Trekking Ban: ಕೊಡಚಾದ್ರಿ, ಕುದುರೆಮುಖ ಸೇರಿ 11 ಚಾರಣಪಥ ಪ್ರವೇಶಿಸುವಂತಿಲ್ಲ, ಸರ್ಕಾರ ಆದೇಶ
ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬ ಹಾಗೂ ವಾರಾಂತ್ಯದ ರಜೆಗಳು ಮತ್ತು ಮುಂಬರಲಿರುವ ಬೇಸಿಗೆ ರಜೆಗಳ ಹಿನ್ನೆಲೆಯಲ್ಲಿ ಯಾರೆಲ್ಲ ಪ್ರಮುಖ ಬೆಟ್ಟಗಳು, ಪ್ರವಾಸಿ ಸ್ಥಳಗಳಲ್ಲಿ ಚಾರಣ ತೆರಳಲು ಮುಂದಾಗಿದ್ದರೋ ಅವರೆಲ್ಲರಿಗೂ ಅರಣ್ಯ ಇಲಾಖೆ ಕಹಿ ಸುದ್ದಿ ನೀಡಿದೆ. ರಾಜ್ಯದ ಪ್ರಮುಖ 11 ಚಾರಣಪಥಗಳ ಪ್ರವೇಶವನ್ನು ಪ್ರವಾಸಿಗರಿಗೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
ಜನವರಿ 14ರಂದು ಅರಣ್ಯ ಇಲಾಖೆ ಹೊರಡಿಸಿರುವ ಆದೇಶ ಪ್ರಕಾರ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ/ಸೋಮೇಶ್ವರ ವನ್ಯಜೀವಿ ಅಭಯಾರಣ್ಯ/ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬೆಂಕಿ ಕಾಲ ಸಮೀಪಿಸುತ್ತಿದೆ. ಅಂದರೆ ಬೇಸಿಗೆ ವೇಳೆ ಬೆಂಕಿ ತಗುಲು ಅಪಾಯ ಇರುತ್ತದೆ. ಈ ಹಿನ್ನೆಲೆಯಲ್ಲಿ ಚಾರಣಿಗರ ಸುರಕ್ಷತೆ ದೃಷ್ಟಿಯಿಂದ ಜನವರಿ 14 ರಿಂದ ಮುಂದಿನ ಆದೇಶದವರೆಗೆ ಚಾರಣಪಥಗಳ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ. ಇದು ಚಾರಣ ಪ್ರಿಯರಿಗೆ ಬೇಸರ ತರಿಸಿದ್ದು, ಅವರ ರಜೆ ಚಾರಣ ಪ್ಲಾನ್ ಉಲ್ಟಾ ಆಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ/ಸೋಮೇಶ್ವರ ವನ್ಯಜೀವಿ ಅಭಯಾರಣ್ಯ/ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಅರಣ್ಯ ಪ್ರದೇಶಗಳ ಸೇರಿ 11 ಚಾರಣ ಪಥಗಳಿಗೆ ನಿರ್ಬಂಧಿಸಿದ ಸೂಚನ ಫಲಕ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಈ ನಿಯಮವನ್ನು ಚಾರಣಿಗರು/ಪ್ರವಾಸಿಗರಿಗೆ/ಸಾರ್ವಜನಿಕರು ಪಾಲಿಸಬೇಕು. ಈ ಆದೇಶಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಜರುಗಿಸಬೇಕೆಂದು ಇಲಾಖೆ ತಿಳಿಸಿದೆ.
ಯಾವೆಲ್ಲ ಚಾರಣಗಳಿಗೆ ಪ್ರವೇಶ ನಿರ್ಬಂಧ
1. ಗಂಡಿಕಲ್ ಚಾರಣ
2. ಕುದುರೆಮುಖ ಚಾರಣ
3. ಕುರಿಂಜಾಲು ಚಾರಣ
4. ವಾಲುಕುಂಜ ಚಾರಣ,-ಎಸ್.ಕೆ. ಬಾರ್ಡರ್
5. ವಾಲಿಕುಂಜ ಚಾರಣ-ಕೆರ್ವಾಶೆ
6. ನರಸಿಂಹ ಪರ್ವತ-ಕಿಗ್ಗ
7. ನರಸಿಂಹ ಪರ್ವತ-ಮಳಂದೂರು
8. ಕೊಡಚಾದ್ರಿ-ವಳೂರು
9. ಕೊಡಚಾದ್ರಿ- ಹಿಡ್ಲುಮನೆ
10. ಬಂಡಾಜೆ-ವೊಳಂಬ್ರ
11. ನೇತ್ರಾವತಿ ಚಾರಣ
Major Trekking destinations like Netravathi Trek, Kudremukha Trek, Kodachadri Trek, Narasimha parvatha trek etc, are closed until further notice by Forest department#bangalore #bengaluru #kudremukha #kodachadri @aranya_kfd @DcfKarkala @Lolita_TNIE @ChristinMP_ pic.twitter.com/MNWIPbi80n
— Karnataka Portfolio (@karnatakaportf) January 14, 2026
ಈ ಮೇಲಿನ ಚಾರಣ ಸ್ಥಳ ಹೊರತುಪಡಿಸಿದರೆ ಇತರ ಪ್ರದೇಶಗಳಲ್ಲಿ ಚಾರಣ ಇರಲಿದೆ. ಪರಿಶೀಲಿಸಿಕೊಂಡು ಹೋಗದರೆ ಒಳಿತು. ಬೇಸಿಗೆ ಹಿನ್ನೆಲೆಯಲ್ಲಿ ಕಾಡ್ಗಿಚ್ಚು ಹತ್ತುವ ಸಾಧ್ಯತೆ ಇರುತ್ತದೆ. ಇದರಿಂದ ಅರಣ್ಯ ಪರಿಸರ ನಾಶವಾಗುವ ಸಂಭವವಿರುತ್ತದೆ. ಹೀಗಾಗಿ ಈ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.












Click it and Unblock the Notifications