KEA: ಯುಜಿಸಿಇಟಿ, ಯುಜಿನೀಟ್ 2025 ಅಭ್ಯರ್ಥಿಗಳು ಗಮನಿಸಿ: ಅಣಕು ಫಲಿತಾಂಶ ಪ್ರಕಟ, ಈ ದಿನ ಅಂತಿಮ ಫಲಿತಾಂಶ..
ಬೆಂಗಳೂರು, ಜುಲೈ 26: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಯುಜಿ (UGCET) ಮತ್ತು ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಬಯಸಿದ್ದ ರಾಷ್ಟ್ರೀಯ ಅರ್ಹ ಮತ್ತು ಪ್ರವೇಶ ಪರೀಕ್ಷೆ ಅಭ್ಯರ್ಥಿಗಳ (UGNEET-25) ಸೀಟು ಹಂಚಿಕೆಯ ಅಣಕು ಫಲಿತಾಂಶಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ವೆಬ್‌ಸೈಟ್‌ನಲ್ಲಿ https://cetonline.karnataka.gov.in/kea/ugcet2025 ಪ್ರಕಟಿಸಿದೆ. ಕೂಡಲೇ ಈ ಮಾಹಿತಿ ಪರಿಶೀಲಿಸಿಕೊಳ್ಳುವಂತೆ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದರು.
UGCET/UGNEET-2025 ಅಣಕು ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಎಲ್ಲ ಅಭ್ಯರ್ಥಿಗಳು ಕೂಡಲೇ KEA ವೆಬ್‌ಸೈಟ್‌ನಲ್ಲಿ ಅಣಕು ಹಂಚಿಕೆ ಸ್ಥಿತಿಯನ್ನು ಪರಿಶೀಲಿಸಬಹುದು. ಈ ಅಣಕು ಹಂಚಿಕೆ ಫಲಿತಾಂಶವು 2025 ಜುಲೈ 22 ರಂದು ಸಂಜೆ 6 ಗಂಟೆಯವರೆಗೆ ಅಭ್ಯರ್ಥಿಗಳು ನಮೂದಿಸಿದ ಆಯ್ಕೆಗಳ ಅರ್ಹತೆ, ರೋಸ್ಟರ್ ವ್ಯವಸ್ಥೆಯನ್ನು ಆಧರಿಸಿದೆ.

ಇದು ವೈದ್ಯಕೀಯ, ದಂತ, ಎಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ, http://B.Sc. ನರ್ಸಿಂಗ್, ಬಿ.ಫಾರ್ಮ್, ಫಾರ್ಮಾ-ಡಿ, ಬಿಪಿಟಿ, ಬಿಪಿಒ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳ ಪ್ರವೇಶವನ್ನು ಒಳಗೊಂಡಿದೆ. ಅಭ್ಯರ್ಥಿಗಳು ಆಂತಿಮ ಫಲಿತಾಂಶ ಬಿಡುಗಡೆ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದಾರೆ.
ಇನ್ಣೂ ಆಯುರ್ವೇದ, ಯುನಾನಿ, ಪ್ರಕೃತಿ ಚಿಕಿತ್ಸೆ, ಯೋಗ ಮತ್ತು ಹೋಮಿಯೋಪತಿ ಕೋರ್ಸ್‌ಗಳಿಗೆ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಬಂದಿಲ್ಲ. ಆದ್ದರಿಂದ ಈ ಕಾರ್ಯಕ್ರಮಗಳಿಗೆ ಆಯ್ಕೆ ನಮೂದನ್ನು ಸಕ್ರಿಯಗೊಳಿಸಲಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯ ನಿರ್ವಾಹಕ ನಿರ್ದೇಶ ಎಚ್.ಪ್ರಸನ್ನ ಅವರು ಮಾಹಿತಿ ನೀಡಿದರು.
ಅಭ್ಯರ್ಥಿಗಳು ಜುಲೈ 26 ರಂದು ಮಧ್ಯಾಹ್ನ 12 ಗಂಟೆಯಿಂದ 2025 ಜುಲೈ 29ರಂದು ಸಂಜೆ 5 ಗಂಟೆಯವರೆಗೆ ಮೊದಲ ಸುತ್ತಿನ ಹಂಚಿಕೆಗೆ ತಮ್ಮ ಆಯ್ಕೆಗಳನ್ನು ಸೇರಿಸಲು ಅವಕಾಶ ನೀಡಲಾಗಿದೆ. ಆಯ್ಕೆ ಸೇರಿಸಬಹುದು, ಅಳಿಸಬಹುದು ಅಥವಾ ಮರುಕ್ರಮಗೊಳಿಸಬಹುದು ಎಂದು ಹೇಳಿದರು.
ಅಂತಿಮ ಫಲಿತಾಂಶ ಬಿಡುಗಡೆ ಯಾವಾಗ?
ತಾತ್ಕಾಲಿಕ ಸೀಟು ಹಂಚಿಕೆ ಅಂತಿಮ ಫಲಿತಾಂಶಗಳನ್ನು ಆಗಸ್ಟ್ 1 ರಂದು ಬೆಳಗ್ಗೆ 11 ಗಂಟೆಗೆ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಒಟ್ಟಾರೆ ಸೀಟು ಹಂಚಿಕೆಯ ಅಂತಿಮ ಫಲಿತಾಂಶಗಳನ್ನು ಆಗಸ್ಟ್ 2 ರಂದು ಮಧ್ಯಾಹ್ನ 2 ಗಂಟೆಗೆ ಬಿಡುಗಡೆ ಮಾಡಲಾಗುವುದು ಎಂದರು.
ಅಭ್ಯರ್ಥಿಗಳಿಗೆ ಸೀಟು ಹಂಚಿಕೆಯಾದ ಬಳಿಕ ಆಯ್ಕೆ ಪ್ರಕ್ರಿಯೆಗೆ ಆಗಸ್ಟ್ 4 ರಿಂದ ಆಗಸ್ಟ್ 7 ರವರೆಗೆ ಅಂತಿಮ ಸಮಯ ನೀಡಲಾಗಿರುತ್ತದೆ. ಫಲಿತಾಂಶಗಳು ಮತ್ತು ನವೀಕರಣಗಳನ್ನು ವೀಕ್ಷಿಸಲು https://kea.kar.nic.in ಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದರು.












Click it and Unblock the Notifications