KSET 2025: ಕೆಸೆಟ್ ಕೀ ಉತ್ತರಗಳು ಪ್ರಕಟ, ಆಕ್ಷೇಪಣೆ ಸಲ್ಲಿಕೆಗೆ ಗಡುವು, ಅಂತಿಮ ಫಲಿತಾಂಶ ಯಾವಾಗ?
ಬೆಂಗಳೂರು, ನವೆಂಬರ್ 4: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನವೆಂಬರ್ 2ರಂದು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET)-2025ರ ಪರೀಕ್ಷೆ ನಡೆಸಿತ್ತು. ಒಟ್ಟು 11 ಜಿಲ್ಲೆಗಳಲ್ಲಿ ನಡೆದ ಪರೀಕ್ಷೆಯಲ್ಲಿ 1.21 ಲಕ್ಷ ಅಭ್ಯರ್ಥಿಗಳು (ಶೇಕಡಾ 90) ಹಾಜರಾಗಿದ್ದರು. ಪರೀಕ್ಷೆ ಬೆನ್ನಲ್ಲೆ ಇದೀಗ KSET ಕೀ ಉತ್ತರಗಳನ್ನು ಕೆಇಎ ಬಿಡುಗಡೆ ಮಾಡಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ ನೀಡಿದೆ.
ಒಟ್ಟು 34 ವಿಷಯಗಳಿಗೆ ಕೆ-ಸೆಟ್ ಪರೀಕ್ಷೆ ನಡೆದಿದೆ. ಒಟ್ಟು 1.34 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. 316ಕೇಂದ್ರಗಳಲ್ಲಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದೆ. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಜಾಲತಾಣಗಳಲ್ಲಿ https://cetonline.karnataka.gov.in/kea/kahvs ಕೀ ಉತ್ತರ ನೋಡಬೇಕು. ಇದು ತಾತ್ಕಾಲಿಕ ಕೀ ಉತ್ತರಗಳು ಆಗಿವೆ. ಅಭ್ಯರ್ಥಿಗಳ ತಾತ್ಕಾಲಿಕ ಉತ್ತರಕೀ ಉತ್ತರಗಳನ್ನು ಪರಿಶೀಲಿಸಬೇಕು. ತಪ್ಪುಗಳು ಅಥವಾ ಆಕ್ಷೇಪಣೆಗಳಿದ್ದರೆ ನವೆಂಬರ್ 6 ರಂದು ಗುರುವಾರ ಮಧ್ಯಾಹ್ನ 3.00 ಗಂಟೆಯೊಳಗೆ ಆನ್‌ಲೈನ್ ಮೂಲಕ ಸಲ್ಲಿಸಬಹುದು. ಆಕ್ಷೇಪಣೆ ಸಲ್ಲಿಸಲು KEA ವೆಬ್‌ಸೈಟ್‌ನ ([https://cetonline.karnataka.gov.in/keaobjections/forms/login.aspx) ಲಿಂಕ್ ಮೂಲಕ ಸಲ್ಲಿಸಬೇಕು ಎಂದು ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕರು.

ಅಭ್ಯರ್ಥಿಗಳು ತಾವು ಆಕ್ಷೇಪಣೆ ಸಲ್ಲಿಸುವ ಪ್ರಶ್ನೆಯ ಪೂರಕ ದಾಖಲೆಗಳೊಂದಿಗೆ PDF ರೂಪದಲ್ಲಿ ಸಮರ್ಥನೆ ಸಲ್ಲಿಸಬೇಕು. ಪ್ರತಿಯೊಂದು ಪ್ರಶ್ನೆಯ ಆಕ್ಷೇಪಣೆಗೆ ರೂ.50/- ಶುಲ್ಕವನ್ನು ವಿಧಿಸಲಾಗಿದೆ. ತಪ್ಪು ದೃಢಪಟ್ಟಲ್ಲಿ ತಪ್ಪಿದ ಮೊತ್ತವನ್ನು ಹಿಂತಿರುಗಿಸಲಾಗುವುದಿಲ್ಲ ಎಂದು ಹೇಳಿದರು.
ಪ್ರಾಧಿಕಾರ ಪ್ರಕಟಿಸಿದ ಪಟ್ಟಿಯ ಪ್ರಕಾರ ಒಟ್ಟು 34 ವಿಷಯಗಳಿಗೆ ಕೀ ಉತ್ತರಗಳು ಪ್ರಕಟಗೊಂಡಿವೆ. ಕಾಮರ್ಸ್, ಕನ್ನಡ, ಇಂಗ್ಲಿಷ್, ರಾಜಕೀಯ ವಿಜ್ಞಾನ ಇತಿಹಾಸ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಶಿಕ್ಷಣ, ಮನೋವಿಜ್ಞಾನ, ಕಾನೂನು, ಗಣಿತ, ಕಂಪ್ಯೂಟರ್ ಸೈನ್ಸ್, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಂಗೀತ, ದೃಶ್ಯಕಲೆ ಸೇರಿದಂತೆ ವಿವಿಧ ವಿಷಯಗಳ ತಾತ್ಕಾಲಿಕ ಕೀ ಉತ್ತರಗಳು ಲಭ್ಯವಿವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಾತ್ಕಾಲಿಕ ಕೀಉತ್ತರಗಳು, ಆಕ್ಷೇಪಣೆ ಸಲ್ಲಿಕೆ ಇತರ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಿದೆ. ಹೆಚ್ಚಿನ ಮಾಹಿತಿಗೆ, ಅಪ್ಡೇಟ್‌ಗೆ ಅಭ್ಯರ್ಥಿಗಳು ಕೆಇಎ ಜಾಲತಾಣ ಪರಿಶೀಲಿಸುವಂತೆ ತಿಳಿಸಲಾಗಿದೆ.
ಕೆಸೆಟ್ 2025: ಪ್ರಮುಖ ದಿನಾಂಕಗಳು
* ಕೆಸೆಟ್ 2025 ಪರೀಕ್ಷೆಯ ದಿನಾಂಕ: ನವೆಂಬರ್ 2
* ಕೀಉತ್ತರ ಪ್ರಕಟ: ನವೆಂಬರ್ 4
* ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 6 (ಮಧ್ಯಾಹ್ನ 3 ಗಂಟೆ)
* ಶುಲ್ಕ: ರೂ.50/- ಪ್ರತಿ ಪ್ರಶ್ನೆಗೆ
* ಅಧಿಕೃತ ವೆಬ್‌ಸೈಟ್ ಲಿಂಕ್: https://kea.kar.nic.in
* ಹೆಚ್ಚಿನ ಮಾಹಿತಿಗೆ ಇದೇ ಲಿಂಕ್‌ಗೆ ಭೇಟಿ ನೀಡಬೇಕು.












Click it and Unblock the Notifications