ಪ್ರವಾಹ ಪೀಡಿತ ಕಾಶ್ಮೀರದಿಂದ 200 ಕನ್ನಡಿಗರ ರಕ್ಷಣೆ
ಬೆಂಗಳೂರು, ಸೆ. 11 : ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರವಾಹದಲ್ಲಿ 640 ಕನ್ನಡಿಗರು ಸಿಲುಕಿದ್ದು, ಅವರಲ್ಲಿ 200 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಪ್ರಸ್ತುತ ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ ಇಳಿಮುಖವಾಗಿದ್ದು, ಸೇನೆಯು 60,000 ಜನರನ್ನು ರಕ್ಷಿಸಿದ್ದು, ಇವರಲ್ಲಿ ಕನ್ನಡಿಗರು ಸೇರಿರುವ ಸಾಧ್ಯತೆ ಇದೆ ಎಂದು ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹುಬ್ಬಳ್ಳಿ-ಧಾರವಾಡ ಪ್ರಾದೇಶಿಕ ಆಯುಕ್ತರಾದ ರಮಣದೀಪ್ ಮತ್ತು ದೆಹಲಿಯ ಕರ್ನಾಟಕ ಭವನದ ಮೋಹನ್ ಕುಮಾರ್ ಅವರು ಕಾಶ್ಮೀರದಲ್ಲಿ ಕನ್ನಡಿಗರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಮಣದೀಪ್ ಅವರು ಸುಮಾರು 70 ಜನರನ್ನು ಶ್ರೀಗರದಿಂದ ದೆಹಲಿಗೆ ಕಳುಹಿಸಿದ್ದಾರೆ.

200-300 ಕರ್ನಾಟಕದ ಪ್ರವಾಸಿಗರು ಶ್ರೀನಗರದ ರಾಜಭವನದ ಹೆಲಿಪ್ಯಾಡ್‌ನಲ್ಲಿ ಕಾಯುತ್ತಿದ್ದು, ಅವರನ್ನು ಶೀಘ್ರವೇ ದೆಹಲಿಗೆ ಕರೆದುಕೊಂಡು ಬರಲಾಗುತ್ತದೆ. ರಾಜಭವನದ ಹೆಲಿಪ್ಯಾಡ್‌ನಲ್ಲಿರುವ ಕನ್ನಡಿಗರಿಗೆ ನೀರು, ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. [ಕಾಶ್ಮೀರ ಪ್ರವಾಹದಿಂದ ಮರಳಿ ಬಂದ 10 ಕನ್ನಡಿಗರು]
ನವ ದೆಹಲಿಯಿಂದ ಬೆಂಗಳೂರಿಗೆ ವಾಪಸ್‌ಬರಲು ನೆರವು ಬೇಕಾದರೆ ಕರ್ನಾಟಕ ಭವನದ ಅಧಿಕಾರಿಗಳಾದ ಸುಪ್ರಸನ್ನ 9868393971 ಮತ್ತು ಶುಂಭುಲಿಂಗಪ್ಪ 9868393989 ಅವರನ್ನು ಸಂಪರ್ಕಿಸಬಹುದಾಗಿದೆ.[ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಕೊಡಿ]
ಇದುವರೆಗೂ ಪತ್ತೆಯಾಗದ ವ್ಯಕ್ತಿಗಳಿದ್ದರೆ ಅವರ ಹೆಸರು, ವಯಸ್ಸು ಮುಂತಾದ ವಿವರಗಳನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಇಲಾಖೆಯ ಸಹಾಯವಾಣಿಗೆ ತಿಳಿಸಿದಲ್ಲಿ ಅವರ ಪತ್ತೆಗಾಗಿ ಪ್ರಯತ್ನ ನಡೆಸಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.
ನವದೆಹಲಿಯಿಂದ ಬೆಂಗಳೂರಿಗೆ ಬರುವ ಪ್ರವಾಸಿಗರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಕೆ.ವಿ.ರಾಮ 80508313319 ಮತ್ತು ಪ್ರಹ್ಲಾದ್ 9844075683 ಅವರನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications