ಸರ್ಕಾರದಿಂದ ಮತ್ತೊಂದು ಶಾಕ್: ಇಂಜಿನಿಯರಿಂಗ್ ಸೀಟುಗಳ ಶುಲ್ಕ ಶೇ.10 ರಷ್ಟು ಹೆಚ್ಚಳ
ಬೆಂಗಳೂರು, ಜೂನ್ 16: ಕೋವಿಡ್ ಪಿಡುಗಿನ ನಂತರ ನಿಂತರವಾಗಿ ಎಲ್ಲವುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಕರ್ನಾಟಕದ ರಾಜ್ಯದ ಜನರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಕೋರ್ಸುಗಳ ಸೀಟುಗಳ ಬೆಲೆ ಹೆಚ್ಚಿಸಿ ಹೊಸ ಶಾಕ್‌ವೊಂದನ್ನು ನೀಡಿದೆ.
ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರವು ನೆನ್ನೆ ಗುರುವಾರ ಜೂನ್ 15 ರಂದು ಸಿಇಟಿ ಫಲಿತಾಂಶ ಪ್ರಕಟಿಸಿತ್ತು. ಅದರ ಬೆನ್ನಲ್ಲೆ ಆದೇಶ ಹೊರಡಿಸಿರುವ ಪ್ರಾಧಿಕಾರ, ಖಾಸಗಿ ಇಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯುವ ಹಾಗೂ ಕಾಮೆಡ್ ಕೆ ಕೋಟಾದಡಿ ಇಂಜಿನಿಯರಿಂಗ್ ಸೀಟುಗಳ ಮೇಲೆ ಶೇಕಡಾ 10ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ.

ಅಡುಗೆ ಎಣ್ಣೆ, ಅಗತ್ಯ ವಸ್ತುಗಳು, ಅಡುಗೆ ಅನಿಲ ಮತ್ತು ಇಂಧನ ದರ ಹೆಚ್ಚಳ ಇನ್ನೂ ಇತ್ತಿಚೆಗೆ ವಿದ್ಯುತ್ ದರ ಏರಿಕೆಗೆ ತತ್ತರಿಸಿರುವ ಜನರಿಗೆ ಇದೀಗ ಇಂಜಿನಿಯರಿಂಗ್ ಸೀಟಿನ ಶುಲ್ಕ ಶೇಕಡಾ 10ರಷ್ಟು ಹೆಚ್ಚಳವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಕ್ಕಳನ್ನು ಇಂಜಿನಿಯರ್ ಮಾಡುವ ಕನಸು ಹೊತ್ತ ಅದೆಷ್ಟೋ ಪೋಷಕರು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ.
ಉನ್ನತ ಶಿಕ್ಷಣ ಸಚಿವರ ಸಮರ್ಥನೆ ಏನು?
ಈ ಕುರಿತು ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಎಂ.ಸಿ ಸುಧಾಕರ್ ಅವರು, ಇಂಜಿನಿಯರಿಂಗ್ ಸೀಟುಗಳ ಸರ್ಕಾರಿ ಕೋಟಾದಡಿ ಸರ್ಕಾರಿ ಸೀಟುಗಳ ಶುಲ್ಕವನ್ನು ಶೇಕಡಾ 10ರಷ್ಟು ಹೆಚ್ಚಿಸಲಾಗಿದೆ. ಆದರೆ ಇದು ಕಾಂಗ್ರೆಸ್ ಅವಧಿಯಲ್ಲಿ ಆದ ಶುಲ್ಕ ಏರಿಕೆ ಅಲ್ಲ. ಇದು ಹಿಂದಿದ್ದ ಬಿಜೆಪಿ ಸರ್ಕಾರದಲ್ಲಿ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಅವರು ಹೇಳಿದರು.
ಹಿಂದಿನಿ ಬಿಜೆಪಿ ಸರ್ಕಾರದ ಮಾಡಿದ ಇಂಜಿನಿಯರಿಂಗ್ ಸೀಟಿನ ಶುಲ್ಕ ಹೆಚ್ಚಳದ ನಿಯಮಾನುಸಾರ ನಿರ್ಧಾರವನ್ನು ಇಂದಿನ ಕಾಂಗ್ರೆಸ್ ಸರ್ಕಾರಿ ಪುನಃ ಪರಿಷ್ಕರಿಸಿ ಇಳಿಕೆ ಮಾಡುವ ಅಥವಾ ಹಿಂಪಡೆಯುವ ಯಾವ ಪ್ರಶ್ನೆಯು ನಮ್ಮ ಮುಂದಿಲ್ಲ. ಶೀಘ್ರವೇ ಹೆಚ್ಚಳ ಶುಲ್ಕದ ಮಾಹಿತಿ ಪ್ರಕಟಿಸಲಾಗುವುದು ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಜನರಿಗೆ ಹೊರೆ, ಸಮಾಜಕ್ಕೆ ಧಕ್ಕೆ ಹೆಸರಿನಲ್ಲಿ ಬಿಜೆಪಿ ತಂದ ಕಾಯ್ದೆ ಕಾನೂನುಗಳನ್ನು ರದ್ದು ಮಾಡುವ ಕಾಂಗ್ರೆಸ್ ಸರ್ಕಾರ, ಜನರಿಗೆ ಆರ್ಥಿಕ ಹೊರೆಯಾಗುವ ಈ ಸೀಟುಗಳ ಶುಲ್ಕ ಹೆಚ್ಚಳವನ್ನು ಹಿಂಪಡೆಯಲು ಒಲವು ತೋರದೇ ಮುಂದುವರೆಸುವ ಬಯಕೆ ಹೊಂದಿದೆ. ಕಾರಣ ಸರ್ಕಾರ ಗ್ಯಾರಂಟಿಗಳಿಗೆ ಹಣದ ಅಗತ್ಯತೆ ಇದೆ ಎಂದು ಅನೇಕ ಕೆಲವು ಪೋಷಕರು ಅಸಮಾಧಾನ ಹೊರ ಹಾಕಿದ್ದಾರೆ.
ಸಿಇಟಿ: 2ಲಕ್ಷ ಮಂದಿಗೆ ಅರ್ಹತೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್ ಸೇರಿದಂತೆ ಒಟ್ಟು ಏಳು ವಿವಿಧ ವೃತ್ತಿಪರ ಕೋರ್ಸ್‌ಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಪ್ರವೇಶಕ್ಕೆ ನಡೆಸಿದ್ದ 2023ನೇ ಸಾಲಿನ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಗುರುವಾರ ಪ್ರಕಟಿಸಿದೆ. ಪರೀಕ್ಷೆಗೆ ಒಟ್ಟು 2,44 ಲಕ್ಷ ಮಂದಿ ಹಾಜರಾಗಿದ್ದರು. ಆ ಪೈಕಿ 2.03ಲಕ್ಷ ಮಂದಿ ಅರ್ಹತೆ ಹೊಂದಿದ್ದಾರೆ. ಈ ಸಿಇಟಿ ಆರು ವಿಭಾಗಗಳಲ್ಲಿ ಆರು ಮಂದಿ ಬೆಂಗಳೂರಿನವರೇ ಟಾಪರ್ ಆಗಿದ್ದಾರೆ ಎಂದು ಕೆಇಎ ತಿಳಿಸಿದೆ.












Click it and Unblock the Notifications