಾರ ಸೇವೆ ಕಲ್ಪಿಸುತ್ತಿವೆ.
ಕೇರಳ-ಕರ್ನಾಟಕ ರಿಟರ್ನ್ ಟಿಕೆಟ್ ಸಹ ಬುಕ್
ಈ ವಾರ ಮಾತ್ರವಲ್ಲದೇ ಮರಳಿ ಬೆಂಗಳೂರಿಗೆ ಮುಂದಿನ ವಾರಾಂತ್ಯದ ಬರುವವರು ಸಹ ಈಗಲೇ ರಿಟರ್ನ್ ಟ್ರಿಪ್‌ಗಳ ಟಿಕೆಟ್‌ಗಳನ್ನು ಸಹ ಬುಕ್ ಮಾಡಿದ್ದಾರೆ. ಹಬ್ಬದ ಬಳಿಕ ಮುಂದಿನ ವಾರವು ಕೇರಳದಿಂದ ಕರ್ನಾಟಕಕ್ಕೆ ಬರುವ ಸರ್ಕಾರಿ ಬಸ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ. ರಿಟನ್ ಟಿಕೆಟ್‌ಗಳು ಸಹ ವೇಗವಾಗಿ ಬುಕ್ ಆಗುತ್ತಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮಾಹಿತಿ ನೀಡಿದೆ.

ಕೇರಳದ ಎರ್ನಾಕುಲಂ, ಕೋಝಿಕ್ಕೋಡ್, ತ್ರಿಶೂರ್ ಮತ್ತು ಪಾಲಕ್ಕಾಡ್ ಸ್ಥಳಗಳಿಗೆ ಹೆಚ್ಚು ಟಿಕೆಟ್ಗಳು ಬುಕ್ ಆಗಿವೆ. ಹಬ್ಬದ ಸೀಸನ್ (ಋತು) ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಟಿಕೆಟ್ ದರವನ್ನು ಶೇಕಡಾ 10ರಷ್ಟು ದರ ಏರಿಕೆ ಮಾಡಿದೆ. ಐರಾವತ್ ಕ್ಲಬ್ ಕ್ಲಾಸ್ ಮತ್ತು ಅಂಬಾರಿ ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.
ಟಿಕೆಟ್ ಬುಕ್ಕಿಂಗ್ 2 ವಾರದ ಹಿಂದೆ ಆರಂಭ
ಇನ್ನೂ ವಾರಾಂತ್ಯದ ಬಸ್‌ಗಳ ಟಿಕೆಟ್ ಬುಕ್ಕಿಂಗ್ 15 ದಿನಗಳ ಹಿಂದೆಯೇ ಆರಂಭವಾಗಿದೆ. ಸೀಮಿತ ಫ್ಲೀಟ್‌ನಿಂದಾಗಿ ಮೊದಲ ಕೆಲವು ದಿನಗಳಲ್ಲಿ ಅಂಬಾರಿ ಬಸ್‌ಗಳಲ್ಲಿ ಸೀಟುಗಳನ್ನು ಕಾಯ್ದಿರಿಸಲಾಗಿದ್ದರೆ, ಐರಾವತ್ ಕ್ಲಬ್ ಕ್ಲಾಸ್ ಬಸ್‌ಗಳು ನಂತರ ಬುಕ್ ಆಗಲಿವೆ. ಈ ಬಾರಿ ಕೇರಳದಲ್ಲಿ ಹೆಚ್ಚು ವರಿ ಸ್ಥಳಗಳಿಗೆ ಬಸ್ ಬಿಡಲಾಗಿದೆ. ಹೀಗಾಗಿ ಇನ್ನೂ ಕೆಲವು ಟಿಕೆಟ್‌ಗಳು ಬುಕ್ ಆಗಬೇಕಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸಾಮಾನ್ಯ ದಿನಗಳಲ್ಲಿ KSRTC ಸುಮಾರು 15-20 ಬಸ್‌ಗಳು ಕೇರಳಕ್ಕೆ ಸಂಚಾರ ನಡೆಸುತ್ತವೆ. ಅದರಲ್ಲಿ ಎರಡು ಬಸ್‌ಗಳು ಎರ್ನಾಕುಲಂಗೆ, ಮೂರು ತ್ರಿಶೂರ್‌ಗೆ ದೈನಂದಿನ ಕಾರ್ಯಾಚರಣೆ ನಡೆಸುತ್ತೆವೆ. ಇವುಗಳಲ್ಲಿ ಕೆಲವು ಬಸ್‌ಗಳು ಗುರುವಾರ ಕೇರಳಕ್ಕೆ ತೆರಳಿದ್ದರೆ, ಓಣಂ ರಶ್ ದೃಷ್ಟಿಯಿಂದ KSRTCಗೆ ಶುಕ್ರವಾರ ಅತ್ಯಂತ ಹೆಚ್ಚು ಪ್ರಯಾಣಿಕರನ್ನು ನೋಡುವ ದಿನವಾಗಿದೆ. ಕಾರಣ ವಾರಾಂತ್ಯವಾಗಿದ್ದರಿಂದ ಶನಿವಾರ ಮತ್ತು ಭಾನುವಾರ ರಜೆ ಇರುವುದರಿಂದ ಮುಂದಿನ ವಾರದ ಹಬ್ಬ ಅರಂಭ ಹಿನ್ನೆಲೆ ಬಹುತೇಕ ಕೇರಳಿಗರು ಶುಕ್ರವಾರವೇ ಬೆಂಗಳೂರ ಬಿಡುತ್ತಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications