• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೃದಯಾಘಾತದಿಂದ ಕೆಎಎಸ್ ಅಧಿಕಾರಿ ನಿಧನ

|

ಬೆಂಗಳೂರು, ಜನವರಿ 07: ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಖಾಜಾ ಹುಸೇನ್ ಮಹಮದ್ ಮುಧೋಳ ನಿಧನ ಹೊಂದಿದ್ದಾರೆ. ಗುರುವಾರ ಸಂಜೆ ಗದಗದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ.

ಖಾಜಾ ಹುಸೇನ್ ಮಹಮದ್ ಮುಧೋಳ (38) ಅವರು ಜನವರಿ 6ರ ಬುಧವಾರ ರಾತ್ರಿ ಹೃದಯಾಘಾತದಿಂದಾಗಿ ನಿಧನ ಹೊಂದಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

ಬೇನಾಮಿ ಆಸ್ತಿ ಪತ್ತೆ: ಕೆಎಎಸ್ ಅಧಿಕಾರಿ ಸುಧಾಗೆ ಇಡಿ ಉರುಳು ?

2008ನೇ ಬ್ಯಾಚ್ ಕೆಎಎಸ್ ಅಧಿಕಾರಿ ಖಾಜಾ ಹುಸೇನ್ ಮಹಮದ್ ಮುಧೋಳ ಅವರು ಮೊದಲು ಗದಗ ಜಿಲ್ಲೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಗದಗ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಐಎಎಸ್ ಅಧಿಕಾರಿ ಎಸ್. ಎಸ್. ನಕುಲ್ ಪರಿಚಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಡಿಸೆಂಬರ್ ತಿಂಗಳಿನಲ್ಲಿ ವರ್ಗಾವಣೆಯಾಗಿ ಬಂದಿದ್ದರು. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಗೆ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಐಎಎಸ್ ಮಾಡಿರೋದೆ ಡೌಟು!

ಸದಾಕ್ರಿಯಾಶೀಲ ವ್ಯಕ್ತಿತ್ವದ ಖಾಜಾ ಹುಸೇನ್ ಮಹಮದ್ ಮುಧೋಳ ಸಿಬ್ಬಂದಿಗಳೊಂದಿಗೆ ಆತ್ಮೀಯ ಒಟನಾಟ ಹೊಂದಿದ್ದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಖಾಜಾ ಹುಸೇನ್ ಮಹಮದ್ ಮುಧೋಳ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ಗದಗದಲ್ಲಿ ನಡೆಸಲಾಗಿದೆ.

English summary
2008 batch KAS officer Kaja Hussain Muhammad Mudol died due to heart attack. He is working as deputy director of social welfare department of Bengaluru Rural district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X