ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿ ಬ್ಯಾಗ್ ನಲ್ಲಿ ಮದ್ಯದ ಬಾಟಲ್! ಸಿಕ್ಕಿಬಿದ್ದ ಶಿಕ್ಷಕರು!

|
Google Oneindia Kannada News

ಕೊಳಿಕೊಡೆ, ಮಾರ್ಚ್ 08: ತಮ್ಮ ಬಳಿ ಇದ್ದ ಮದ್ಯದ ಬಾಟಲ್ ಗಳನ್ನು ಶಿಕ್ಷಕರು ವಿದ್ಯಾರ್ಥಿಗಳ ಬ್ಯಾಗಿನಲ್ಲಿ ಅಡಗಿಸಿಟ್ಟು, ಪಾಲಕರ ಬಳಿ ಸಿಕ್ಕಿಬಿದ್ದ ಘಟನೆ ಕೇರಳದ ಕೊಳಿಕೊಡೆಯ ಚೆಂಬಕದವುನಲ್ಲಿರುವ ಯುಪಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಘಟನೆ ಮಾ.3 ರಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯ ಮಕ್ಕಳನ್ನು ಕನ್ನೂರಿನ ವಿಸ್ಮಯ ಪಾರ್ಕಿಗೆ ಪ್ರವಾಸಕ್ಕೆಂದು ಕರೆದೊಯ್ಯಲಾಗಿತ್ತು. ಇಲ್ಲಿಂದ ವಾಪಸ್ಸಾಗುವಾಗ ಶಿಕ್ಷಕರು ಮದ್ಯದ ಬಾಟಲ್ ಖರೀದಿಸಿದ್ದರು. ಸಿಕ್ಕಿಬಿದ್ದರೆ ಎಂಬ ಭಯದಲ್ಲಿ ಈ ಬಾಟಲ್ ಅನ್ನು ಒಬ್ಬ ವಿದ್ಯಾರ್ಥಿಯ ಬ್ಯಾಗಿನಲ್ಲಿ ಬಚ್ಚಿಟ್ಟಿದ್ದರು.

Kerala: 3 teachers to face probe for hiding liquor in student's bag

ಕೇರಳ ಬಜೆಟ್: ಮದ್ಯದ ಮೇಲಿನ ತೆರಿಗೆ ಶೇ. 200ರಷ್ಟು ಏರಿಕೆ

ರೂಟಿನ್ ಚೆಕ್ ಸಮಯದಲ್ಲಿ ವಿದ್ಯಾರ್ಥಿಗಳಿದ್ದ ವಾಹನವನ್ನು ತಡೆದ ಪೊಲೀಸರಿಗೆ ವಿದ್ಯಾರ್ಥಿಯ ಬ್ಯಾಗಿನಲ್ಲಿ ಬಾಟಲಿಗಳು ಸಿಕ್ಕಿವೆ. ಆದರೆ ಮದ್ಯದ ಪ್ರಮಾಣ ಕಡಿಮೆ ಇದ್ದಿದ್ದರಿಂದ ಯಾವ ಶಿಕ್ಷಕರ ಮೇಲೂ ಪ್ರಕರಣ ದಾಖಲಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಈ ಕುರಿತು ಕೇರಳ ಶಿಕ್ಷಣ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಶಿಕ್ಷಕರನ್ನು ವಿಚಾರಣೆ ನಡೆಸುತ್ತಿದೆ.

English summary
3 teachers of a government school in Kozhikode's Chembukadavu in Kerala are under the scanner for hiding liquor bottles in the bag of a student.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X