UGNEET ಕೌನ್ಸೆಲಿಂಗ್ ಅಭ್ಯರ್ಥಿಗಳು ಗಮನಿಸಿ: ಸೀಟುಗಳ ರದ್ದತಿಗೆ ಹೊಸ ರೂಲ್ಸ್; ಯಾರಿಗೆ ದಂಡ ಇಲ್ಲ?
ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ -ಪದವಿ ಪೂರ್ವ 2026 ( UGNEET)ಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಕೆಲವರು ಆ ಸೀಟುಗಳನ್ನು ರದ್ದುಪಡಿಸಿಕೊಳ್ಳಲು ಕೋರಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ( KEA) ಕೆಲವು ಷರತ್ತುಗಳ ಆಧಾರದ ಮೇಲೆ ರದ್ದತಿಗೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಮೆಡಿಕಲ್ ಕೌನ್ಸೆಲಿಂಗ್ ಸಮಿತಿ (MCC) ಹಾಗೂ ಇತರ ರಾಜ್ಯಗಳಲ್ಲಿ ಸೀಟು ಹಂಚಿಕೆಯಾದವರು ಪ್ರಾಧಿಕಾರದ ಕೌನ್ಸೆಲಿಂಗ್ ನಿಂದ ಹೊರ ಹೋಗಲು ಸೆಪ್ಟೆಂಬರ್ 20ರಂದು ಸಂಜೆ 5ಗಂಟೆವರೆಗೆ ಅವಕಾಶ ನೀಡಲಾಗಿದೆ. ಕೌನ್ಸೆಲಿಂಗ್ ಹೊರ ಹೋಗುವ ಅಭ್ಯರ್ಥಿಗಳಿಗೆ ಯಾವುದೇ ದಂಡ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಆದರೆ ಎಂಸಿಸಿ ಕೌನ್ಸೆಲಿಂಗ್ ನಲ್ಲಿ ಸೀಟು ಹಂಚಿಕೆಯಾಗದಿರುವ ಅಭ್ಯರ್ಥಿಗಳು ಈ ಸುತ್ತಿನ ಸೀಟು ರದ್ದುಪಡಿಸಿಕೊಳ್ಳಬೇಕಿದ್ದರೆ 10,000 ರೂಪಾಯಿ ದಂಡ ಕಟ್ಟಿ ರದ್ದುಮಾಡಿಸಿಕೊಳ್ಳಬಹುದು. ಇಂತಹ ಅಭ್ಯರ್ಥಿಗಳಿಗೆ ಆಸಕ್ತಿ ಇದ್ದಲ್ಲಿ ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವುದಕ್ಕೂ ಅವಕಾಶ ನೀಡಲಾಗಿದೆ. ದಂಡ ಕಟ್ಟಬೇಕಾದವರು ಖುದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಚೇರಿಗೆ ಬಂದು ಇಲ್ಲಿಂದಲೇ ರದ್ದು ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟ್ ಅಥವಾ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.
ಇತ್ತೀಚೆಗೆ ಅಂತಿಮ ಫಲಿತಾಂಶ ಪ್ರಕಟ
ಎಮ್‌ಸಿಸಿ ಮತ್ತು ಕೆಇಎ ಎರಡೂ ಕೌನ್ಸಿಲಿಂಗ್‌ನಲ್ಲಿ ಹಂಚಿಕೆ ಮಾಡಿಕೊಂಡಿರುವ ಹಾಗೂ ಎಂಸಿಸಿ ಮೂಲಕ ಹಂಚಿಕೆಯಾದ ಸೀಟಿಗೆ ಪ್ರವೇಶ ಪಡೆಯಲು ಇಚ್ಛಿಸಿದ ಅಭ್ಯರ್ಥಿಗಳಿಗೆ ಸಾಕಷ್ಟು ಕಾಲಾವಕಾಶ ಕೊಟ್ಟು ಛಾಯ್ಸ್-4 ಅನ್ನು ಆಯ್ಕೆ ಮಾಡಿ ಕೆಇಎ ಕೌನ್ಸೆಲಿಂಗ್ ನಿಂದ ಹೊರ ಹೋಗಲು ತಿಳಿಸಲಾಗಿತ್ತು. ನಂತರ ಇಂತಹ ಸೀಟುಗಳನ್ನು ಪರಿಗಣಿಸಿ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ನಡೆಸಿ ಅಂತಿಮ ಫಲಿತಾಂಶವನ್ನು ಸೆಪ್ಟೆಂಬರ್ 16 ರಂದು ಪ್ರಕಟಿಸಲಾಗಿರುತ್ತದೆ.
ಮೂರನೇ ಸುತ್ತಿಗೆ ಪರಿಗಣನೆ
ಆದರೂ ಇನ್ನೂ ಕೆಲವು ಅಭ್ಯರ್ಥಿಗಳು ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶದ ನಂತರ ವಿವಿಧ ಕಾರಣಗಳನ್ನು ನೀಡಿ ಎಂಸಿಸಿ ಸೀಟಿಗೆ ಅಥವಾ ಅವರ ರಾಜ್ಯದಲ್ಲಿನ ಸೀಟುಗಳಿಗೆ ಪ್ರವೇಶ ಪಡೆಯವುದಾಗಿ ತಿಳಿಸಿ ಕೆಇಎ ಸೀಟನ್ನು ರದ್ದು ಪಡಿಸಿಕೊಳ್ಳಲು ಕೋರುರಲಾಗಿತ್ತು. ಆದ್ದರಿಂದ ಪ್ರಾಧಿಕಾರವು ಕೆಇಎ ಕೌನ್ಸೆಲಿಂಗ್ ನಿಂದ ಹೊರ ಹೋಗಲು ಸೆಪ್ಟಂಬರ್ 17ರಂದು ಸಂಜೆ 4.00 ರಿಂದ ಸೆಪ್ಟೆಂಬರ್ 20ರ ಸಂಜೆ 5 ಗಂಟೆವರೆಗೆ ಅವಕಾಶ ನೀಡಲಾಗಿದೆ. ಈ ರೀತಿ ರದ್ದುಗೊಳ್ಳುವ ಕೊಳ್ಳುವ ಸೀಟುಗಳನ್ನು ಮೂರನೇ ಸುತ್ತಿಗೆ ಪರಿಗಣಿಸಲಾಗುತ್ತದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
ಇನ್ನೂ ಕೆಲವು ಅಭ್ಯರ್ಥಿಗಳು ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶದ ನಂತರ ವಿವಿಧ ಕಾರಣಗಳನ್ನು ನೀಡಿ ಎಂಸಿಸಿ ಸೀಟಿಗೆ ಅಥವಾ ಅವರ ರಾಜ್ಯದಲ್ಲಿನ ಸೀಟುಗಳಿಗೆ ಪ್ರವೇಶ ಪಡೆಯವುದಾಗಿ ತಿಳಿಸಿ ಕೆಇಎ ಸೀಟನ್ನು ರದ್ದು ಪಡಿಸಿಕೊಳ್ಳಲು ಕೋರುತ್ತಿದ್ದಾರೆ. ಅದರಂತೆ ಷರತ್ತುಗಳ ಅನ್ವಯ,ದಂಡ ಪಾವತಿಸಿಕೊಂಡು ಸೀಟು ರದ್ದತಿಗೆ ಅವಕಾಶ ನೀಡಲಾಗಿದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ.


Click it and Unblock the Notifications
