ದೆಹಲಿ ಮೃಗಾಲಯದ ಭೀಕರ ಘಟನೆ ಮರುಕಳಿಸದಿರಲಿ

ಬೆಂಗಳೂರು, ಸೆ. 25 : ದೆಹಲಿಯ ಮೃಗಾಲಯದಲ್ಲಿ ಬಾಲಕ ಬಿಳಿ ಹುಲಿಗೆ ಬಾಯಿಗೆ ಸಿಲುಕಿ ಮೃತಪಟ್ಟ ಘಟನೆ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಮೃಗಾಲಯದಲ್ಲಿನ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮುಂದಾಗಿದೆ. ಮೃಗಾಲಯದಲ್ಲಿ ಹೆಚ್ಚಿನ ಭದ್ರತೆ ಅಗತ್ಯವಿದ್ದರೆ ತಕ್ಷಣ ನೀಡಲು ಪ್ರಾಧಿಕಾರ ಮುಂದಾಗಿದೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಕಾರ್ಯದರ್ಶಿ ಆರ್.ಎಸ್.ಸುರೇಶ್ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯದ ಮೃಗಾಲಯದಲ್ಲಿ ಪ್ರವಾಸಿಗರ ಮೇಲೆ ಪ್ರಾಣಿಗಳು ದಾಳಿ ಮಾಡಿದ ಪ್ರಕರಣಗಳು ನಡೆದಿವೆ ಎಂದು ಹೇಳಿದರು. 1992ರಲ್ಲಿ ಬನ್ನೇರುಘಟ್ಟದಲ್ಲಿ 5 ವರ್ಷದ ಮಗು ಹುಲಿ ದಾಳಿಗೆ ತುತ್ತಾಗಿತ್ತು. ಮೈಸೂರು ಮೃಗಾಲಯದಲ್ಲಿ 1996 ಮತ್ತು 98ರಲ್ಲಿ ಪ್ರವಾಸಿಗರ ಮೇಲೆ ಹುಲಿ ದಾಳಿ ಮಾಡಿದ ಪ್ರಕರಣ ನಡೆದಿದೆ ಎಂದ ಸುರೇಶ್ ಹೇಳಿದರು.

ಮೃಗಾಲಯದಲ್ಲಿ ಸಿಬ್ಬಂದಿ ಪ್ರಯಾಣಿಕರ ಸುರಕ್ಷತೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜೊತೆಗೆ ಸಿಸಿಟಿವಿಯನ್ನು ಆಳವಡಿಸಲಾಗಿದ್ದು, ಪ್ರಾಣಿಗಳು ದಾಳಿ ಮಾಡಿದರೆ, ತಕ್ಷಣ ಸಿಬ್ಬಂದಿಗೆ ಮಾಹಿತಿ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಸುರೇಶ್ ತಿಳಿಸಿದರು. ಮೈಸೂರು, ಬಳ್ಳಾರಿ, ಬನ್ನೇರುಘಟ್ಟದಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ ಎಂದರು. [ದೆಹಲಿ ಝೂನಲ್ಲಿ ಶಾಲಾಬಾಲಕನನ್ನು ಕೊಂದ ಬಿಳಿಹುಲಿ]

Zoo

ಮೃಗಾಲಯದಲ್ಲಿರುವ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ತುರ್ತು ಸಂದರ್ಭಗಳಿಗೆ ಅನುಕೂಲವಾಗುವಂತೆ ಮತ್ತು ಬರುವ ಔಷಧಗಳನ್ನು ಪ್ರಾಣಿಗಳಿಗೆ ನೀಡಲು ಬಂದೂಕಿನ ವ್ಯವಸ್ಥೆ ಮಾಡಲಾಗುತ್ತದೆ. ಮೃಗಾಲಯದ ವೈದ್ಯರನ್ನು ತಕ್ಷಣ ಸಂಪರ್ಕಿಸಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಸುರೇಶ್ ಮಾಹಿತಿ ನೀಡಿದರು. ಮೈಸೂರು ಮೃಗಾಲಯದಲ್ಲಿ ಹುಲಿ, ಸಿಂಹವಿರುವ ಸ್ಥಳದಲ್ಲಿ ಮೆಷ್ ಆಳವಡಿಸಲಾಗಿದ್ದು, ದೂರದಿಂದ ಅವುಗಳನ್ನು ನೋಡುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. [ಮೈಸೂರಿನಲ್ಲಿ ಅಮೃತ, ಶಿವನನ್ನು ನೋಡಿ ಬನ್ನಿ]

ಮಂಗಳವಾರ ದೆಹಲಿ ಮೃಗಾಲಯದಲ್ಲಿ ಹನ್ನೆರಡು ವರ್ಷದ ಬಾಲಕ ಹುಲಿಯ ಫೋಟೋ ತೆಗೆಯಲು ಹೋದಾಗ ಆಕಸ್ಮಿಕವಾಗಿ ಹುಲಿ ಇರುವ ಸ್ಥಳಕ್ಕೆ ಜಾರಿ ಬಿದ್ದಿದ್ದ. ತನ್ನ ವಾಸಸ್ಥಳಕ್ಕೆ ಬಂದ ಬಾಲಕನನ್ನು ಬಿಳಿಹುಲಿ ಕೊಂದು ಹಾಕಿತ್ತು. ಬಾಲಕನನ್ನು ರಕ್ಷಿಸುವ ಸಿಬ್ಬಂದಿ ವ್ಯರ್ಥವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+