Kaveri River: ರಾಜ್ಯ ಸರ್ಕಾರ ಒಪ್ಪದೇ ಇದ್ದರೂ ತಮಿಳುನಾಡಿಗೆ ಹರಿಯಲಿದೆ ನೀರು!

ಮುಂಗಾರು ಮಳೆ ಚುರುಕಾಗಿರುವ ಕಾರಣ ರಾಜ್ಯದ ಜಲಾಶಯಗಳಿಗೆ ಒಳಹರಿವು ಉತ್ತಮವಾಗಿದೆ. ಕಳೆದ ವರ್ಷ ಬರಗಾಲದಿಂದ ಕಂಗೆಟ್ಟಿದ್ದ ಜನ ಈ ಬಾರಿ ಜಲಾಶಯ ಬೇಗ ತುಂಬಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಕೆಆರ್ ಎಸ್ ಜಲಾಶಯ ಅರ್ಧ ತುಂಬಿದ್ದು ತುಂಬಿದರೆ ಸಾಕಪ್ಪ ಎನ್ನುವಾಗಲೇ ತಮಿಳುನಾಡಿಗೆ ಜುಲೈ 31 ರವರೆಗೆ ಪ್ರತಿನಿತ್ಯ 1 ಟಿಎಂಸಿ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಸಮಿತಿ ಹೇಳಿದೆ.

ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು ಜುಲೈ 14ರಂದು ಸರ್ವಪಕ್ಷ ಸಭೆ ಕರೆದಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶವನ್ನು ಕಾವೇರಿ ನೀರು ನಿಯಂತ್ರಣ ಸಮಿತಿಯಲ್ಲಿ ಪ್ರಶ್ನಿಸಲು ನಿರ್ಧರಿಸಿದೆ.

kaveri water flow to tamil nadu after heavy rains

ರಾಜ್ಯ ಸರ್ಕಾರ ವಿರೋಧ ಮಾಡಿದರು ತಮಿಳುನಾಡಿಗೆ ನೀರು ಹರಿಯುವುದು ಖಚಿತವಾಗಿದೆ. ಕೇರಳದ ವಯನಾಡಿನಲ್ಲಿ ಮತ್ತೆ ಮಳೆ ಹೆಚ್ಚಾಗಿದ್ದು ಕಬಿನಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಈಗಾಗಲೇ ಕಬಿನಿ ಜಲಾಶಯದಿಂದ 5000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಮಳೆ ಮತ್ತೆ ಹೆಚ್ಚಾಗಿದ್ದು ಮತ್ತಷ್ಟು ನೀರನ್ನು ನದಿಗೆ ಹರಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಒಪ್ಪದೇ ಇದ್ದರೂ ತಮಿಳುನಾಡಿಗೆ ನೀರು ಹರಿಯಲಿದೆ.

11,500 ಕ್ಯೂಸೆಕ್ಸ್ ನೀರು

ಜುಲೈ 31ರವರೆಗೆ ಮೆಟ್ಟೂರು ಜಲಾಶಯಕ್ಕೆ ಪ್ರತಿ ದಿನ 1 ಟಿಎಂಸಿ ನೀರು ಹರಿಸುವಂತೆ ರಾಜ್ಯಕ್ಕೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಕೊಟ್ಟಿದೆ. ಬಿಳಿಗುಂಡ್ಲುವಿನಲ್ಲಿ 11,500 ಕ್ಯೂಸೆಕ್ಸ್ ನೀರು ಹರಿಯುವಂತೆ ನೋಡಿಕೊಳ್ಳಲು ಕೇಳಿದೆ. ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದರೂ ಮಳೆರಾಯನ ಯೋಜನೆ ಬೇರೆ ಇದೆ.

ಈಗಾಗಲೇ ಕಬಿನಿ ಜಲಾಶಯ 96% ತುಂಬಿದ್ದು, ಶನಿವಾರ ಒಳಹರಿವು 14,500 ಕ್ಯೂಸೆಕ್ಸ್‌ಗೆ ಹೆಚ್ಚಾಗಿದೆ. ಹೆಚ್ಚುವರಿ ನೀರನ್ನು ಅನಿವಾರ್ಯವಾಗಿ ನದಿಗೆ ಹರಿಸಬೇಕಿದ್ದು, ತಮಿಳುನಾಡಿಗೆ ಈ ನೀರು ಹರಿಯಲಿದೆ. ರಾಜ್ಯ ಸರ್ಕಾರ ನೀರು ಬಿಡದೇ ಇದ್ದರೂ ತಮಿಳುನಾಡು ಕೇಳಿರುವ ನೀರು ಹರಿಯಲಿದೆ.

ಈಗಾಗಲೇ ಬಿಳಿಗುಂಡ್ಲುವಿನಲ್ಲಿ 4000-5000 ಕ್ಯೂಸೆಕ್ಸ್ ನೀರು ಹರಿವು ಇದ್ದು, ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಹರಿಸಿದರೂ ಸಾಕು ತಮಿಳುನಾಡು ಕೇಳಿರುವಷ್ಟು ನೀರು ಹರಿಯಲಿದೆ. ಮುಂದಿನ ವಾರ ಮುಂಗಾರು ಮತ್ತಷ್ಟು ಚುರುಕಾಗುವ ಸಾಧ್ಯತೆ ಇದ್ದು, ಜಲಾಶಯಕ್ಕೆ ಮತ್ತಷ್ಟು ಒಳಹರಿವು ಹೆಚ್ಚಲಿದೆ.

ಎರಡೂ ರಾಜ್ಯಗಳ ನೀರಿನ ಸಮಸ್ಯೆಗೆ ಮಳೆಯೊಂದೇ ಪರಿಹಾರವಾಗಿದೆ. ಮಳೆರಾಯನ ಕರುಣೆ ಸಿಕ್ಕಿ ಈ ವರ್ಷ ನೀರಿನ ಸಮಸ್ಯೆ ಇಲ್ಲದಾಂತದರೆ ರಾಜ್ಯದ ರೈತರೂ ಕೂಡ ನೆಮ್ಮದಿಯಾಗಿ ಬೆಳೆ ಬೆಳೆದುಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+