Karnataka Dams Water Level: ಇಂದು ಕೆಆರ್‌ಎಸ್ ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ತಿಳಿಯಿರಿ
Karnataka Dam Water Level: ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದಿದೆ. ಈ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆ, ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಅಲ್ಲದೆ, ಈಗಾಗಲೇ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀನವಾಡಿ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಭರ್ತಿಯಾಗಿದ್ದು, ಇಂದು (ಜೂನ್ 30) ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಣೆಯನ್ನ ಸಹ ಮಾಡಿದ್ದಾರೆ. ಹಾಗಾದ್ರೆ ಸೋಮವಾರ ರಾಜ್ಯದಲ್ಲಿನ ಇನ್ನುಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ತಿಳಿಯಿರಿ.
ಕಳೆದ ಕೆಲ ದಿನಗಳಿಂದ ತಗ್ಗಿದ್ದ ಮುಂಗಾರು ಮಳೆ ಆರ್ಭಟ ಇದೀಗ ಮತ್ತೆ ಚುರುಕು ಪಡೆದಿದ್ದು, ಈ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಮತ್ತೊಂದೆಡೆ ಭಾರೀ ಮಳೆಯಿಂದ ಕೆಲ ಜಲಾಶಯಗಳು ಭರ್ತಿಯಾಗಿವೆ. ಇನ್ನೂ ಕಲವು ತುಂಬುವ ಹಂತದಲ್ಲಿವೆ. ಹಾಗಾದರೆ ಇಂದು ಕೆಆರ್‌ಎಸ್, ತುಂಗಾಭದ್ರಾ, ಭದ್ರಾ, ಕಬಿನಿ, ಹೇಮಾವತಿ, ಮಲಪ್ರಭಾ, ಘಟಪ್ರಭಾ, ಹಾರಂಗಿ, ಆಲಮಟ್ಟಿ, ಲಿಂಗನಮಕ್ಕಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂದು ಕಣ್ಣಾಡಿಸಿ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 124.80 ಅಡಿ
* ಒಳಹರಿವು - 46,501 ಕ್ಯೂಸೆಕ್
* ಹೊರಹರಿವು - 21,463 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,278.10 ಅಡಿ
* ಒಳಹರಿವು - 20,469 ಕ್ಯೂಸೆಕ್
* ಹೊರಹರಿವು - 30,000 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಒಟ್ಟು ಸಾಮರ್ಥ್ಯ- 123.8 ಟಿಎಂಸಿ
* ಇಂದಿನ ನೀರಿನ ಮಟ್ಟ - 517.06 ಮೀಟರ್
* ಒಳಹರಿವು - 1,07,081 ಕ್ಯೂಸೆಕ್
* ಹೊರಹರಿವು - 1,07,081 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಒಟ್ಟು ಸಾಮರ್ಥ್ಯ - 105.79 ಟಿಎಂಸಿ
* ಇಂದಿನ ನೀರಿನ ಮಟ್ಟ- 1,622.12 ಅಡಿ
* ಒಳಹರಿವು - 65,182 ಕ್ಯೂಸೆಕ್
* ಹೊರಹರಿವು - 202 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.5 ಅಡಿ
* ಒಟ್ಟು ಸಾಮರ್ಥ್ಯ - 49.45 ಟಿಎಂಸಿ
* ಇಂದಿನ ನೀರಿನ ಮಟ್ಟ - 2,060.90 ಅಡಿ
* ಒಳಹರಿವು - 7,280 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 1,784.5 ಅಡಿ
* ಒಳಹರಿವು - 24,752 ಕ್ಯೂಸೆಕ್
* ಹೊರಹರಿವು - 7,198 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 162 ಅಡಿ
* ಒಳಹರಿವು - 10,193 ಕ್ಯೂಸೆಕ್
* ಹೊರಹರಿವು - 2,867 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಒಟ್ಟು ಸಾಮರ್ಥ್ಯ - 51 ಟಿಎಂಸಿ
* ಇಂದಿನ ನೀರಿನ ಮಟ್ಟ - 2,143.83 ಅಡಿ
* ಒಳಹರಿವು - 14,520 ಕ್ಯೂಸೆಕ್
* ಹೊರಹರಿವು - 1,466 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಒಟ್ಟು ಸಾಮರ್ಥ್ಯ - 37.10 ಟಿಎಂಸಿ
* ಇಂದಿನ ನೀರಿನ ಮಟ್ಟ - 2,916.60 ಅಡಿ
* ಒಳಹರಿವು - 11,808 ಕ್ಯೂಸೆಕ್
* ಹೊರಹರಿವು - 11,858 ಕ್ಯೂಸೆಕ್
10. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಒಟ್ಟು ಸಾಮರ್ಥ್ಯ - 8.5 ಟಿಎಂಸಿ
* ಇಂದಿನ ನೀರಿನ ಮಟ್ಟ - 2,850.83 ಅಡಿ
* ಒಳಹರಿವು - 4,431 ಕ್ಯೂಸೆಕ್
* ಹೊರಹರಿವು - 2,500 ಕ್ಯೂಸೆಕ್
ಒಟ್ಟಿನಲ್ಲಿ ಬಹುತೇಕ ಜಲಾಶಯಗಳ ಒಳಹರಿವು ಹೆಚ್ಚಳ ಆಗುಯತ್ತಿದೆ. ಈ ನಡುವೆಯೇ ಕೆಆರ್‌ಎಸ್ ಜಲಾಶಯ ಮಾತ್ರ ಎಲ್ಲಾ ಬಾರಿಗಿಂತಲೂ ಮುಂಚಿತವಾಗಿ ಭರ್ತಿಯಾಗಿ ಐತಿಹಾಸಿಕ ದಾಖಲೆ ಸೃಷ್ಟಿಸಿದೆ. ಇನ್ನೂ ಕೆಲ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿದ್ದು, ಬಾಗಿನ ಅರ್ಪಣೆಗೆ ಸಜ್ಜಾಗಿ ನಿಂತಿವೆ.












Click it and Unblock the Notifications